Sourav Ganguly: ಕ್ರಿಕೆಟ್ ಬಿಟ್ಟು ಫುಲ್ ಟೈಂ ರಾಜಕೀಯಕ್ಕೆ ಬರ್ತಾರಾ ಸೌರವ್ ಗಂಗೂಲಿ?
ಭಾರತ ಕ್ರಿಕೆಟ್ ತಂಡದ ಇತಿಹಾಸ ಸೌರವ್ ಗಂಗೂಲಿ ಹೊರತಾಗಿ ಮುಗಿಯುವುದಿಲ್ಲ. ಈ ಎಡಗೈ ಆಟಗಾರ ಭಾರತೀಯ ಕ್ರಿಕೆಟ್ ಅಖಾಡದಲ್ಲಿ ಜಾರಿಗೆ ತಂದಿದ್ದ ಕ್ರಾಂತಿಕಾರಿ ಬದಲಾವಣೆ ಹಂಗೆ ಇದ್ದವು. ಗಂಗೂಲಿ ಹೆಸರು ಕೇಳಿದ್ರೆ ಅಂದಿನ ಕಾಲಘಟ್ಟದಲ್ಲಿ ಘಟಾನುಘಟಿ ಕ್ರಿಕೆಟ್ ತಂಡಗಳು ಹೆದರುತ್ತಿದ್ದವು. ಆದ್ರೆ ಇಂಥ ಲೆಜೆಂಡ್ ಕ್ರಿಕೆಟ್ ಆಟಗಾರ ಈಗ, ಕ್ರಿಕೆಟ್ ಬಿಟ್ಟು ಸಂಪೂರ್ಣವಾಗಿ ಪಾಲಿಟಿಕ್ಸ್ ಅಂದರೆ ರಾಜಕೀಯಕ್ಕೆ ಬರ್ತಾರಾ ಅನ್ನೋ ಪ್ರಶ್ನೆ ಮೂಡಿದೆ.
ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಎಲ್ಲರೂ ಬಹುತೇಕ ಒಂದೇ ಕಾಲಘಟ್ಟದವರು. ಇವರ ಪೈಕಿ ಗಂಗೂಲಿ ಅವರ ರೀತಿ ಭಾರತ ಕ್ರಿಕೆಟ್ ತಂಡದ ನಾಯಕತ್ವ ನಿಭಾಯಿಸಿದ ಆಟಗಾರ ಮತ್ತೊಬ್ಬರಿಲ್ಲ.

2000ನೇ ಇಸವಿಯಲ್ಲಿ ಸೌರವ್ ಗಂಗೂಲಿ ಭಾರತ ತಂಡಕ್ಕೆ ನಾಯಕರಾಗಿ ಆಯ್ಕೆ ಆದರು. ಆದರೆ 2005ರಲ್ಲಿ ತಂಡದಲ್ಲಿ ಭಾರಿ ಬದಲಾವಣೆ ಕಾರಣ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿದ ಸೌರವ್ ಗಂಗೂಲಿ ತಮ್ಮ 5 ವರ್ಷದ ಆಳ್ವಿಕೆಯಲ್ಲಿ ಸೃಷ್ಟಿಸಿದ್ದೆಲ್ಲಾ ಇತಿಹಾಸ. ಆದ್ರೆ ಈಗ ಮತ್ತೊಮ್ಮೆ ಸೌರವ್ ಸದ್ದು ಮಾಡ್ತಿದ್ದಾರೆ.
#KIFF #KolkataFilmFestival #SalmanKhan #MamataBanerjee #SouravGanguly pic.twitter.com/OUcDNBBw24
— Srikanta Chowdhury Jhargram AITC (@SrikantaJgm) December 5, 2023
ಕ್ರಿಕೆಟ್ ಬಿಟ್ಟು ಫುಲ್ ಟೈಂ ರಾಜಕೀಯಕ್ಕೆ?
ಸೌರವ್ ಗಂಗೂಲಿ ಬಗ್ಗೆ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ. ಅದರಲ್ಲೂ, ಟೀಂ ಇಂಡಿಯಾದ ಈ ಮಾಜಿ ಕ್ಯಾಪ್ಟನ್ ಕ್ರಿಕೆಟ್ ಬಿಟ್ಟು ಫುಲ್ ಟೈಂ ರಾಜಕೀಯಕ್ಕೆ ಬರ್ತಾರಾ? ಅಂತಾ. ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲೇ, ಮಮತಾ ಬ್ಯಾನರ್ಜಿ ಅವರ ಜೊತೆ ಮತ್ತೊಮ್ಮೆ ಸ್ಟೇಜ್ ಹಂಚಿಕೊಂಡಿದ್ದಾರೆ ಸೌರವ್ ಗಂಗೂಲಿ. ಹೀಗೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಖಾಡಕ್ಕೆ ಹೊಸ ಸುದ್ದಿ ಎಂಟ್ರಿಯಾಗಿದೆ. 2024ರ ಲೋಕಸಭೆ ಚುನಾವಣೆಗೆ ಮೊದಲು ಏನಾಗುತ್ತೆ.? ಅನ್ನೋದನ್ನ ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ.

ಸಿನಿಮಾ ಮಹೋತ್ಸವದಲ್ಲಿ ಮಮತಾ ಭೇಟಿ
ಅಂದಹಾಗೆ ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾ ಇಂದು ಝಗಮಗಿಸುತ್ತಿದೆ. ಸಿನಿಮಾ ಮಹೋತ್ಸವ ಅಂದರೆ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಕೊಲ್ಕತ್ತಾ ನಗರದಲ್ಲಿ ಇದೀಗ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ & ಸೌರವ್ ಗಂಗೂಲಿಯವರ ಭೇಟಿ ಆಗಿದೆ.
ಹಾಗೇ ಈ ವೇಳೆ ಇಬ್ಬರೂ ಗಂಭೀರವಾಗಿ ಏನನ್ನೋ ಚರ್ಚೆ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಹೀಗಾಗಿ ಸೌರವ್ ಗಂಗೂಲಿ ಅವರು ಇದೀಗ ಕ್ರಿಕೆಟ್ ಬಿಟ್ಟು ಫುಲ್ ಟೈಂ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಅನ್ನೋ ಪ್ರಶ್ನೆ ಮೂಡಿದೆ.
ಒಟ್ನಲ್ಲಿ ಸೌರವ್ ಗಂಗೂಲಿ ಅವರು ಕ್ರಿಕೆಟ್ ಅಖಾಡದಲ್ಲಿ ತೋರಿಸಿದ ಹವಾ, ರಾಜಕೀಯ ಅಖಾಡದಲ್ಲೂ ತೋರಿಸುತ್ತಾರಾ? ಎಂಬ ಪ್ರಶ್ನೆಗಳು ಮತ್ತು ಚರ್ಚೆಗಳು ಶುರುವಾಗಿವೆ. ಈ ಕಾರಣಕ್ಕೆ ಲೋಕಸಭೆ ಚುನಾವಣೆಗೆ ಮೊದಲು ಸಂಚಲನ ಸೃಷ್ಟಿಯಾಗಿದೆ. ಅಭಿಮಾನಿಗಳು ಕೂಡ ಇದಕ್ಕಾಗಿ ಉತ್ತರ ಹುಡುಕುತ್ತಾ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.












Click it and Unblock the Notifications