ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಯೋಧ ಹುತಾತ್ಮ

|
Google Oneindia Kannada News

ಶ್ರೀನಗರ, ಮಾರ್ಚ್ 18: ಪಾಕಿಸ್ತಾನೀ ಸೇನೆಯು ಗಡಿನಿಯಂತ್ರಣ ರೇಖೆ ಬಳಿ ಕದನವಿರಾಮ ಉಲ್ಲಂಘಿಸಿದ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ರೈಫಲ್ ಮನ್ ಕರಮಜೀತ್ ಸಿಂಗ್ ಹುತಾತ್ಮರಾಗಿದ್ದಾರೆ.

ಪಾಕಿಸ್ತಾನದಿಂದ ಸತತ ಕದನ ವಿರಾಮ ಉಲ್ಲಂಘನೆ, ಎಚ್ಚರಿಕೆ ನೀಡಿದ ಭಾರತ ಪಾಕಿಸ್ತಾನದಿಂದ ಸತತ ಕದನ ವಿರಾಮ ಉಲ್ಲಂಘನೆ, ಎಚ್ಚರಿಕೆ ನೀಡಿದ ಭಾರತ

ಜಮ್ಮು ಕಾಶ್ಮೀರದ ರಾಜೌರಿಯ ಗಡಿನಿಯಂತ್ರಣ ರೇಖೆ ಬಳಿ ಕೆರಿ ಬಟ್ಟಾಲ್ ಆಫ್ ಸುಂದರ್ಬಾನಿ ಸೆಕ್ಟರ್ ಬಳಿ ಪಾಕ್ ಸೇನೆ ಗುಂಡಿನ ದಾಳಿ ಆರಂಭಿಸಿತ್ತು. ಈ ಸಂದರ್ಭದಲ್ಲಿ ಪ್ರತಿದಾಳಿ ನಡೆಸಿದ ಕರಮಜೀತ್ ಸಿಂಗ್ ಅವರು ಹುತಾತ್ಮರಾದರು.

ಸೇನೆ ಎನ್‌ಕೌಂಟರ್‌ಗೆ ಹಂದ್ವಾರದಲ್ಲಿ ಓರ್ವ ಉಗ್ರ ಬಲಿ, ಮುಂದುವರೆದ ಶೋಧಸೇನೆ ಎನ್‌ಕೌಂಟರ್‌ಗೆ ಹಂದ್ವಾರದಲ್ಲಿ ಓರ್ವ ಉಗ್ರ ಬಲಿ, ಮುಂದುವರೆದ ಶೋಧ

ಪಾಕಿಸ್ತಾನವು ನಿರಂತರವಾಗಿ ಕದನವಿರಾಮ ಉಲ್ಲಂಘನೆ ಮಾಡುತ್ತಿದ್ದು, ಭಾರತದ ಎಚ್ಚರಿಕೆಯನ್ನು ಧಿಕ್ಕರಿಸಿ ಸತತ ಶೆಲ್ ದಾಳಿ ನಡೆಸುತ್ತಿದೆ.

Rifleman Karamjeet Singh has lost his life in ceasefire violation by Pakistan

ಫೆಬ್ರವರಿ 14 ರಂದು ಭಾರತೀಯ ಸೇನೆಯ ನಲವತ್ತಕ್ಕೂ ಹೆಚ್ಚು ಯೋಧರನ್ನು ಬಲಿತೆಗೆದುಕೊಂಡ ಘಟನೆಯ ನಂತರ ಭಾರತ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿ, ದೇಶದೊಳಗೆ ನುಸುಳುವ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡುತ್ತಿದೆ. ಫೆಬ್ರವರಿ 26 ರಂದು ಪಾಕಿಸ್ತಾನದ ಉಗ್ರನೆಲೆಯ ಮೇಲೆ ಭಾರತ ಏರ್ ಸ್ಟ್ರೈಕ್ ನಡೆಸಿದ ನಂತರ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಇಂದು ಸಹ ಕದನ ವಿರಾಮ ಉಲ್ಲಂಘಿಸಿದೆ.

English summary
Rifleman Karamjeet Singh has lost his life in ceasefire violation by Pakistan Army in the firing in Keri Battal of Sunderbani sector along the Line of Control in Rajouri, today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X