Goods Train: ಚಾಲಕನಿಲ್ಲದೇ ಬರೊಬ್ಬರಿ 70ಕಿ.ಮೀ. ಚಲಿಸಿದ ರೈಲು: ವಿಡಿಯೋ ವೈರಲ್
ನವದೆಹಲಿ, ಫೆಬ್ರವರಿ 27: ತಂತ್ರಜ್ಞಾನ ಯುಗದಲ್ಲಿ ಡ್ರೈವರ್‌ಲೆಸ್ ಟ್ರೈನ್‌ಗಳು ಸೇವೆ ನೀಡುತ್ತಿವೆ. ಆದರೆ ಇಲ್ಲೊಂದು ಚಾಲಕ ಸಹಿತ ರೈಲು ಚಾಲಕನಿಲ್ಲದೇ ಬಹುದೂರ ಸಾಗಿದ ಅಪರೂಪದ ಘಟನೆ ನಡೆದಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿಯೇ ಇದೊಂದು ಗಂಭೀರ ಪ್ರಕರಣ ಎನ್ನಬಹುದು. ಜಮ್ಮು ಮತ್ತು ಕಾಶ್ಮಿರದಲ್ಲಿ ನಡೆದಿದೆ. ಜಲ್ಲಿಕಲ್ಲು ತುಂಬಿದ್ದ ಸರಕು ಸಾಗಣೆ ರೈಲು ಚಾಲಕನಿಲ್ಲದೇ 70 ಕಿಲೋ ಮೀಟರ್ ಪ್ರಯಾಣ ಮಾಡಿದ ಘಟನೆ ಜರುಗಿದೆ. ಸದ್ಯ ಪ್ರಕರಣ ಹೇಗಾಯ್ತು? ಯಾಕಾಯಿತು ಎಂದು ತನಿಖೆಗೆ ಆದೇಶಿಸಿರುವುದಾಗಿ ಭಾರತೀಯ ರೈಲ್ವೇ ಸೋಮವಾರ ಮಾಹಿತಿ ನೀಡಿದೆ.

ಮರದ ದಿಮ್ಮಿಗಳ ಸಹಾಯದಿಂದ ನಿಂತಿದ್ದ ರೈಲು
ಸುಮಾರು 50 ಬೋಗಿಗಳು ಗೂಡ್ಸ್ ಗಾಡಿ ಇದಾಗಿದ್ದು, ಜಮ್ಮು ಮತ್ತು ಕಾಶ್ಮೀರದಿಂದ ಪಂಜಾಬ್ ಕಡೆಗೆ ಹೊರಡಬೇಕಿತ್ತು. ಈ ಉದ್ದೇಶದಿಂದ ಜಲ್ಲಿಕಲ್ಲು ಲೋಡ್ ಮಾಡಲಾಗಿತ್ತು. ಭಾನುವಾರ ಹಳಿಗಳ ಮೇಲೆ ಮರ ದಿಮ್ಮಿಗಳ ಸಹಾಯದಿಂದ ನಿಲ್ಲಿಸಲಾಗಿದ್ದ ಈ ರೈಲು ಯಾವೊಬ್ಬ ಚಾಲಕನಿಲ್ಲದೇ ಸುಮಾರು 70 ಕಿಲೋ ಮೀಟರ್ ತನ್ನಷ್ಟಕ್ಕೆ ತಾನೇ ಸಂಚರಿಸಿದೆ.
ಅಧಿಕಾರ ನಿರ್ಲಕ್ಷೆಯಿಂದ ಹೀಗಾಗಯಿತೆ, ಸೂಕ್ತವಾಗಿ ಮರ ದಿಮ್ಮೆಯಿಂದ ನಿಲ್ಲಿಸಿರಲಿಲ್ಲವೇ, ತಾಂತ್ರಿಕ ದೋಷವಿದೆಯೆ? ಎಂಬೆಲ್ಲ ಆಯಾಮಗಳ ಮೇಲೆ ಕೇಂದ್ರ ರೈಲ್ವೆ ಇಲಾಖೆ ತನಿಖೆ ಕೈಗೊಳ್ಳಲು ಆದೇಶಿಸಿದೆ ಎಂದು ಉತ್ತರ ರೈಲ್ವೆ ವಕ್ತಾರ ದೀಪಕ್ ಕುಮಾರ್ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ.
A Goods train ran 70 Kms without a driver in Punjab. The train wanted to prove that it too has the potential to run without a driver. pic.twitter.com/KnrD0MU65u
— Luv Datta #INC (@LuvDatta_INC) February 25, 2024
ಗಂಟೆಗೆ 100 ಕಿಮೀ ವೇಗ ಸಂಚಾರ
ಈ ಜಲ್ಲಿಕಲ್ಲು ಹೊತ್ತು ರೈಲು ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯವಾಗಿಲ್ಲ. ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಜಮ್ಮುವಿನ ರೈಲು ನಿಲ್ದಾಣದಲ್ಲಿ ಈ ಗೂಡ್ಸ್ ರೈಲು ನಿಲ್ಲಿಸಲಾಗಿದೆ. ರೈಲು ಸಿಬ್ಬಂದಿಯ (ಚಾಲಕ) ಬದಲಾವಣೆ ವೇಳೆ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ರೈಲಿನ ಚಾಲಕ ಮತ್ತು ಅವರ ಸಹಾಯಕ ಇಳಿದ ನಂತರ ಅದು ಇಳಿಜಾರಿನಲ್ಲಿದ್ದ ಕಾರಣ ಚಲಿಸಲು ಆರಂಭಿಸಿತು.
ರಸ್ತೆ ಗೇಟ್ ತುರ್ತು ಬಂದ್‌ಗೆ ಸೂಚನೆ
ಕೂಡಲೇ ತುರ್ತು ಕರೆಗಳ ಮೂಲಕ ರೈಲು ಸಂಚಾರದ ಮಾರ್ಗದಲ್ಲಿನ ಎಲ್ಲ ರಸ್ತೆ ಗೇಟುಗಳನ್ನು ಮುಚ್ಚಲು ಸೂಚಿಸಲಾಯಿತು. ಯಾರೊಬ್ಬ ಸಾರ್ವಜನಿಕರು ಈ ವೇಳೆ ರಸ್ತೆ ದಾಟದಂತೆ ನೋಡಿಕೊಳ್ಳಲಾಯಿತು. ಹೀಗಾಗಿ ಬೃಹತ್ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಭಾರತದ ಕ್ರೀಕಿಂಗ್ ರೈಲು ಜಾಲದಲ್ಲಿ ಆಧುನಿಕ ನಿಲ್ದಾಣಗಳು ಮತ್ತು ಎಲೆಕ್ಟ್ರಾನಿಕ್ ಸಿಗ್ನಲಿಂಗ್ ವ್ಯವಸ್ಥೆಗಳೊಂದಿಗೆ ನೆಟ್ವರ್ಕ್ ಅನ್ನು ನವೀಕರಿಸಲು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದೆ. ಈ ಘಟನೆಯು ಅಧಿಕಾರಿಗಳನ್ನು ಮತ್ತು ಇಲಾಖೆಯನ್ನು ಚಿಂತೆಗೀಡು ಮಾಡುವಂತೆ ಮಾಡಿದೆ.












Click it and Unblock the Notifications