• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಿಂದ ಸತತ ಕದನ ವಿರಾಮ ಉಲ್ಲಂಘನೆ, ಎಚ್ಚರಿಕೆ ನೀಡಿದ ಭಾರತ

|

ಜಮ್ಮು ಕಾಶ್ಮೀರ, ಮಾರ್ಚ್ 07: ಭಾರತವು ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕಿಸ್ತಾನವು ಸತತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಗಡಿಯಲ್ಲಿ ಭಾರಿ ಶೆಲ್ ದಾಳಿ ಮಾಡುತ್ತಿದೆ.

ಇಂದು ಎಲ್‌ಓಸಿ ಬಳಿ ಪಾಕಿಸ್ತಾನವು ಸತತ ಶೆಲ್ ದಾಳಿ ಮಾಡಿದೆ ಎಂದು ಭಾರತೀಯ ಸೇನೆ ಹೇಳಿದ್ದು, ಪ್ರತ್ಯುತ್ತರವಾಗಿ ಭಾರತವೂ ಸಹ ದಾಳಿ ನಡೆಸಿದೆ ಎಂದಿದ್ದಾರೆ.

ಸೇನೆ ಎನ್‌ಕೌಂಟರ್‌ಗೆ ಹಂದ್ವಾರದಲ್ಲಿ ಓರ್ವ ಉಗ್ರ ಬಲಿ, ಮುಂದುವರೆದ ಶೋಧ

ಬಾಲಾಕೋಟ್ ದಾಳಿಯ ಬಳಿಕ ಈ ದಾಳಿಗಳು ಹೆಚ್ಚಾಗಿವೆ ಎಂದು ಭಾರತೀಯ ಸೇನೆಯು ಹೇಳಿದ್ದು, ದಾಳಿ ಹೀಗೆ ಮುಂದುವರೆದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಸೇನೆ ಎಚ್ಚರಿಸಿದೆ.

ಪಾಕಿಸ್ತಾನ ಸೇನೆಯು ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿದ್ದು, ಯುದ್ಧ ರೀತಿಯ ಪರಿಸ್ಥಿತಿಯ ನಿರ್ಮಾಣ ಮಾಡಲು ಯತ್ನಿಸುತ್ತಿದೆ. ಭಾರತವೂ ಸಹ ಪಾಕಿಸ್ತಾನದ ಯಾವುದೇ ಪ್ರಯತ್ನಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ತಯಾರಾಗಿದೆ.

English summary
Pakistan continuously violating ceasefire after the Balakote attack. India army said we are ready to face any situation in border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X