• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ; ಕ್ರಷರ್‌ನಲ್ಲಿ ಭಾರೀ ಸ್ಫೋಟ, ನ್ಯಾಯಾಂಗ ತನಿಖೆಗೆ ಒತ್ತಾಯ

|

ಶಿವಮೊಗ್ಗ, ಜನವರಿ 22: ಗುರುವಾರ ರಾತ್ರಿ 10.30ರ ಸುಮಾರಿಗೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿ ನಡೆದ ಸ್ಫೋಟದ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಕ್ರಷರ್‌ಗೆ ಜಿಲೆಟಿನ್ ಕಡ್ಡಿಗಳನ್ನು ವಾಹನದಲ್ಲಿ ಸಾಗಣೆ ಮಾಡುವಾಗ ಸ್ಫೋಟವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಸಂತಾಪ ಸೂಚಿಸಿದ್ದಾರೆ. ಸ್ಫೋಟದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸಲಾಗುತ್ತದೆ ಎಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸ್ಫೋಟ; ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

ಸ್ವರಾಜ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಘಟಕ ಶಿವಮೊಗ್ಗದ ಹುಣಸೋಡು ಕ್ರಷರ್ ಬಳಿ ನಡೆದ ಸ್ಪೋಟದ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಇದು ದುರಂತಕಾರಿಯಾಗಿದ್ದು ಇದರಲ್ಲಿ ಮೃತಪಟ್ಟ ಅಮಾಯಕ ಕಾರ್ಮಿಕರಿಗೆ ಸಾವಿಗೆ ಸಂತಾಪ ಸೂಚಿಸುತ್ತೇವೆ ಎಂದು ಹೇಳಿದೆ. ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.

ಶಿವಮೊಗ್ಗ ಸ್ಫೋಟ; ಸಿಗರೇಟು ಸೇದುತ್ತಿದ್ದ ಕಾರ್ಮಿಕರು!

ಶಿವಮೊಗ್ಗ ನಗರದ ಹೊರವಲಯದ ಹುಣಸೋಡು, ಗೆಜ್ಜೇನಳ್ಳಿ, ಜಕಾತಿಕೊಪ್ಪ ಮತ್ತು ಅಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಶಕಗಳಿಂದಲೂ ಅಕ್ರಮವಾಗಿ ಕಲ್ಲು ಕೌರಿಗಳು ನಡೆಯುತ್ತಲೆ ಇವೆ. ರಾಜಕರಣಿಗಳು, ಕೆಲವು ಪುಡಿ ರೌಡಿಗಳು, ಕೆಲವು ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ನೇರವಾಗಿ ಮತ್ತು ಬೇನಾಮಿಯಾಗಿ ಕಷರ್‌ಗಳನ್ನು ನಡೆಸುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.

ಶಿವಮೊಗ್ಗ; ಸ್ಫೋಟ ನಡೆದ ಪ್ರದೇಶದಲ್ಲಿವೆ ಸುಮಾರು 50 ಕ್ರಷರ್

ಕೆಲವೆಡೆ ನೂರಾರು ಅಡಿಯಷ್ಟು ಆಳದವರೆಗೂ ಹೊಂಡಗಳನ್ನು ತೆಗೆದು ಡೈನಾಮೆಂಟ್ ಮೂಲಕ ಸ್ಪೋಟಗೊಳಿಸಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದು ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆ ಗಮನದಲ್ಲೂ ಇತ್ತು.

ಸಾರ್ವಾಜನಿಕರು ಪ್ರತಿಭಟನೆ ಮಾಡಿದಾಗಲೆಲ್ಲಾ ನೆಪಮಾತ್ರಕ್ಕೆ ಗಣಿಗಾರಿಕೆ ಮಾಡಿದವರಿಗೆ ನೋಟಿಸ್ ಕೊಡುವುದು ನಂತರ ಹೆದರಿಸಿ ಹಫ್ತಾ ವಸೂಲಿ ಮಾಡುವ ಚಾಳಿ ಬೆಳಿಸಿಕೊಂಡ ಈ ಮೇಲಿನ ಇಲಾಖೆಗಳು ನಿಷ್ಕ್ರಿಯ ವಾಗಿವೆ ಎಂದು ಪಕ್ಷ ದೂರಿದೆ.

ಒಂದೊಮ್ಮೆ ಅಪ್ಪಿ ತಪ್ಪಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾದರೂ ಕೆಡಿಪಿ ಸಭೆಗಳಲ್ಲಿ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ನಗರದ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಆಗುತ್ತದೆ. ಗಣಿಗಾರಿಕೆಗೆ ತೊಂದರೆ ನೀಡಬೇಡಿ ಎಂದು ಅಕ್ರಮ ಗಣಿಗಾರಿಕೆಯವರನ್ನು ರಕ್ಷಣೆ ಮಾಡುತ್ತಾರೆ. ಇದರ ಹಿಂದೆ ಈ ರಾಜಕರಣಿಗಳ ಹಿಂದಿರುವ ಗುತ್ತಿಗೆದಾರರು ಮತ್ತು ಅಕ್ರಮ ಕಲ್ಲುಗಣಿಗಾರಿಕೆಯವರ ಹಿತಾಸಕ್ತಿ ಅಡಗಿದೆ ಎಂದು ಪಕ್ಷ ಹೇಳಿದೆ.

ಅಸ್ಸಾಂ , ಬಿಹಾರ, ಉತ್ತರ ಪ್ರದೇಶದಿಂದ ಕರೆತರುವ ಕಾರ್ಮಿಕರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ. ಕಾರ್ಮಿಕ ಕಾನೂನಿನ ಅನುಸಾರ ಸಂಬಳವಾಗಲಿ, ಕೆಲಸದ ಅವಧಿ, ಸವಲತ್ತುಗಳು ಇಲ್ಲ. ಕಾರ್ಮಿಕ ಇಲಾಖೆಯು ಇಲ್ಲಿನ ಅಕ್ರಮ ಗಣಿಗಾರಿಕೆಯವರ ಬೆಂಬಲಿಕ್ಕಿದೆ.

ಲೋಡ್ ಗಟ್ಟಲೆ ಜಿಲೆಟಿನ್ ಕಡ್ಡಿ ಮತ್ತು ಸ್ಪೋಟಕಗಳು ನಗರಕ್ಕೆ ಬಂದರು ಗೊತ್ತಾಗುವುದಿಲ್ಲವೆಂದರೆ ಇಲ್ಲಿ ಬೆಲಿಯೇ ಎದ್ದು ಹೊಲ ಮೇಯುತ್ತಿದೆ. ಗುರುವಾರ ನಡೆದ ಸ್ಪೋಟ ಇಡೀ ಮಲೆನಾಡಿಗರನ್ನು ಬೆಚ್ಚಿಬಿಳಿಸಿದೆ. ಜನರು ಆತಂಕದಲ್ಲಿ ಬದುಕುವಂತಾಗಿದೆ. ಅಮಾಯಕ ಕಾರ್ಮಿಕರು ಬಲಿಯಾಗಲು ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣವಾಗಿದೆ.

ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸ್ಥಳೀಯರು ಅಕ್ರಮ ಕ್ರಷರ್ ಮತ್ತು ಗಣಿಗಾರಿಕೆ ವಿರುದ್ದ ದಾವೆ ಹೂಡಿದ್ದರು. ಆ ದಾವೆಯ ಆದೇಶವನ್ನು ಜಿಲ್ಲಾಡಳಿತ ಅನುಸರಿಸಿಲ್ಲ. ಸ್ಫೋಟ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಈ ಅನಾಹುತಕ್ಕೆ ಕಾರಣರಾದ ಕ್ರಷರ್ ಮತ್ತು ಗಣಿಗಾರಿಕೆ ಮಾಲೀಕರನ್ನು ಬಂಧಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

English summary
Gelatin sticks blast took place at a railway crusher site in Shivamogga. Swaraj India party demand for judicial probe of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X