ಮಾರ್ಚ್ 3ರಿಂದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ
ಶಿರಸಿ, ಜನವರಿ 1: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯು ಮಾ. 3ರಿಂದ ಮಾ.11ರವರೆಗೆ ನಡೆಯಲಿದೆ.
ಧರ್ಮದರ್ಶಿ ಮಂಡಳಿ, ಬಾಬುದಾರರು, ಸಾರ್ವಜನಿಕರ ಸಭೆಯಲ್ಲಿ ಜಾತ್ರೆಯ ದಿನಾಂಕ ಹಾಗೂ ಮುಹೂರ್ತವನ್ನು ಘೋಷಿಸಲಾಗಿದೆ. ಮಾ.3ರ ರಾತ್ರಿ 11.11ರಿಂದ 11.18ರ ನಡುವಿನ ಅವಧಿಯಲ್ಲಿ ದೇವಿಯ ಕಲ್ಯಾಣ ಪ್ರತಿಷ್ಠೆ, 4ರ ಬೆಳಿಗ್ಗೆ 7.05ರಿಂದ 7.26ರ ನಡುವೆ ರಥಾರೋಹಣ, 8.19ರಿಂದ ಶೋಭಾ ಯಾತ್ರೆ ನಡೆಯಲಿದೆ.
ಸೇವಾ ಕಾರ್ಯಗಳು ಮಾ.5ರ ಬೆಳಿಗ್ಗೆ 5 ಗಂಟೆಯಿಂದ ಪ್ರಾರಂಭವಾಗುತ್ತವೆ. ಮಾ.8ರ ಬೆಳಿಗ್ಗೆ 10.30 ಗಂಟೆಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜಾತ್ರೆ ಮುಗಿದ ದಿನದಿಂದ ಮಾ.25ರ ಯುಗಾದಿಯಂದು ನಡೆಯುವ ದೇವಿಯ ಪುನರ್ ಪ್ರತಿಷ್ಠಾಪನೆಯವರೆಗೆ ದೇವಾಲಯದ ಬಾಗಿಲು ಮುಚ್ಚಿರುತ್ತದೆ.












Click it and Unblock the Notifications