By Polls: ಧೂಪ್‌ಗುರಿ ಕ್ಷೇತ್ರದಲ್ಲಿ ದಾಖಲೆಗಳು ಧೂಳ್.. ಧೂಳ್..!
ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರ ಧೂಪ್‌ಗುರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಟಪಟ್ಟು ಗೆಲುವಿಗಾಗಿ ಬಿಜೆಪಿ ಮತ್ತು ಟಿಎಂಸಿ ಸೆಣೆಸಾಡಿದ್ದವು. ಇದೀಗ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಧೂಪ್‌ಗುರಿ ಕ್ಷೇತ್ರದಲ್ಲಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ವಿಪಕ್ಷಗಳ ಒಕ್ಕೂಟಕ್ಕೆ ಕೈಜೋಡಿಸಿರುವ ಮಮತಾ ಬ್ಯಾನರ್ಜಿಗೆ ಈ ಮೂಲಕ ಹೊಸ ಸಂದೇಶ ಸಿಕ್ಕಿದೆಯಾ? ಬನ್ನಿ ತಿಳಿಯೋಣ.
ಇಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಆದ್ರೆ ಧೂಪ್‌ಗುರಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ಶುರುವಾದ ಕ್ಷಣದಿಂದ ಜಿದ್ದಾಜಿದ್ದಿ ಏರ್ಪಟ್ಟು ಬಿಜೆಪಿ & ಟಿಎಂಸಿ ಸೆಣೆಸಾಡಿದ್ದವು. ಅಂತಿಮ ಫಲಿತಾಂಶ ಹೊರಬಿದ್ದು, ಈ ಜಿದ್ದಾಜಿದ್ದಿನ ಅಖಾಡದಲ್ಲಿ ಟಿಎಂಸಿ ಅಭ್ಯರ್ಥಿಗೆ ಭರ್ಜರಿ ಜಯ ಸಿಕ್ಕಿದೆ. ಇಲ್ಲಿ ಗೆಲ್ಲಬೇಕು ಅಂತಾ ಭಾರಿ ತಿಕ್ಕಾಟ ನಡೆದಿತ್ತು. ಅತ್ತ ಬಿಜೆಪಿ ನಾಯಕರಿಗೂ ಇದು ಪ್ರತಿಷ್ಟೆಯಾಗಿತ್ತು, ಇದೇ ವೇಳೆ ಟಿಎಂಸಿ ಕೂಡ ಗೆಲುವು ಸಾಧಿಸಲು ಪಣ ತೊಟ್ಟಿತ್ತು. ಹೀಗಾಗಿಯೇ ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರ ಧೂಪ್‌ಗುರಿ ಸಾಕಷ್ಟು ಗಮನ ಸೆಳೆದಿತ್ತು.

ದೇಶದ ಗಮನ ಸೆಳೆದಿದ್ದ ಕ್ಷೇತ್ರ
6 ರಾಜ್ಯಗಳ 7 ವಿಧಾನಸಭೆ ಕ್ಷೇತ್ರಗಳಿಗೆ ಮಂಗಳವಾರ ನಡೆದಿದ್ದ ಉಪಚುನಾವಣೆಯ ರಿಸಲ್ಟ್ ಇಂದು ಹೊರಬಿದ್ದಿದೆ. ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ ಸೇರಿ ಪಶ್ಚಿಮ ಬಂಗಾಳದ ಧೂಪ್‌ಗುರಿ, ಜಾರ್ಖಂಡ್‌ನ ಡುಮ್ರಿ ಮತ್ತು ತ್ರಿಪುರಾದ ಬಾಕ್ಸಾನಗರ್ & ಧನಪುರ್ ಕ್ಷೇತ್ರದಲ್ಲಿ ಇಂದು ಬೆಳಗ್ಗೆಯಿಂದ ಮತ ಎಣಿಕೆ ಶುರುವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದ ಕಾರಣ ಇಡೀ ದೇಶವೇ ಧೂಪ್‌ಗುರಿ ಫಲಿತಾಂಶ ಯಾವಾಗ ಹೊರಬೀಳುತ್ತೆ ಅಂತಾ ಕಾಯುತ್ತಿತ್ತು. ಟಿಎಂಸಿಯ ಅಭ್ಯರ್ಥಿಯಾಗಿ ನಿರ್ಮಲ್ ಚಂದ್ರ ರಾಯ್ ಸ್ಪರ್ಧಿಸಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ತಪಾಸಿ ರಾಯ್ ಸ್ಪರ್ಧೆ ಮಾಡಿದ್ದರು.
3ನೇ ಸ್ಥಾನಕ್ಕೆ ಸಿಪಿಎಂ ಕುಸಿತ!
ಒಂದು ಕಾಲದಲ್ಲಿ ಇಡೀ ಪಶ್ಚಿಮ ಬಂಗಾಳದಲ್ಲಿ ಹವಾ ಎಬ್ಬಿಸಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಈ ಉಪಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಡುತ್ತಿದೆ. ಸಿಪಿಎಂ ಪಕ್ಷ ಟಿಕೆಟ್ ನೀಡಿದ್ದ ಈಶ್ವರ ಚಂದ್ರ ರಾಯ್ ಭಾರಿ ಮತದ ಅಂತರದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಕ್ಷೇತ್ರದಲ್ಲಿ ಸಿಪಿಎಂ ಬಿಟ್ಟರೆ ಬಿಜೆಪಿ ಮಾತ್ರ ಈವರೆಗೂ ಗೆಲವು ಸಾಧಿಸಿ ಗಮನ ಸೆಳೆದಿತ್ತು. ಆದ್ರೆ ಇದೇ ಮೊದಲ ಬಾರಿ ಟಿಎಂಸಿ ಅಭ್ಯರ್ಥಿ ಧೂಪ್‌ಗುರಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಹೀಗಾಗಿ ಟಿಎಂಸಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು.

5 ರಾಜ್ಯಗಳ 6 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಒಂದು ಲೆಕ್ಕವಾದರೆ, ಪ.ಬಂಗಾಳದ ಬೈಎಲೆಕ್ಷನ್ ರಿಸಲ್ಟ್ ಮತ್ತೊಂದು ಲೆಕ್ಕ ಎಂಬಂತಾಗಿತ್ತು. ಧೂಪ್ಗುರಿ ಕ್ಷೇತ್ರದಲ್ಲಿ ಗೆಲುವಿಗೆ ಬಿಜೆಪಿ ಮತ್ತು ಟಿಎಂಸಿ ಸೆಣೆಸಾಡಿವೆ. ಹೀಗಾಗಿ ಹೋರಾಟ ಜೋರಾಗಿತ್ತು, ಇದೀಗ ಕೊನೆಗೆ ರಿಸಲ್ಟ್ ಹೊರಬಿದ್ದಿದ್ದು, ಧೂಪ್‌ಗುರಿ ವಿಧಾನಸಭಾ ಕ್ಷೇತ್ರದ ಮತದಾರ ಟಿಎಂಸಿ ಅಭ್ಯರ್ಥಿಗೆ ಜೈ ಅಂದಿದ್ದಾನೆ.












Click it and Unblock the Notifications