ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆ: ಪ್ರಚಾರಕ್ಕಾಗಿ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ ಬಿಜೆಪಿ- ಮಮತಾ ಬ್ಯಾನರ್ಜಿ ಮಾಹಿತಿ
ಕೋಲ್ಕತ್ತ, ಆಗಸ್ಟ್ 28: ಬಿಜೆಪಿಯು ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಬಿಜೆಪಿ ಬುಕ್ ಮಾಡಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಟಿಎಂಸಿ ಯುವ ಘಟಕದ ರ್ಯಾಲಿಯಲ್ಲಿ ಮಾತನಾಡಿದ ಮಮರಾ ಬ್ಯಾನರ್ಜಿ, ಭಾರತದಲ್ಲಿ ಬಿಜೆಪಿಗೆ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ದೇಶವು ಸರ್ವಾಧಿಕಾರಿ ಆಡಳಿತವನ್ನು ಎದುರಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

'ಸತತ ಮೂರನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶವು ನಿರಂಕುಶ ಆಡಳಿತವನ್ನು ಎದುರಿಸಬೇಕಾಗುತ್ತದೆ. ಅವರು (ಬಿಜೆಪಿ) ಡಿಸೆಂಬರ್ 2023 ರಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು ಎಂಬ ಆತಂಕ ನನ್ನಲ್ಲಿದೆ' ಎಂದು ಹೇಳಿದ್ದಾರೆ.
ಕೇಸರಿ ಪಕ್ಷವು ಈಗಾಗಲೇ ನಮ್ಮ ದೇಶದಲ್ಲಿ ಸಮೂಹಗಳ ನಡುವೆ ಒಡುಕು ಉಂಟು ಮಾಡಿದೆ. ವೈರತ್ವದ ರಾಷ್ಟ್ರವನ್ನಾಗಿ ಪರಿವರ್ತಿಸಿದೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ, ನಮ್ಮ ದೇಶವನ್ನು ದ್ವೇಷದ ರಾಷ್ಟ್ರವನ್ನಾಗಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಬಿಜೆಪಿ ಈಗಾಗಲೇ ಎಲ್ಲಾ ಚಾಪರ್‌ಗಳನ್ನು ಕಾಯ್ದಿರಿಸಿದೆ. ಯಾವುದೇ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಅವುಗಳನ್ನು ಬಳಸಬಾರದು ಎಂಬ ಉದ್ದೇಶ ಅವರಲ್ಲಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸಂಭವಿಸಿದ ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟದ ಬಗ್ಗೆ ಮಾತನಾಡಿದ ಅವರು ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲವು ಪೊಲೀಸ್ ಸಿಬ್ಬಂದಿಯ ಬೆಂಬಲದೊಂದಿಗೆ ಇದೆಲ್ಲವನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಂಗಾಳದಲ್ಲಿ ಮೂರು ದಶಕಗಳ ಸಿಪಿಐ(ಎಂ) ಆಡಳಿತವನ್ನು ಸೋಲಿಸಿದ್ದೇನೆ. ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಜಾದವ್‌ಪುರ ವಿಶ್ವವಿದ್ಯಾನಿಲಯದಲ್ಲಿ ' ಗೋಲಿ ಮಾರೋ ' ಘೋಷಣೆಗಳನ್ನು ಕೂಗಿದ ಎಬಿವಿಪಿ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಯುನಿವರ್ಸಿಟಿಯಲ್ಲಿ ದ್ವೇಷದ ಘೋಷಣೆಗಳಲ್ಲಿ ತೊಡಗಿರುವವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಮಮತಾ ಹೇಳಿದ್ದಾರೆ.
ಇಂತಹ ಘೋಷಣೆಗಳನ್ನು ಕೂಗುವವರು ಇದು ಬಂಗಾಳ ಎಂಬುದನ್ನು ಮರೆಯಬಾರದು. ಇದು ಉತ್ತರ ಪ್ರದೇಶ ಅಲ್ಲ ಎಂದು ಅವರು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.












Click it and Unblock the Notifications