ಚಂದ್ರನನ್ನು ತಲುಪಿದ್ದ ಹೃತಿಕ್‌ ರೋಷನ್ ತಂದೆ: ಭಾರತಕ್ಕೆ ಗೊತ್ತಿರದ ಸಿಕ್ರೆಟ್‌ ಬಿಚ್ಚಿಟ್ಟ ಮಮತಾ ಬ್ಯಾನರ್ಜಿ

ಕೋಲ್ಕತ್ತ, ಆಗಸ್ಟ್‌ 24: ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಯಶಸ್ವಿಯಾಗಿ ಲ್ಯಾಂಡ್‌ ಆಗಿರುವ ಇಸ್ರೋದ ಚಂದ್ರಯಾನ 3 ಭಾರತೀಯರ ಹೆಮ್ಮೆಗೆ ಪಾತ್ರವಾಗಿದೆ. ಈ ದೇಶದ ನಾಗರಿಕರು ಹಾಗೂ ರಾಜಕಾರಣಿಗಳು ಅಪಾರ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಇಸ್ರೋ ಸಾಧನೆಗೆ ಅಭಿನಂದನೆ ತಿಳಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತಕ್ಕೆ ಗೊತ್ತಿರದ ಸಿಕ್ರೆಟ್‌ವೊಂದನ್ನು ಬಿಚ್ಚಿಟ್ಟಿದ್ದಾರೆ.

ದೇಶದ ವಿರೋಧ ಪಕ್ಷದ ನಾಯಕಿಯೂ ಆಗಿರುವ ಮಮತಾ ಬ್ಯಾನರ್ಜಿ ಅವರು ಬುಧವಾರ ಇಸ್ರೋಗೆ ಧನ್ಯವಾದಗಳನ್ನು ಹೇಳಿದ್ದಾರೆ. ಈ ವಿಚಾರದ ಕುರಿತು ಮಾತನಾಡಿದ ಅವರು ಗುಟ್ಟೊಂದನ್ನು ಬಿಟ್ಟು ಕೊಟ್ಟಿದ್ದಾರೆ.

Mamata Banerjees Rakesh Roshan gaffe in viral video after Chandrayaan 3 landing

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ತಂದೆ ರಾಕೇಶ್‌ ರೋಷನ್‌ ಅವರು ಚಂದ್ರನ ಮೇಲೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ್ದರು ಎಂದು ಹೇಳಿದ್ದಾರೆ.

'ಆ ಸಮಯದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಚಂದ್ರನ ಮೇಲೆ ಪದಾರ್ಪಣೆ ಮಾಡಿದ್ದ ರಾಕೇಶ್‌ ರೋಷನ್‌ ಅವರನ್ನು ಅಭಿನಂದಿಸಿದ್ದರು. ಚಂದ್ರನ ಮೇಲೆ ನಿಂತಾಗ ಭಾರತ ಹೇಗೆ ಕಾಣಿಸುತ್ತದೆ ಎಂದು ಇಂದಿರಾ ಗಾಂಧಿ ಅವರನ್ನು ಕೇಳಿದ್ದರು. ಆಗ ಅವರು ಸಾರೇ ಜಹಾ ಸೇ ಅಚ್ಚಾ ( ಜಗತ್ತಿನಲ್ಲೇ ಅತೀ ಸುಂದರವಾಗಿ ಕಾಣಿಸುತ್ತದೆ ) ಎಂಬುದಾಗಿ ರಾಕೇಶ್‌ ರೋಷನ್‌ ಹೇಳಿದ್ದರು' ಎಂದು ಮಮತಾ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಗಗನಯಾತ್ರಿ ರಾಕೇಶ್ ಶರ್ಮಾ ( ಮೊದಲ ಬಾರಿಗೆ ಚಂದ್ರನ ಮೇಲೆ ಪದಾರ್ಪಣೆ ಮಾಡಿದ ಸಾಧಕ ) ಬದಲು ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಅವರ ಹೆಸರನ್ನು ಹೇಳಿದ್ದಾರೆ.

Mamata Banerjees Rakesh Roshan gaffe in viral video after Chandrayaan 3 landing

ರಾಕೇಶ್‌ ಶರ್ಮಾ ಹೆಸರು ಹೇಳುವ ಬದಲು ರಾಕೇಶ್‌ ರೋಷನ್‌ ಹೆಸರು ಹೇಳಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿ ವ್ಯಾಪಕವಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೊ ಕ್ಲಿಪ್‌ ವೈರಲ್‌ ಆಗಿದೆ.

ಸಾಪ್ಟ್‌ ಲ್ಯಾಂಡಿಂಗ್‌ ಅಂದ್ರೆ ನಿತೀಶ್‌ ಕುಮಾರ್‌ಗೆ ಗೊತ್ತೇ ಇಲ್ಲ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಚಂದ್ರಯಾನ 3 ಕುರಿತು ಪ್ರಶ್ನಿಸಲಾಗಿದೆ. ಚಂದ್ರನ ಮೇಲೆ ರಾಕೆಟ್‌ನ ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಕೇಳಲಾಗಿದೆ. ಆದರೆ, ಅವರಿಗೆ ಈ ಪ್ರಶ್ನೆ ಅರ್ಥವಾಗದೇ ತಮ್ಮ ಜೊತೆಗಿದ್ದ ಸಚಿವರನ್ನು ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್‌ ಆಗಿದೆ. ನಿತೀಶ್ ಕುಮಾರ್ ಹಾಗೂ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಪ್ರಮುಖ ನಾಯಕರು

ಪ್ರಧಾನಿ ಮೋದಿ ಕೃತಜ್ಞತೆ

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಶುಭ ಹಾರೈಸಿದ ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕೃತಜ್ಞತೆ ಸಲ್ಲಿಸಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಶುಭಾಷಯಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ, 'ಈ ಮೈಲಿಗಲ್ಲು ಕೇವಲ ಭಾರತದ ಹೆಮ್ಮೆಯಲ್ಲ. ಇದು ಮಾನವನ ಪ್ರಯತ್ನ ಮತ್ತು ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ' ಎಂದು ಅವರು ಹೇಳಿದರು.

'ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ಇದು ಭಾರತೀಯ ಜನತೆಗೆ ಐತಿಹಾಸಿಕ ಮೈಲಿಗಲ್ಲು ಮತ್ತು ಹೆಮ್ಮೆಯ ಕ್ಷಣವಾಗಿದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವು ನಿಜವಾದ ಪ್ರವರ್ತಕವಾಗಿದೆ. ಭಾರತೀಯರ ಈ ಯಶಸ್ಸು ಪ್ರಪಂಚದಾದ್ಯಂತದ ಸಂಶೋಧಕರಿಗೆ ಪ್ರಯೋಜನವನ್ನು ನೀಡುತ್ತದೆ' ಎಂದು ಯೂರೋಪ್‌ ಯುನಿಯನ್‌ ಅಧ್ಯಕ್ಷರು ಟ್ವೀಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+