ಸುಮ್ನೆ ಬಿಟ್ಬಿಡ್ರಣ್ಣ ಸಾಕು: ಶ್ರೀಲಂಕಾದಲ್ಲಿ‌ ಅಭಿಮಾನಿಗಳಿಗೆ ಕೈಮುಗಿದು ಬೇಡಿಕೊಂಡ ವೈಭವ್ ಸೂರ್ಯವಂಶಿ

Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಬ್ಯಾಟಿಂಗ್ ಮಾಡಿ ಆರೆಂಜ್ ಕ್ಯಾಪ್ ಗೆದ್ದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಕ್ರೇಜ್ ಈಗ ಶ್ರೀಲಂಕಾದಲ್ಲೂ ಜೋರಾಗಿದೆ. ಶ್ರೀಲಂಕಾಗೆ ಎಂಟ್ರಿ ಕೊಡುತ್ತಿದ್ದಂತೆ ವೈಭವ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಸದ್ಯ ಈ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಭಾರತ 'ಎ' ಕ್ರಿಕೆಟ್ ತಂಡವು ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಶುಕ್ರವಾರ ಶ್ರೀಲಂಕಾಕ್ಕೆ ತಲುಪಿದೆ. ತಂಡವು ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಅದರಲ್ಲೂ ಇತ್ತೀಚಿನ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ದಿಗ್ಗಜರ ಗಮನ ಸೆಳೆದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ನೋಡಲು ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದರು. ಅವರೊಂದಿಗೆ ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಭಾರಿ ಉತ್ಸುಕತೆ ತೋರುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Vaibhav Sooryavanshi Receives Grand Welcome in Sri Lanka Fans Rush for Selfies with 15 year old boy

ಭಾರತ ತಂಡವನ್ನು ಮುನ್ನಡೆಸುವವರು ಯಾರು?

ಈ ಮಹತ್ವದ ತ್ರಿಕೋನ ಸರಣಿಯಲ್ಲಿ ಭಾರತ 'ಎ' ತಂಡವನ್ನು ಯುವ ಬ್ಯಾಟರ್ ತಿಲಕ್ ವರ್ಮಾ ಮುನ್ನಡೆಸುತ್ತಿದ್ದಾರೆ. ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದ ರಿಯಾನ್ ಪರಾಗ್ ಅವರು ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಅನುಭವಿ ಆಟಗಾರ ಋತುರಾಜ್ ಗಾಯಕ್ವಾಡ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಜೂನ್ 9ರಿಂದ ಸರಣಿ ಆರಂಭ

ಭಾರತ 'ಎ', ಶ್ರೀಲಂಕಾ 'ಎ' ಮತ್ತು ಅಫ್ಘಾನಿಸ್ತಾನ 'ಎ' ತಂಡಗಳ ನಡುವಿನ ಈ ರೋಚಕ ಸಮರ ಜೂನ್ 9ರಿಂದ ಆರಂಭವಾಗಲಿದ್ದು, ಭಾರತ ತಂಡವು ಮೊದಲ ಪಂದ್ಯದಲ್ಲೇ ಆತಿಥೇಯ ಶ್ರೀಲಂಕಾವನ್ನು ಎದುರಿಸಲಿದೆ. ತ್ರಿಕೋನ ಸರಣಿಯ ಎಲ್ಲಾ ಪಂದ್ಯಗಳು ದಂಬುಲ್ಲಾದಲ್ಲೇ ನಡೆಯಲಿದೆ. ಅದರಲ್ಲೂ ಐಪಿಎಲ್‌ 2026ರಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದ ವೈಭವ್ ಈ ಸರಣಿಯಲ್ಲೂ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ.

ಸರಣಿಯಲ್ಲಿ ಭಾಗವಹಿಸುತ್ತಿರುವ ಮೂರೂ ಭಾರತ 'ಎ', ಶ್ರೀಲಂಕಾ 'ಎ' ಮತ್ತು ಅಫ್ಘಾನಿಸ್ತಾನ 'ಎ' ತಂಡಗಳು ಪರಸ್ಪರ ತಲಾ 2-2 ಪಂದ್ಯಗಳನ್ನು ಆಡಲಿವೆ. ಲೀಗ್ ಹಂತದ ಮುಕ್ತಾಯದ ನಂತರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೊದಲ ಎರಡು ತಂಡಗಳು ಜೂನ್ 21ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಇಂಡಿಯಾ 'ಎ' ತಂಡದ ಪಂದ್ಯಗಳ ವೇಳಾಪಟ್ಟಿ

* ಜೂನ್ 9: Vs ಶ್ರೀಲಂಕಾ 'ಎ'

* ಜೂನ್ 11: Vs ಅಫ್ಘಾನಿಸ್ತಾನ 'ಎ'

* ಜೂನ್ 15: Vs ಶ್ರೀಲಂಕಾ 'ಎ'

* ಜೂನ್ 17: Vs ಅಫ್ಘಾನಿಸ್ತಾನ 'ಎ'

ಜೂನ್ 9ರಂದು ನಡೆಯಲಿರುವ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಮೊದಲ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 11:00 ಗಂಟೆಗೆ ಆರಂಭವಾಗಲಿದೆ. ಭಾರತದಲ್ಲಿ ಈ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (Sony Sports Network) ಚಾನೆಲ್‌ಗಳಲ್ಲಿ ನೇರವಾಗಿ ವೀಕ್ಷಣೆ ಮಾಡಬಹುದು. ಇನ್ನೂ ಯಾವೆಲ್ಲಾ ಚಾನೆಲ್‌ಗಳಲ್ಲಿ ಪಂದ್ಯ ವೀಕ್ಷಣೆ ಮಾಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಯಾವೆಲ್ಲಾ ಚಾನೆಲ್‌ಗಳಲ್ಲಿ ನೇರಪ್ರಸಾರ?

* ಸೋನಿ ಸ್ಪೋರ್ಟ್ಸ್ 1 (Sony Sports 1)

* ಸೋನಿ ಸ್ಪೋರ್ಟ್ಸ್ 3 (Sony Sports 3)

* ಸೋನಿ ಸ್ಪೋರ್ಟ್ಸ್ 4 (Sony Sports 4)

* ಲೈವ್ ಸ್ಟ್ರೀಮಿಂಗ್ (Live Streaming):

ಒಟ್ಟಿನಲ್ಲಿ ಹೇಳುವುದಾದರೆ ಭಾರತ 'ಎ' ತಂಡ ಶ್ರೀಲಂಕಾಗೆ ತಲುಪುತ್ತಿದ್ದಂತೆಯೇ ಎಲ್ಲರ ಗಮನ ಸೆಳೆದ ಆಟಗಾರ ಎಂದರೆ ಬಾಲಕ ವೈಭವ್ ಸೂರ್ಯವಂಶಿ. ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಐಪಿಎಲ್‌ 2026ರಲ್ಲಿ ತೋರಿದ ಅದ್ಭುತ ಪ್ರದರ್ಶನದ ಬಳಿಕ ಎಲ್ಲೆಡೆ ಅವರದ್ದೇ ಚರ್ಚೆಯಾಗಿದೆ. ಇದೀಗ ಅವರು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಮಿಂಚಲು ಸಜ್ಜಾಗಿದ್ದು, ಅವರ ಆಟ ನೋಡಲು ವಿಶ್ವಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಭಾರತ 'ಎ' ತಂಡ: ತಿಲಕ್ ವರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೇಡ್ಗೆ, ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅಂಶುಲ್ ಕಾಂಬೋಜ್, ಅರ್ಷದ್ ಖಾನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+