Lok Sabha Polls: ಯಕ್ಷಗಾನ ವೇಷ ತೊಟ್ಟು ಮತದಾನ ಜಾಗೃತಿ ಮೂಡಿಸಿದ ಉಡುಪಿ ಅಧಿಕಾರಿಗಳು
ಉಡುಪಿ, ಏಪ್ರಿಲ್ 09: ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಅತ್ಯುತ್ತಮವಾಗಿ ಜಾಗೃತಿ ಕಾರ್ಯ ಮೂಡಿಸಿದ ಅಧಿಕಾರಿಗಳಿಗೆ ಚುನಾವಣಾ ಆಯೋಗ ಪಾರಿತೋಷಕವನ್ನು ನೀಡುತ್ತದೆ.
ಉಡುಪಿ ಜಿಲ್ಲೆಯ ಅಧಿಕಾರಿಗಳಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸ್ವತಹ ತಾವೇ ಯಕ್ಷಗಾನದ ಬಗೆಬಗೆಯ ವೇಷಗಳನ್ನು ತೊಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಶ್ರಮಪಟ್ಟು ಗಂಟೆಗಟ್ಟಲೆ ಕುಳಿತು ಯಕ್ಷಗಾನ ವೇಷ ಧರಿಸಿ ಜಾಗೃತಿ ಕಾರ್ಯಕ್ರಮದ ವಿಡಿಯೋಗಳಿಗೆ ಪೋಸ್ಟರ್‌ಗಳಿಗೆ ಪೋಸ್ ನೀಡಿದ್ದಾರೆ.
ಕರಾವಳಿಯ ಪ್ರಸಿದ್ಧ ಜಾನಪದ ಕಲೆಯಾದ ಯಕ್ಷಗಾನದ ಮೂಲಕ ಈಗಾಗಲೇ ಹಲವು ರೀತಿಯಲ್ಲಿ ಮತದಾನದ ಜಾಗೃತಿ ನಡೆಸಲಾಗಿದೆ . ಆದರೆ ಸ್ವತಃ ಅಧಿಕಾರಿಗಳೇ ಯಕ್ಷಗಾನ ವೇಷ ಧರಿಸಿ ಮತದಾನ ಜಾಗೃತಿ ಮೂಡಿಸಿರುವುದು ಇದೇ ಪ್ರಥಮ.
ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರತಿಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಕರಾವಳಿ ಕಾವಲುಪಡೆಯ ಪೊಲೀಸ್ ಅಧೀಕ್ಷಕ ಮಿಥುನ್ ಸ್ವತಹ ಆಸಕ್ತಿಯಿಂದ ಬಡಗುತಿಟ್ಟು ಯಕ್ಷಗಾನ ಶೈಲಿಯ ವೇಷ ಭೂಷಣ ಧರಿಸಿಕೊಂಡದ್ದು ಗಮನ ಸೆಳೆಯಿತು.

ವಿಶ್ವ ಪ್ರಸಿದ್ಧ ಕಾಪು ಬೀಚ್ ಸೇರಿದಂತೆ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈ ಮೂಲಕ ಮತದಾನದ ಮಹತ್ವವನ್ನು ಅಧಿಕಾರಿಗಳು ಸಾರಿದ್ದಾರೆ.ಯಕ್ಷಗಾನ ನಮ್ಮ ದೇಶದ ವಿಶಿಷ್ಟ ಕಲೆಯಾಗಿ ಗುರುತಿಸಿಕೊಂಡಿದ್ದು ಜಿಲ್ಲಾ ಸ್ವೀಪ್ ಕಾರ್ಯಕ್ರಮದ ಭಾಗವಾಗಿ ಈ ಕಲೆಯ ಮೂಲಕ ಜನರನ್ನು ತಲುಪುತ್ತಿದ್ದೇವೆ.
ಯಕ್ಷಗಾನ ಕಲೆಯ ಬಗ್ಗೆ ಹಿಂದಿನಿಂದಲೂ ನಾವು ಕೇಳಿದ್ದು ಇದೀಗ ಸ್ವತಹ ವೇಷ ಧರಿಸಿರುವುದು ಖುಷಿ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಡಗುತಿಟ್ಟು ಯಕ್ಷಗಾನದ ಕೇದೆಗೆ ಮುಂಡಾಸು ಹಾಗೂ ಸ್ತ್ರೀ ವೇಷವನ್ನು ಧರಿಸುವ ಮೂಲಕ ಅಧಿಕಾರಿಗಳು ಕಲೆಗೂ ಗೌರವ ಸಲ್ಲಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications