J&K Vande Bharat Express Train: ಜಮ್ಮು-ಕಾಶ್ಮೀರದಲ್ಲಿ 49ನೇ 'ವಿಬಿ' ರೈಲು, ಸಂಚಾರ ಯಾವಾಗ?, ಮಾರ್ಗ, ಕಿ.ಮೀ ಮಾಹಿತಿ
ನವದೆಹಲಿ, ಡಿಸೆಂಬರ್ 13: ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ (Vande Bharat Express Train) ಜನಪ್ರತಿಯತೆ ಹೆಚ್ಚಾಗುತ್ತಿದೆ. ಸಾಮಾನ್ಯ ರೈಲುಗಳು ಓಡುವ ಸ್ಥಳಗಳಲ್ಲಿ ಹೊಸದಾಗಿ ಈ ಎಕ್ಸ್‌ಪ್ರೆಸ್ ರೈಲು ಬಿಡಲು ರೈಲ್ವೆ ಸಚಿವಾಲಯ ಯೋಜಿಸಿದೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲು ಸಂಪರ್ಕವನ್ನು ವರ್ಧಿಸುವ ಕಾರ್ಯತಂತ್ರದ ಕ್ರಮದಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸರ್ಕಾರ ಆರಂಭಿಸಲಿದೆ.
ಹೌದು, 49 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ದಿಷ್ಟವಾಗಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕಕ್ಕೆ ನಿಯೋಜಿಸಲಾಗಿದೆ. ಈ ಮೂಲಕ ಈ ಭಾಗದಲ್ಲಿ ರೈಲ್ವೆ ಅಭಿವೃದ್ಧಿಗೊಳ್ಳಲಿದೆ. ಜೊತೆಗೆ ಈ ಪ್ರದೇಶದಲ್ಲಿ ಸಾರಿಗೆ ಮೂಲ ಸೌಕರ್ಯ ಮತ್ತು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವ ಗುರಿ ರೈಲ್ವೆ ಸಚಿವಾಲಯ ಹೊಂದಿದೆ.

ವಂದೇ ಭಾರತ್ ರೈಲುಗಳ ದೇಶದ ಪ್ರತಿ ಮೂಲೆ ಮೂಲೆಗೂ ಸಂಚರಿಸಬೇಕೆಂಬ ಉದ್ದೇಶ ರೈಲ್ವೆ ಇಲಾಖೆ ಹಾಕಿಕೊಂಡಂತಿದೆ. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ 15 ಕಿಲೋ ಮೀಟರ್ ಎಲೆಕ್ಟ್ರಿಕ್ ರೈಲು ಮಾರ್ಗದಲ್ಲಿ ಕಳೆದ ವಾರದ ಉತ್ತರ ರೈಲ್ವೇಯು ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಿತು.
15 ಕಿಮೀ ಮಾರ್ಗದಲ್ಲಿ ಮೊದಲ ಪ್ರಯೋಗ
ಇದು ರಾಂಬನ್ ಜಿಲ್ಲೆಯ ಬನಿಹಾಲ್‌ನಿಂದ ಖಾರಿ ರೈಲು ನಿಲ್ದಾಣದವರೆಗಿನ ಅಂತರವನ್ನು ಒಳಗೊಂಡ ಹದಿನೈದು ಕಿಲೋ ಮೀಟರ್ ಮಾರ್ಗದಲ್ಲಿನ ಮೊದಲ ಪ್ರಯೋಗವಾಗಿದೆ. ಇದು ಯಶಸ್ವಿಯಾಗಿದೆ. ಈ ಪ್ರದೇಶದಲ್ಲಿ ವಿದ್ಯುತ್ ರೈಲುಗಳ ಕಾರ್ಯಸಾಧ್ಯತೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಇದು ಸಹಕಾರಿಯಾಗಿದೆ.

ಶತಾಬ್ದಿ ಎಕ್ಸ್‌ಪ್ರೆಸ್‌ಗೆ ರೈಲಿಗೆ ಹೋಲುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೋಲುವ ಭಾರತೀಯ ರೈಲ್ವೆಯ ಅಡಿಯಲ್ಲಿ ಮಧ್ಯಮ-ದೂರ ರೈಲು ಸೇವೆಯಾಗಿ ಕಾರ್ಯ ನಿರ್ವಹಿಸಲಿದೆ. ಈ ನೂತನ ರೈಲು ಸೇವೆಗಳು 10 ಗಂಟೆಗಳಿಗಿಂತ ಕಡಿಮೆ ದೂರ ಕ್ರಮಿಸುವಷ್ಟು ಅಂತರದ ಎರಡು ಪ್ರಮುಖ ನಗರಗಳನ್ನು ಸಂಪರ್ಕ ಮಾಡುತ್ತದೆ.
ವಂದೇ ಭಾರತ್ ರೈಲಿನ ವೇಗಕ್ಕೆ ಮಿತಿ
ವಂದೇ ಭಾರತ್ ರೈಲುಗಳು ಹೆಚ್ಚು ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದ್ದರು ಸಹಿತ ಹೆಚ್ಚಿನ ನಿಲುಗಡೆ ವೇಗದ ನಿರ್ಬಂಧಗಳು, ಸಂಚಾರ ದಟ್ಟಣೆ ಕಾರಣದಿಂದ ಅವುಗಳ ವೇಗಕ್ಕೆ ಮಿತಿ ಬಿದ್ದಿದೆ. ಗರಿಷ್ಠ ಅನುಮತಿಸುವ ವೇಗವನ್ನು ದೆಹಲಿ-ಭೋಪಾಲ್ ಸೇವಾ ವಿಭಾಗದಲ್ಲಿ 160 km/h (99 mph) ಮತ್ತು ಇತರ ಮಾರ್ಗಗಳಲ್ಲಿ 110-130 km/h (68-81 mph) ಗೆ ಸೀಮಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಉದ್ದೇಶಿತ ಹೊಸದಾಗಿ ಆರಂಭವಾಗಲಿರುವ ಮಾರ್ಗಗಳಲ್ಲಿ ಈ ವಂದೇ ಭಾರತ್ ರೈಲುಗಳು ಪ್ರಭಾವಶಾಲಿ ವೇಗದಲ್ಲಿ ಸಂಚರಿಸಿ ಯಶಸ್ವಿಯಾಗಿವೆ. ಪ್ರತಿ ಗಂಟೆಗೆ 183 ಕಿಮೀ ವರೆಗೂ ತಲುಪುತ್ತದೆ, ಪ್ರಮಾಣೀಕೃತ ವೇಗ ಪ್ರತಿ ಗಂಟೆಗೆ 160 ಕಿಮೀ ಏರಿಕೆ ಆಗಿದೆ.
52 ಸೆಕೆಂಡ್‌ನಲ್ಲಿ 100 ಕಿಮೀ ನಷ್ಟು ವೇಗಕ್ಕೆ ಚಾಲನೆ
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ತ್ವರಿತ ವೇಗ ವರ್ಧನೆ ಮತ್ತು ನಿಧಾನಗೊಳಿಸುವಿಕೆ, ಇದು ಪ್ರಯೋಗಗಳ ಸಮಯದಲ್ಲಿ ಕೇವಲ 52 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 ರಿಂದ 100 ಕಿಮೀ ವೇಗ ಹೆಚ್ಚಿಸುಷ್ಟು ಸಾಮರ್ಥ್ಯ ಪ್ರದರ್ಶಿಸಿದೆ. ವಂದೇ ಭಾರತ್‌ನ ಈ ವಿಶಿಷ್ಟ ಲಕ್ಷಣಗಳು, ದಕ್ಷತೆಯು ಭಾರತೀಯ ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಚುರುಕು ನೀಡಿದಂತಾಗಿದೆ.
ಭಾರತೀಯ ರೈಲ್ವೆ ಇಲಾಖೆಯು ಸದ್ಯ ದೇಶದಲ್ಲಿ ಒಟ್ಟು 33 ವಂದೇ ಭಾರತ್ ರೈಲು ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಹೊಸದಾಗಿ ವಿವಿಧ ಮಾರ್ಗಗಳಲ್ಲಿ 10 ರೈಲುಗಳು ಓಡಲಿವೆ. ಇದರೊಂದಿಗೆ ಇದೀಗ ಜಮ್ಮು ಮತ್ತು ಕಾಶ್ಮೀರ ಕಣಿವೆ ಪ್ರದೇಶದಲ್ಲಿ 49ನೇ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ.












Click it and Unblock the Notifications