Get Updates
Get notified of breaking news, exclusive insights, and must-see stories!

TMC Protest: ಭಾರತೀಯ ಪ್ರಜಾಪ್ರಭುತ್ವಕ್ಕೆ 'ಕಪ್ಪು ದಿನ' ಎಂದ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ!

ದೆಹಲಿ ಅಕ್ಟೋಬರ್ 4: ಎಂಜಿಎನ್‌ಆರ್‌ಇಜಿಎ ಹಣ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಟಿಎಂಸಿಯ ಸುಮಾರು 30 ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಂಧನದಿಂದ ಬಿಡುಗಡೆ ನಂತರ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ 'ಕಪ್ಪು ದಿನ' ಎಂದು ಕರೆದಿದ್ದಾರೆ.

ದೆಹಲಿಯ ಕೃಷಿ ಭವನದಲ್ಲಿ ಧರಣಿ ನಡೆಸುತ್ತಿದ್ದಾಗ ಟಿಎಂಸಿ ನಾಯಕರು ಬಂಧನಕ್ಕೊಳಗಾದರು. ಸುಮಾರು ಮೂರು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಈ ವೇಳೆ ಈ ಘೋಷಣೆಗಳನ್ನು ಕೂಗಲಾಗಿದೆ. ಮಂಗಳವಾರ ಮತ್ತು ಬುಧವಾರದ ರಾತ್ರಿ ಪ್ರತಿಭಟನೆಯ ವೇಳೆ ಪೊಲೀಸರು ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒ'ಬ್ರಿಯಾನ್ ಮತ್ತು ಮಹುವಾ ಮೊಯಿತ್ರಾ ಸೇರಿದಂತೆ ಇತರ ಪಕ್ಷದ ನಾಯಕರನ್ನು ಬಂಧಿಸಿದರು. ಬಳಿಕ ಅವರನ್ನು ಬಿಡುಗಡೆ ಮಾಡಿದರು. ಈ ವೇಳೆ ಟಿಎಂಸಿ ನಾಯಕರು ಇದು "ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪು ದಿನ" ಎಂದು ಕರೆದಿದ್ದಾರೆ.

Black Day for Indian Democracy - Abhishek Banerjee

ಬಂಧನವಾಗಿ ಕೆಲವೇ ಘಟನೆಗಳಲ್ಲಿ ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾನರ್ಜಿ, "ನೀವು (ಬಿಜೆಪಿ) ರಾಜ್ಯದಲ್ಲಿ ಸೋತಿದ್ದರಿಂದ ನೀವು (ಬಿಜೆಪಿ) ಪಶ್ಚಿಮ ಬಂಗಾಳದ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದೀರಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎಲ್ಲಾ ಚುನಾವಣೆಗಳಲ್ಲಿ ಸೋತಿದೆ, ಅದಕ್ಕಾಗಿಯೇ ಅವರು ಜನರ ಹಣವನ್ನು ನಿಲ್ಲಿಸಿದ್ದಾರೆ'' ಎಂದು ಬಿಜೆಪಿ ವಿರುದ್ಧ ಆಕ್ರೊಶಗೊಂಡರು.

ದೌರ್ಜನ್ಯದ ವಿರುದ್ಧ ಗುರುವಾರ ಅಭಿಯಾನ

ದೌರ್ಜನ್ಯದ ವಿರುದ್ಧ ಗುರುವಾರ ಕೋಲ್ಕತ್ತಾದಲ್ಲಿ 'ರಾಜಭವನ ಅಭಿಯಾನ' ಅಭಿಯಾನಕ್ಕೆ ಟಿಎಂಸಿ ನಾಯಕ ಕರೆ ನೀಡಿದ್ದಾರೆ. ಅಕ್ಟೋಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ರಾಜಭವನದಲ್ಲಿ 1 ಲಕ್ಷ ಜನರೊಂದಿಗೆ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ 'ರಾಜಭವನ ಅಭಿಯಾನ' ಅಭಿಯಾನವನ್ನು ನಡೆಸುತ್ತೇನೆ. ರಾಜ್ಯಪಾಲರನ್ನು ಭೇಟಿ ಮಾಡಿ 50 ಲಕ್ಷ ಪತ್ರಗಳನ್ನು ಅವರಿಗೆ ನೀಡುತ್ತೇನೆ ಎಂದು ಬ್ಯಾನರ್ಜಿ ಹೇಳಿದರು.

ದೆಹಲಿ ಪೊಲೀಸರು ಮಹಿಳೆಯರು ಸೇರಿದಂತೆ ಸಂಸದರು ಮತ್ತು ಶಾಸಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಬ್ಯಾನರ್ಜಿ, ಸಾರ್ವಜನಿಕ ಪ್ರತಿನಿಧಿಗಳನ್ನು ದೆಹಲಿ ಪೊಲೀಸರು ಎಳೆದುಕೊಂಡು ಹಲ್ಲೆ ನಡೆಸಿದ್ದು, ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ 'ನವ ಭಾರತ'ಕ್ಕೆ ಉದಾಹರಣೆಯಾಗಲಿದೆ ಎಂದರು.

"ಇಂದು ದೆಹಲಿ ಪೊಲೀಸ್ ಅಧಿಕಾರಿಗಳು ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ... ಸಂಸದರ ಜುಟ್ಟು ಹಿಡಿದು ಎಳೆದಾಡಿದರು. ಲಕ್ಷಗಟ್ಟಲೆ ಜನರಿಂದ ಸಂಸದರನ್ನು ಆಯ್ಕೆ ಮಾಡಲಾಗಿದೆ. ರಾಜಭವನದಲ್ಲಿ ಬಿಜೆಪಿಯ ಜಮೀನ್ದಾರ್ ನಾಮನಿರ್ದೇಶನಗೊಂಡಿದೆ. ಅವರನ್ನು ಎಳೆದೊಯ್ದು ದೌರ್ಜನ್ಯ ನಡೆಸುತ್ತಿದ್ದಾರೆ... ಮಹುವಾ ಮೊಯಿತ್ರಾ, ಡೋಲಾ ಸೇನ್ ಅವರ ಕೈಕಾಲು ಹಿಡಿದು ಪೋಲೀಸ್ ವ್ಯಾನ್‌ಗೆ ಎಳೆದೊಯ್ದ ರೀತಿಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಬ್ಯಾನರ್ಜಿ ಕಿಡಿ ಕಾರಿದರು.

2024ರ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಗೆ ಸವಾಲೆಸೆದ ಬ್ಯಾನರ್ಜಿ, "ಮುಂದಿನ ಆರು ತಿಂಗಳಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದ ಜನರು ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ ಮತ್ತು ಇಂದಿನ ಕಾರ್ಯಕ್ರಮವು ಕರಾಳ ದಿನವಾಗಿ ಉಳಿಯುತ್ತದೆ. ಬ್ರಿಟಿಷರು ಕೂಡ ಇದನ್ನು ಮಾಡಿದರು. ಇಂದು ದೆಹಲಿ ಪೊಲೀಸರು ನಡೆದುಕೊಂಡಷ್ಟು ಕೆಟ್ಟದಾಗಿ ಅವರು ಕೂಡ ಅಂದು ವರ್ತಿಸಿದ್ದರು ಎಂದರು ಕಿಡಿ ಕಾರಿದರು.

ಪತ್ರಕರ್ತರ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ, ಸಾರ್ವಜನಿಕ ಪ್ರತಿನಿಧಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ, ಭ್ರಷ್ಟರನ್ನು ಸೇರ್ಪಡೆಗೊಳಿಸಲಾಗುತ್ತಿದೆ ಮತ್ತು ಅವರ ಪಾಪಗಳನ್ನು ತೊಳೆದುಕೊಳ್ಳಲಾಗುತ್ತಿದೆ ಮತ್ತು ಬಿಲ್ಕಿಸ್ ಬಾನೋ ಮೇಲಿನ ಅತ್ಯಾಚಾರಿಗಳನ್ನು ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದರು.

ಎಂಜಿಎನ್‌ಆರ್‌ಇಜಿಎ ಹಣ ಬಿಡುಗಡೆಗೆ ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಟಿಎಂಸಿಯ ಸುಮಾರು 30 ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಿಯೋಗ, ಪಕ್ಷದ ಶಾಸಕರೊಂದಿಗೆ ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದೆ. ಗಾಂಧಿ ಜಯಂತಿಯಂದು ರಾಜ್‌ಘಾಟ್‌ನಲ್ಲಿ ಎರಡು ಗಂಟೆಗಳ ಕಾಲ ಧರಣಿ ನಡೆಸಿದ ಅವರು ಪೊಲೀಸರಿಂದ ಹೊರಹಾಕಲ್ಪಟ್ಟರು.

ಮಂಗಳವಾರ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ, ನಂತರ ಕೃಷಿ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮೆರವಣಿಗೆ ನಡೆಸಿ, ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+