Highway: ಜಮ್ಮು-ಕಾಶ್ಮೀರದಲ್ಲಿ ಭಾರಿ ಮಳೆ, ಭೂಕುಸಿತಕ್ಕೆ ಹೆದ್ದಾರಿಯೇ ಬ್ಲಾಕ್
ನವದೆಹಲಿ, ಮಾರ್ಚ್ 02: ಭಾರತದ ದಕ್ಷಿಣ ರಾಜ್ಯಗಳಲ್ಲಿ ಅಧಿಕ ತಾಪಮಾನ ದಾಖಲಾಗಿದ್ದರೆ, ಉತ್ತರ ಭಾರತದ ಕೆಲವೆಡೆ ಜೋರು ಮಳೆ ಸುರಿದಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭಾರೀ ಮಳೆ ಬಿದ್ದ ಪರಿಣಾಮ ಅನೇಕ ಕಡೆಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಇದರಿಂದ ಸಂಚಾರಕ್ಕೆ ಭಾರೀ ತೊಂದರೆ ಆದ ಘಟನೆ ಶನಿವಾರ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಗೆ ಭೂಕುಸಿತ ಮತ್ತು ಗುಂಡಿನ ಕಲ್ಲುಗಳ ಚಲನೆಯಿಂದಾಗಿ ಶನಿವಾರ ಬೆಳಗ್ಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯೇ ನೂರಾರು ವಾಹನಗಳ ಸಂಚಾರ ಸ್ಥಗಿತವಾಯಿತು. ಲಾರಿ, ಟ್ರಕ್, ಬಸ್‌ಗಳು ಸೇರಿದಂತೆ ನೂರಾರುವಾಹನಗಳು ಕಿಲೋ ಮೀಟರ್‌ಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದವು ಎಂದು ಪಿಟಿಐ ವರದಿ ಮಾಡಿದೆ.

ಹೆದ್ದಾರಿ ಸಂಚಾರ ನಿರ್ಬಂಧ
ಭಾರತದ ನಾನಾ ಭಾಗಗಳಿಂದ ಕಾಶ್ಮೀರಕ್ಕೆ ಬರುವ ಪ್ರಮುಖ ಹೆದ್ದಾರಿಯಲ್ಲಿಯೇ ಸಂಚಾರ ದಟ್ಟಣೆ ಕಂಡು ಬಂದಿದೆ. ಭಾರೀ ಮಳೆಗೆ ಭೂಕೂಸಿತ ಸಂಭವಿಸಿದ ಪರಿಣಾಮ 270-ಕಿಮೀ ಉದ್ದದ ಹೆದ್ದಾರಿಯನ್ನು ನಶ್ರಿ ಮತ್ತು ಬನಿಹಾಲ್ ನಡುವೆ ಅರ್ಧ ಆರರಿಂದ ಏಳು ಕಡೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿತ್ತು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಏಕಮುಖ ಸಂಚಾರಕ್ಕಾಗಿ ಹೆದ್ದಾರಿಯನ್ನು ತೆರವುಗೊಳಿಸಲು ಅಧಿಕಾರಿಗಳು, ಸಿಬ್ಬಂದಿ ಹಾಗೂ ಜೆಸಿಬಿಯಂತಹ ಹಲವು ಯಂತ್ರಗಳಿಂದ ತೆರವುಗೊಳಿಸಲಾಯಿತು.

ಪ್ರಮುಖ ರಸ್ತೆಗಳಿಗೂ ಹಾನಿ
ಈ ಹೆದ್ದಾರಿಯಲ್ಲಿ ಫೆಬ್ರವರಿ 26 ರಿಂದಲೇ ವಾಹನಗಳ ಸಂಚಾರವನ್ನು ಏಕಮುಖವಾಗಿ ನಿರ್ಬಂಧಿಸಲಾಗಿತ್ತು. ಕಳೆದ ವಾರ ಭಾರೀ ಮಳೆ ಮತ್ತು ಹಿಮಪಾತ ಉಂಟಾದ ಪರಿಣಾಮ ಹಲವು ಸ್ಥಳಗಳಲ್ಲಿ ರಸ್ತೆ ಹಾನಿಗೊಳಗಾಗಿದೆ. ಹೀಗಾಗಿ ಜಮ್ಮು ಮತ್ತು ಶ್ರೀನಗರದಿಂದ ಪರ್ಯಾಯವಾಗಿ ಬಳಸಲಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಶನಿವಾರ ಬೆಳಿಗ್ಗೆ 8.30 ರ ಸುಮಾರಿಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಬನಿಹಾಲ್‌ನಲ್ಲಿ ಅತ್ಯಧಿಕ ಮಳೆ ಅದರೆ 74.4 ಮಿಮೀ ಮಳೆ ದಾಖಲಾಗಿದೆ ಎಂದು ಮಾಹಿತಿ ನೀಡಿದೆ. ಇನ್ನೂ ಒಂದೆರಡು ದಿನ ಈ ಭಾಗದಲ್ಲಿ ಮಳೆ ಸಕ್ರಿಯವಾಗಿರಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಇಲ್ಲಿನ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಸುರಿದರೆ, ಬಯಲು ಸೀಮೆಯ ಭಾಗದ ಮಳೆಯ ದರ್ಶನವಾಗುತ್ತಿದೆ. ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಸ್ಥಳಗಳಲ್ಲಿಯೂ ಈ ಮಳೆ ಮುಂದುವರಿಯುತ್ತದೆ. ಭಾನುವಾರ ಬೆಳಗ್ಗೆ ಹೊತ್ತಿಗೆ ಈ ಅಬ್ಬರದ ಮಳೆ ಪ್ರಯಾಣ ಇಳಿಮುಖವಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications