Lok Sabha Elections 2024: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಏನಾಗುತ್ತೆ? ವಿವರಿಸಿದ ದೀದಿ

ದೆಹಲಿ ಮಾರ್ಚ್‌ 1: ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಬಿಜೆಪಿ ಸಜ್ಜಾಗಿದೆ. ಇದಕ್ಕಾಗಿ ಬಿಜೆಪಿ ಗುರುವಾರ ರಾತ್ರಿ ಮಹತ್ವದ ಸಭೆ ನಡೆಸಿದೆ. ಈ ನಡುವೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಅಡುಗೆ ಅನಿಲದ ಸಿಲಿಂಡರ್‌ ಬೆಲೆ 2000ಕ್ಕೇರಿಕೆಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಪ.ಬಂಗಾಳದ ಝಾರ್‌ಗ್ರಾಮ್ ನ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಮುಂಬರುವ ಲೀಕಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೆ ಅಡುಗೆ ಅನಿಲದ ಸಿಲಿಂಡರ್ ಮೌಲ್ಯ 1500ರೂಪಾಯಿಯಿಂದ 2000 ರೂಪಾಯಿಯಷ್ಟು ಏರಲಿದೆ. ಈ ಹೆಚ್ಚಳ ಮತ್ತೆ ಮುಂದುವರಿಯಲಿದೆ. ನಾವು ಮತ್ತೆ ಮರಗಳನ್ನು ತಂದು ಸೌದೆ ಒಲೆ ಬಳಸುತ್ತಿದ್ದ ಪರಿಸ್ಥಿತಿಗೆ ಮರಳಬೇಕಾಗುತ್ತದೆ' ಎಂದರು.

What will happen if BJP comes to power again? Didi explained

ಆವಾಸ್ ಯೋಜನೆಯಡಿ ಕೈಗೊಂಡಿರುವ ಮನೆಗಳ ನಿರ್ಮಾಣವನ್ನು ಏಪ್ರಿಲ್ ಒಳಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮೇನಿಂದ ತಮ್ಮ ಸರ್ಕಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಸೀಟು ಹಂಚಿಕೆ ಕಸರತ್ತು:

ಪ್ರಧಾನಿ ಮೋದಿ ಸೇರಿದಂತೆ ನೂರು ಅಭ್ಯರ್ಥಿಗಳ ಪಟ್ಟಿ ಶುಕ್ರವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ಬಾರಿ 370ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಇಂಗಿತ ಹೊಂದಿರುವ ಬಿಜೆಪಿ ಈ ನಿಟ್ಟಿನಲ್ಲಿ ತಯಾರಿ ಆರಂಭಿಸಿದೆ. ಹೀಗಾಗಿ ಇದುವರೆಗೂ ಬಿಜೆಪಿ ಸಂಪೂರ್ಣ ಗೆಲುವು ಸಾಧಿಸಲು ಆಗದ ರಾಜ್ಯಗಳಿಗೆ ಹೆಚ್ಚಿನ ಮೊದಲ ಪ್ರಾಶ್ಸ್ತ್ಯ ನೀಡಲಿದೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳು ಘೋಷಣೆಯಾದರೆ ಆಯಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಚುನಾವಣಾ ಕೆಲಸಗಳನ್ನು ಶುರು ಮಾಡಲು ಸಹಾಯವಾಗಲಿದೆ. ಕೇರಳ ರಾಜ್ಯಗಳು ಮೊದಲ ಪಟ್ಟಿಯಲ್ಲಿರುವ ನಿರೀಕ್ಷೆ ಇದೆ.

ಉಳಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೆಸರು ಮೊದಲ ಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮಿಳುನಾಡು ಸೀಟು ಹಂಚಿಕೆ:

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯಾತೀತ ಪ್ರಜಾಸತ್ತಾತ್ಮಕ ಒಕ್ಕೂಟ (ಎಸ್‌ಪಿಎ) ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಎಂಗೆ ತಲಾ ಎರಡು ಬಿಟ್ಟುಕೊಡಲು ಡಿಎಂಕೆ ಸಮ್ಮತಿಸಿದೆ. ಇದಕ್ಕೂ ಮೊದಲು ಮೈತ್ರಿಕೂಟದ ಇತರ ಪಕ್ಷಗಳಾದ ಇಂಡಿಯನ್ ಮುಸ್ಲೀಂ ಲೀಗ್ (ಐಯುಎಂಎಲ್) ಮತ್ತು ಕೆಎಂಡಿಕೆ ಪಕ್ಷಗಳಿಗೆ ತಲಾ ಒಂದು ಸೀಟು ಬಿಟ್ಟು ಕೊಡಲಾಗಿತ್ತು. ಕಲೇದ ಬಾರಿ ಡಿಎಂಕೆನೃತೃತ್ವದ ಎಸ್‌ಪಿಎ ಮೈತ್ರೀಕೂಟ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ 38 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.

ಯುಪಿ: ಸಿಬಿಐ ವಿಚಾರಣೆಗೆ ಅಖಿಲೇಶ್ ಗೈರುಹಾಜರಿ:

ಉತ್ತರಪ್ರದೇಶ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಗುರುವಾರ ಕೇಂದ್ರೀಯ ತನಿಖಾ ದಳ(ಸಿಬಿಐ) ಕರೆದಿದ್ದ ವಿಚಾರಣೆ ಪತ್ರ ಬರೆದಿದ್ದು, ಕಳೆದ ಐದು ವರ್ಷ ಸುಮ್ಮನಿದ್ದು ಈಗೇಕೆ ವಿಚಾರಣೆಗೆ ಏಕಾಏಕಿ ಬುಲಾವ್ ನೀಡಲಾಗಿದೆ ಎಂದು ಪ್ರಶ್ನಿಸಿ ಅಖಿಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+