ಉಡುಪಿಯ ಪಲಿಮಾರು ಶ್ರೀಗಳಿಂದ ಮೋದಿಗೆ ಶುಭ ಸಂದೇಶ

ಉಡುಪಿ, ಮೇ 31:ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅದ್ಭುತ ಪ್ರದರ್ಶನದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೋದಿ ಅವರು ಪ್ರಧಾನಿಯಾಗಿ ನಿನ್ನೆ ಗುರುವಾರ ಮೇ 30ರಂದು ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ, ಹೊಸ ಸರ್ಕಾರ ಸ್ಥಾಪಿಸಿದ್ದಾರೆ. ಇಂದು ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ. ಈ ನಡುವೆ ಪ್ರಧಾನಿ ಮೋದಿ ಅವರಿಗೆ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶುಭ ಹಾರೈಸಿದ್ದಾರೆ.

ದೇಶದ ಸಂಸ್ಕೃತಿಯನ್ನು ಉಳಿಸಿ ಸಂಸ್ಕಾರವನ್ನು ಬೆಳೆಸಿ ಪ್ರಪಂಚದ ಎಲ್ಲ ದೇಶಗಳ ಮನ್ನಣೆಗೆ ಪಾತ್ರರಾದ, ದೇಶಕ್ಕಾಗಿ ಹಗಲಿರುಳು ಕೆಲಸ ಕಾರ್ಯ ಮಾಡುವಂತಹ ದೇಶಪ್ರೇಮಿ, ಅಭೂತಪೂರ್ವವಾದ ಜಯ ಗಳಿಸಿ 2ನೇ ಬಾರಿ ದೇಶದ ಪ್ರಧಾನಮಂತ್ರಿ ಪದವಿಯನ್ನು ಮೋದಿಯವರು ಅಲಂಕರಿಸುತ್ತಿರುವುದು ಸಂತಸ ತಂದಿದೆ ಎಂದು ಪಲಿಮಾರು ಶ್ರೀ ತಿಳಿಸಿದ್ದಾರೆ.

Good wishes from palimarushree to prime minister Narendra Modi

ದೇಶಕ್ಕಾಗಿ ತಮ್ಮನ್ನು ಮುಡುಪಾಗಿಟ್ಟು ರಾಷ್ಟ್ರ ಚಿಂತನೆಯನ್ನು ಮೈಗೂಡಿಸಿಕೊಂಡು ಹಿಂದಿನ ಬಾರಿ ಮಾಡಿದ ದೇಶದ ಅಭಿವೃದ್ಧಿ ಕೆಲಸಗಳು, ಜನಪರ ಯೋಜನೆಗಳಿಗೆ ಭಾರತೀಯರು ಪೂರ್ಣ ಬೆಂಬಲ ನೀಡಿದ್ದಾರೆ. ಈ ಬಾರಿ ಇನ್ನೂ ಹೆಚ್ಚಿನ ದೇಶಸೇವೆ ಮಾಡುವ ಶಕ್ತಿಯನ್ನು ದೇವರು ಮೋದಿ ಅವರಿಗೆ ಅನುಗ್ರಹಿಸಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರನ್ನು ಪ್ರಾರ್ಥಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+