ಸೇನೆ ಎನ್‌ಕೌಂಟರ್‌ಗೆ ಹಂದ್ವಾರದಲ್ಲಿ ಓರ್ವ ಉಗ್ರ ಬಲಿ, ಮುಂದುವರೆದ ಶೋಧ

ಶ್ರೀನಗರ, ಮಾರ್ಚ್ 7: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ಮತ್ತೆ ತಮ್ಮ ಬಾಲಬಿಚ್ಚಿದ್ದು, ಭದ್ರತಾ ಪಡೆಯ ಎನ್‌ಕೌಂಟರ್‌ಗೆ ಓರ್ವ ಉಗ್ರ ಹತನಾಗಿದ್ದಾನೆ.

ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸೇನೆ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಿದ್ದು, ಸದ್ಯ ಭದ್ರತಾಪಡೆಯು ಶೋಧಕಾರ್ಯವನ್ನು ಕೈಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯು ಓರ್ವ ಉಗ್ರನನ್ನು ಹೊಡೆದುರುಳಿಸಿದೆ. ಇನ್ನು ಉಗ್ರನ ಶೋಧಕಾರ್ಯದ ಹಿನ್ನೆಲೆಯಲ್ಲಿ ಕಣಿವೆಯ ಅಂತರ್ಜಾಲದ ಸೌಲಭ್ಯವನ್ನು ಬಂದ್‌ ಮಾಡಲಾಗಿದೆ.

Security forces gun down militant in encounter in Handwara

ಮೂಲಗಳ ಪ್ರಕಾರ ಸ್ಥಳದಲ್ಲಿ ಮತ್ತೊಬ್ಬ ಉಗ್ರ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಇವರಿಬ್ಬರೂ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು ಎನ್ನಲಾಗಿದೆ.

ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಅದಾದ ಬಳಿಕ ಭಾರತವು ಬಾಲಕೋಟ್‌ ಮೇಲೆ ಪ್ರತಿ ದಾಳಿ ನಡೆಸಿತ್ತು. ಇದಾದ ಬಳಿಕ ಪಾಕಿಸ್ತಾನ ಶಾಂತಿ ನಾಟಕವಾಡಿತ್ತು. ಆದರೂ 50ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿ ತಮ್ಮ ನೀಚ ಬುದ್ಧಿಯನ್ನು ಮತ್ತೊಮ್ಮೆ ಸಾಭೀತುಪಡಿಸಿತ್ತು. ಇದೀಗ ಹಂದ್ವಾರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+