• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬಿಜೆಪಿ ವಿರುದ್ಧ ಹೋರಾಡದಿದ್ದರೆ, ದೇಶವನ್ನೇ ಮಾರುತ್ತಾರೆ': ಗೋವಾದಲ್ಲಿ ಮಮತಾ

|
Google Oneindia Kannada News

ಪಣಜಿ, ಅಕ್ಟೋಬರ್‌ 29: ತೃಣಮೂಲ ಕಾಂಗ್ರೆಸ್‌ ಗೋವಾದಲ್ಲಿ ಮುಂದಿನ ಚುನಾವಣೆಗೂ ಮುನ್ನ ಒಂದು ರಾಜಕೀಯ ಸ್ಥಾನಮಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋವಾದಲ್ಲಿ ಗುರುವಾರದಿಂದ ಪ್ರವಾಸ ಆರಂಭ ಮಾಡಿದ್ದಾರೆ.

ಗೋವಾದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, "ಬಿಜೆಪಿಯ ವಿರುದ್ಧ ಹೋರಾಟ ಮಾಡಲು ತೃಣಮೂಲ ಕಾಂಗ್ರೆಸ್‌ ಗೋವಾ ರಾಜ್ಯಕ್ಕೆ ಬಂದಿದೆ. ನಾವು ಬಿಜೆಪಿ ವಿರುದ್ಧ ಹೋರಾಟ ಮಾಡದಿದ್ದರೆ, ಬಿಜೆಪಿಗರು ದೇಶವನ್ನು ಮಾರಾಟ ಮಾಡುತ್ತಾರೆ," ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.

ಗೋವಾ ಚುನಾವಣೆ: ಟೆನ್ನಿಸ್‌ ತಾರೆ ಲಿಯಾಂಡರ್‌ ಪೇಸ್‌ ಟಿಎಂಸಿ ಸೇರ್ಪಡೆಗೋವಾ ಚುನಾವಣೆ: ಟೆನ್ನಿಸ್‌ ತಾರೆ ಲಿಯಾಂಡರ್‌ ಪೇಸ್‌ ಟಿಎಂಸಿ ಸೇರ್ಪಡೆ

ಗೋವಾದಲ್ಲಿ ತನ್ನ ಭಾಷಣದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಗೋವಾ ಸಂಸ್ಕೃತಿ, ಸಂಗೀತ ಹಾಗೂ ಜಾತಿ ವಿಭಜನೆಯ ಬಗ್ಗೆ ಪ್ರಸ್ತಾಪ ಮಾಡಿದರು. "ನಾವು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪನೆ ಮಾಡಿದ್ದೇವೆ. ಬಿಜೆಪಿಯು ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡುವುದನ್ನು ನಾವು ತಡೆಯಬೇಕಾಗಿದೆ," ಎಂದರು.

"ಬಿಜೆಪಿಯ ವಿರುದ್ಧ ನಾವು ಈಗ ಹೋರಾಟ ನಡೆಸುವುದು ಅತೀ ಮುಖ್ಯ. ನಾವು ಈಗ ಬಿಜೆಪಿಯ ವಿರುದ್ಧವಾಗಿ ಹೋರಾಟ ಮಾಡದಿದ್ದರೆ, ಮುಂದೆ ಬಿಜೆಪಿಯು ದೇಶವನ್ನು ಮಾರಾಟ ಮಾಡುವ ಮೂಲಕ ನಾಶ ಮಾಡುತ್ತದೆ. ನಾನು ಗೋವಾಕ್ಕೆ ಬರುವಾಗ ನನಗೆ ಕಪ್ಪು ಬಾವುಟವನ್ನು ತೋರಿಸಿದ್ದಾರೆ. ಆದರೆ ನಾನು ನಮಸ್ತೆ ಎಂದು ಹೇಳಿದ್ದೇನೆ. ಬೇರೆ ಏನನ್ನು ಹೇಳಿಲ್ಲ," ಎಂದು ಗುರವಾರ ಗೋವಾಕ್ಕೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

"ನಾವು ಬಿಜೆಪಿಯ ವಿರುದ್ಧ ಹೋರಾಟ ಮಾಡುವುದು ಮುಖ್ಯವಾಗಿದೆ. ಆದ್ದರಿಂದ ನಾವು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪನೆ ಮಾಡಿದ್ದೇವೆ. ನಾವು ಹೋರಾಟ ಮಾಡಲು ಸಾಧ್ಯವಾಗದಿದ್ದರೆ, ಅವರು ದೇಶವನ್ನು ನಾಶ ಮಾಡುತ್ತಾರೆ. ದೇಶವನ್ನು ಬಿಜೆಪಿಯವರು ಮಾರಾಟ ಮಾಡುತ್ತಾರೆ," ಎಂದು ಪುನರುಚ್ಛರಿಸಿದರು.

'ಗೋವಾ ಚುನಾವಣೆಯಲ್ಲಿ ಟಿಎಂಸಿ ಉತ್ತಮವಾಗಿ ಸ್ಪರ್ಧಿಸಲಿದೆ': ಬಾಬುಲ್‌'ಗೋವಾ ಚುನಾವಣೆಯಲ್ಲಿ ಟಿಎಂಸಿ ಉತ್ತಮವಾಗಿ ಸ್ಪರ್ಧಿಸಲಿದೆ': ಬಾಬುಲ್‌

ಎಲ್ಲಾ ಧರ್ಮಗಳ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಎಂದ ಮಮತಾ

ಇನ್ನು ಜಾತಿ ವಿಭಜನೆ ವಿಚಾರವಾಗಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನಾನು ಒಂದು ಸಮುದಾಯದ ಮೂಲಕ ಗುರುತಿಸುವಾಗ ನನಗೆ ಕೆಲವೊಮ್ಮೆ ನಾಚಿಕೆ ಆಗುತ್ತದೆ. ನಮಗೆ, ಎಲ್ಲರಿಗೂ ಒಂದು ನಾಮಪಟ್ಟಿ ಹಾಕಲಾಗಿದೆ. ನನ್ನನ್ನು ಹಿಂದೂ, ಬ್ರಾಹ್ಮಣೆ ಎಂದು ಗುರುತಿಸಲಾಗಿದೆ, ನಾವು ಜಾತಿಯ ಆಧಾರದಲ್ಲಿ ಎಲ್ಲರನ್ನು ವಿಭಜನೆ ಮಾಡುವುದು ಏಕೆ?," ಎಂದು ಪ್ರಶ್ನಿಸಿದ್ದು, "ನಾವು ಎಲ್ಲರೂ ಮಾನವರು, ನಾವು ಸಾಮಾನ್ಯ ಜನರು, ನಾನು ಎಲ್ಲಾ ಹಿಂದೂಗಳು, ಮುಸ್ಲಿಮರು, ಸಿಖ್ಖರು ಹಾಗೂ ಕ್ರೈಸ್ತರ ಬಗ್ಗೆ ಹೆಮ್ಮೆಪಡುತ್ತೇನೆ," ಹೇಳಿದರು.

"ನನಗೆ ಗೋವಾದಲ್ಲಿ ಅಧಿಕಾರ ಬೇಡ. ಇಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ನಾನು ಇಲ್ಲಿಗೆ ಬಂದಿಲ್ಲ. ಆದರೆ ನಾವು ಇಲ್ಲಿ ಬಿಜೆಪಿ ಸರ್ಕಾರ ದಾದಾಗಿರಿ ನಡೆಸಲು ಮಾತ್ರ ಬಿಡುವುದಿಲ್ಲ. ನಾನು ಇಲ್ಲಿನ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಲ್ಲಿಗೆ ಬಂದಿದ್ದೇನೆ," ಎಂದು ಕೂಡಾ ಮಮತಾ ಬ್ಯಾನರ್ಜಿ ತಿಳಿಸಿದರು.

ಗೋವಾದಲ್ಲಿ ಮೀನು ಮತ್ತು ಪುಟ್ಬಾಲ್ ಕಥೆ ಹೇಳಿದ ಮಮತಾ ಬ್ಯಾನರ್ಜಿ!ಗೋವಾದಲ್ಲಿ ಮೀನು ಮತ್ತು ಪುಟ್ಬಾಲ್ ಕಥೆ ಹೇಳಿದ ಮಮತಾ ಬ್ಯಾನರ್ಜಿ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎರಡು ದಿನಗಳ ಗೋವಾ ಪ್ರವಾಸಕ್ಕಾಗಿ ಗುರುವಾರ ಗೋವಾಕ್ಕೆ ಆಗಮಿಸಿದ್ದಾರೆ. ಈ ಭೇಟಿಯು ಮುಂದಿನ ವರ್ಷ ಗೋವಾದಲ್ಲಿ ನಡೆಯುವ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಇಂದು ಗೋವಾದಲ್ಲಿ ಹಿರಿಯ ಟೆನಿಸ್‌ ತಾರೆ ಲಿಯಾಂಡರ್‌ ಪೇಸ್‌ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಶುಕ್ರವಾರ ಸೇರ್ಪಡೆ ಆಗಿದ್ದಾರೆ. ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಲಿಯಾಂಡರ್‌ ಪೇಸ್ ಟಿಎಂಸಿ ಗೆ ಸೇರ್ಪಡೆ ಆಗುವ ಮುನ್ನ ಬಾಲಿವುಡ್ ​ ನಟಿ ನಫೀಸಾ ಅಲಿ ಮತ್ತು ಮೃಣಾಲಿನಿ ದೇಶಪ್ರಭು ಕೂಡಾ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
TMC Came To Goa To Fight BJP, If Not Fought, They Will Sell Country says Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X