ಒಂದು ಸ್ಥಾನವನ್ನು ನೀಡಲ್ಲ: ಕಾಂಗ್ರೆಸ್ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ತೃಣಮೂಲ ಕಾಂಗ್ರೆಸ್‌ಗೆ ನಾಯಕತ್ವ ನೀಡುವ ಬಗ್ಗೆ ಕಾಂಗ್ರೆಸ್ ಪ್ರಯತ್ನದಲ್ಲಿರುವಾಗ, ಮಮತಾ ಬ್ಯಾನರ್ಜಿ ಅವರು ಬುಧವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಪಿಐ(ಎಂ) ಜೊತೆಗಿನ ಮೈತ್ರಿಯು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇಂಡಿಯಾ ಬಣಕ್ಕೆ ವಾಸ್ತವಿಕವಾಗಿ ತೆರೆ ಬಿದ್ದಿದೆ ಎಂಬ ಟೀಕೆಯಲ್ಲಿ, ಕಾಂಗ್ರೆಸ್ ತನ್ನ ಎರಡು ಸ್ಥಾನಗಳ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 Mamata Banerjee Criticizes Congress-CPI(M) Alliance, Firm on Not Sharing Any Seats

"ಕಾಂಗ್ರೆಸ್‌ಗೆ ರಾಜ್ಯ ವಿಧಾನಸಭೆಯಲ್ಲಿ ಒಬ್ಬ ಶಾಸಕರೂ ಇಲ್ಲ. ನಾನು ಅವರಿಗೆ ಎರಡು ಲೋಕಸಭಾ ಸ್ಥಾನಗಳನ್ನು ನೀಡಿದ್ದೇನೆ, ಎರಡೂ ಮಾಲ್ಡಾದಲ್ಲಿ, ಆದರೆ ಅವರು ಹೆಚ್ಚು ಸ್ಥಾನಗಳನ್ನು ಬಯಸಿದ್ದರು. ಹಾಗಾಗಿ, ನಾನು ಅವರೊಂದಿಗೆ ಒಂದೇ ಒಂದು ಸ್ಥಾನವನ್ನು ಹಂಚಿಕೊಳ್ಳುವುದಿಲ್ಲ ಎಂದು ಅವರಿಗೆ ಹೇಳಿದೆ. ಸಿಪಿಐ( ಎಂ) ಅವರ ನಾಯಕ. ಅವರು ಸಿಪಿಐ(ಎಂ)ನ ಚಿತ್ರಹಿಂಸೆಗಳನ್ನು ಮರೆತಿದ್ದಾರೆಯೇ? ಎಂದು ಬಂಗಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.

ಪಶ್ಚಿಮ ಬಂಗಾಳದ ಜನರನ್ನು ಹಿಂಸಿಸಿರುವ ಎಡಪಕ್ಷವನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. "ನಾನು ಸಿಪಿಐ(ಎಂ) ಅನ್ನು ಎಂದಿಗೂ ಕ್ಷಮಿಸುವುದಿಲ್ಲ. ಸಿಪಿಐ (ಎಂ) ಅನ್ನು ಬೆಂಬಲಿಸುವವರನ್ನು ನಾನು ಕ್ಷಮಿಸುವುದಿಲ್ಲ. ಏಕೆಂದರೆ ಹಾಗೆ ಮಾಡುವ ಮೂಲಕ ಅವರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ನಾನು ಅದನ್ನು ನೋಡಿದ್ದೇನೆ" ಎಂದು ಅವರು ಹೇಳಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದರೆ ಅಭ್ಯಂತರವಿಲ್ಲ

ಮಾಲ್ಡಾದ ಮಾಜಿ ಕಾಂಗ್ರೆಸ್ ನಾಯಕ, ದಿವಂಗತ ಗನಿ ಖಾನ್ ಚೌಧರಿ ಅವರ ಕುಟುಂಬದಿಂದ ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೆ ನನ್ನ ಅಭ್ಯಂತರವಿಲ್ಲ ಎಂದು ಬ್ಯಾನರ್ಜಿ ಹೇಳಿದರು. "ಆದರೆ ಟಿಎಂಸಿ ಕೂಡ ಸ್ಪರ್ಧಿಸುತ್ತದೆ. ಕಾಂಗ್ರೆಸ್ ಸಿಪಿಐ(ಎಂ) ಜೊತೆಗೆ ಬಿಜೆಪಿಯನ್ನು ಬಲಪಡಿಸಲು ಹೋರಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ರಾಜಕೀಯವಾಗಿ ಹೋರಾಡಲು ಟಿಎಂಸಿ ಮಾತ್ರ ಸಮರ್ಥವಾಗಿದೆ" ಎಂದು ಅವರು ಹೇಳಿದರು.

ಫೆಬ್ರವರಿ 1 ರೊಳಗೆ ಕೇಂದ್ರ ಸರ್ಕಾರವು ಬಾಕಿ ಪಾವತಿಸದಿದ್ದರೆ ಧರಣಿ ನಡೆಸುವುದಾಗಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದರು. ಪಶ್ಚಿಮ ಬಂಗಾಳದಲ್ಲಿ ರಾಹುಲ್ ಗಾಂಧಿ ಅವರ ವಾಹನಕ್ಕೆ ಕಲ್ಲು ತೂರಲಾಗಿದೆ ಎಂಬ ಅಧೀರ್ ರಂಜನ್ ಚೌಧರಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಹಾರದಲ್ಲಿ ಈ ಘಟನೆ ನಡೆದಿರಬಹುದು ಎಂದು ಹೇಳಿದ್ದಾರೆ.

"ರಾಹುಲ್ ಗಾಂಧಿಯವರ ಕಾರಿಗೆ ಕಲ್ಲು ತೂರಾಟ ನಡೆದಿದೆ ಎಂಬ ಸಂದೇಶ ನನಗೆ ಬಂದಿತ್ತು. ನಾನು ನಿಖರವಾಗಿ ಏನಾಯಿತು ಎಂಬುದನ್ನು ಪರಿಶೀಲಿಸಿದ್ದೇನೆ ಮತ್ತು ಘಟನೆ ನಡೆದಿರುವುದು ಬಂಗಾಳದಲ್ಲ ಕತಿಹಾರ್‌ನಲ್ಲಿ ಎಂದು ಕಂಡುಬಂದಿದೆ. ಕಾರು ಬಂಗಾಳಕ್ಕೆ ಪ್ರವೇಶಿಸಿದೆ. ದಾಳಿಯನ್ನು ನಾನು ಖಂಡಿಸುತ್ತೇನೆ. ಇದು. ಇದು ನಾಟಕವಲ್ಲದೆ ಬೇರೇನೂ ಅಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+