ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಸಿಗಂದೂರು ಲಾಂಚ್‌ನಿಂದ ನದಿಗೆ ಹಾರಿದ ಮಹಿಳೆ ರಕ್ಷಣೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 27; ಸಿಗಂದೂರು ಲಾಂಚ್‌ನಿಂದ ಶರಾವತಿ ನದಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಾಂಚ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕಾ (46) ಎಂಬ ಮಹಿಳೆ ಭಾನುವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ಪಡೆದು ಮರಳುತ್ತಿದ್ದರು. ಹೊಳೆಬಾಗಿಲು ಕಡೆಯಿಂದ ಕಳಸವಳ್ಳಿ ಕಡೆಗೆ ಲಾಂಚ್ ಹತ್ತಿದ್ದರು.

ಸಿಗಂದೂರು ದೇವಾಲಯದಿಂದ ಭೂಮಿ ಒತ್ತುವರಿ; ವರದಿ ಕೇಳಿದ ಕೋರ್ಟ್ ಸಿಗಂದೂರು ದೇವಾಲಯದಿಂದ ಭೂಮಿ ಒತ್ತುವರಿ; ವರದಿ ಕೇಳಿದ ಕೋರ್ಟ್

ಹೊಳೆಬಾಗಿಲು ಕಡೆಯಿಂದ ಕಳಸವಳ್ಳಿ ಕಡೆಗೆ ಹೊರಟಾಗ ರೇಣುಕಾ ಲಾಂಚ್ ಹತ್ತಿದ್ದರು. ಹೊಳೆಯ ಮಧ್ಯೆ ಭಾಗಕ್ಕೆ ಬರುತ್ತಿದ್ದಂತೆ ದಿಢೀರನೆ ಲಾಂಚ್‌ನಿಂದ ಜಿಗಿದಿದ್ದಾರೆ. ಮಹಿಳೆಯ ಜಿಗಿದಿದ್ದನ್ನು ಗಮನಿಸಿದ ಲಾಂಚ್‌ನ ಪ್ರಯಾಣಿಕರು ಭಯಗೊಂಡಿದ್ದಾರೆ.

Woman Jumped

ಹೇಗಿತ್ತು ರಕ್ಷಣಾ ಕಾರ್ಯ?; ಮಳೆಯಿಂದಾಗಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿದೆ. ಇನ್ನು ಹೊಳೆಯ ಮಧ್ಯ ಭಾಗವಾಗದ್ದರಿಂದ ಆಳವು ಹೆಚ್ಚು. ಹೀಗಿದ್ದು ಲಾಂಚ್‌ನಿಂದ ಮಹಿಳೆಯ ಜಿಗಿಯುತ್ತಿದ್ದಂತೆ ಸ್ಥಳೀಯರಾದ ಪ್ರಕಾಶ್ ಬೆಳಮಕ್ಕಿ ರಕ್ಷಣೆಗೆ ಮುಂದಾಗಿದ್ದಾರೆ. ಇವರಿಗೆ ಲಾಂಚ್ ಸಿಬ್ಬಂದಿ ನೆರವಾಗಿದ್ದಾರೆ.

ಮಹಿಳೆಯ ರಕ್ಷಣೆಗೆ ಮತ್ತು ಪ್ರಕಾಶ್ ಅವರಿಗೆ ಸೇಫ್ಟಿ ಟ್ಯೂಬ್‌ಗಳನ್ನು ನೀರಿಗೆ ಹಾಕಲಾಗಿತ್ತು. ಅಲ್ಲದೆ ಲಾಂಚ್‌ ಅನ್ನು ಮಹಿಳೆ ಬಳಿಗೆ ಕೊಂಡೊಯ್ಯಲಾಯಿತು. ಟ್ಯೂಬ್ ಸಹಾಯ ಮತ್ತು ಪ್ರಕಾಶ್ ನೆರವಿನಿಂದ ರೇಣುಕಾ ರಕ್ಷಣೆ ಮಾಡಲಾಗಿದೆ.

ಸಿಬ್ಬಂದಿಯಿಂದ ಪ್ರಾಥಮಿಕ ಆರೈಕೆ; ರೇಣುಕಾರನ್ನು ಲಾಂಚ್‌ ಮೇಲೆ ಕರೆತಂದು ಪ್ರಾಥಮಿಕ ಆರೈಕೆ ಮಾಡಲಾಯಿತು. ಲೈಫ್ ಜಾಕೆಟ್ ಹಾಕಲಾಯಿತು. ಲಾಂಚ್ ಅನ್ನು ದಡಕ್ಕೆ ತಂದು ರೇಣುಕಾರನ್ನು ಕೂಡಲೆ ಆಸ್ಪತ್ರೆಗೆ ಕಳುಹಿಸಲಾಯಿತು. ಸದ್ಯ ರೇಣುಕಾ ಪ್ರಾಣಾಪಾಯದಿಂದ ಪಾರಾಗಿದ್ದರೆ.

ಸಿಗಂದೂರು ದೇವಾಲಯ ಮುಜರಾಯಿಗೆ; ವಿವಾದಕ್ಕೆ ತೆರೆ ಎಳೆದ ಹಾಲಪ್ಪಸಿಗಂದೂರು ದೇವಾಲಯ ಮುಜರಾಯಿಗೆ; ವಿವಾದಕ್ಕೆ ತೆರೆ ಎಳೆದ ಹಾಲಪ್ಪ

ಸಮಯ ಪ್ರಜ್ಞೆ, ದಿಟ್ಟತನ ಮೆರೆದ ಸಿಬ್ಬಂದಿ; ಮಹಿಳೆ ಲಾಂಚ್‌ನಿಂದ ಜಿಗಿಯುತ್ತಿದ್ದಂತೆ ಸ್ಥಳೀಯರಾದ ಪ್ರಕಾಶ್ ದಿಟ್ಟತನ ತೋರಿಸಿದ್ದಾರೆ. ಕೂಡಲೇ ಹೊಳೆಗೆ ಜಿಗಿದಿದ್ದಾರೆ. ಸ್ಥಳೀಯರಾದ ಪ್ರಶಾಂತ್ ಸಿಗಂದೂರು, ಸುಧಾಕರ್, ಲಾಂಚ್ ಸಿಬ್ಬಂದಿಗಳಾದ ಗಜಕೋಶ, ಮಂಜುನಾಥ, ಬಲರಾಮ, ಜಗದೀಶ್ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಇವರ ದಿಟ್ಟತನ ಮತ್ತು ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಶರಾವತಿ ನದಿಯ ಮಧ್ಯ ಭಾಗಕ್ಕೆ ಜಿಗಿದವರ ರಕ್ಷಣೆಯಾಗಿ, ಪ್ರಾಣ ಉಳಿದಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ವಿಚಾರ ತಿಳಿದು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದಿದ್ದಾರೆ.

English summary
46 year old woman from Haveri jumped to Sharavati river from launch to commit suicide at Sigandur, Shivamogga. Local people and launch crew members rescued her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X