ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಮಾ ಮಸೀದಿಯನ್ನು ಧ್ವಂಸಗೊಳಿಸಿ: ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 23: ದೆಹಲಿಯ ಜಮಾ ಮಸೀದಿಯನ್ನು ಧ್ವಂಸ ಮಾಡುವಂತೆ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉನ್ನಾವೊ ಕ್ಷೇತ್ರದ ಸಂಸದರಾದ ಸಾಕ್ಷಿ ಮಹಾರಾಜ್, ಒಂದು ವೇಳೆ ಮಸೀದಿಯನ್ನು ಧ್ವಂಸಗೊಳಿಸಿದಾಗ ಹಿಂದೂ ದೇವತೆಗಳ ವಿಗ್ರಹ ಪತ್ತೆಯಾಗದೆ ಇದ್ದರೆ ತಮ್ಮನ್ನು ನೇಣಿಗೇರಿಸುವಂತೆ ಸವಾಲು ಹಾಕಿದ್ದಾರೆ.

'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!

ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾಗಿದೆ ಎಂದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಎಸ್ಪಿ ರಾಜ್ಯಾಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Sakshi Maharaj calls for demolition of Delhis Jama Masjid

'ನಾನು ರಾಜಕೀಯಕ್ಕೆ ಬಂದಾಗ ನನ್ನ ಮೊದಲ ಹೇಳಿಕೆ ನೀಡಿದ್ದು ಮಥುರಾದಲ್ಲಿ. ಅಯೋಧ್ಯಾ, ಮಥುರಾ ಮತ್ತು ಕಾಶಿಯನ್ನು ಬಿಡಲು ದೆಹಲಿಯ ಜಮಾ ಮಸೀದಿಯನ್ನು ಉರುಳಿಸಬೇಕು. ಅದರ ಮೆಟ್ಟಿಲುಗಳ ಕೆಳಗೆ ವಿಗ್ರಹಗಳು ಪತ್ತೆಯಾಗದೆ ಇದ್ದರೆ ನನ್ನನ್ನು ನೇಣಿಗೇರಿಸಬೇಕು. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ' ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾಗಿ ಇಂಡಿಯನ್ಸ್ ಎಕ್ಸ್‌ ಪ್ರೆಸ್ ವರದಿ ಮಾಡಿದೆ.

ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಭಾರತದಲ್ಲಿ ಶರಿಯಾ ಕಾನೂನು ಬರಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಜುಲೈನಲ್ಲಿ ಅವರು ಹೇಳಿದ್ದರು.

ಬಾಯ್ ಫ್ರೆಂಡ್ ಗಳ ಮೇಲೆ ಸುಳ್ಳು ಅತ್ಯಾಚಾರ ದೂರು ಕೊಡ್ತಾರೆ ಹೆಣ್ಣುಮಕ್ಕಳು: ಹರಿಯಾಣ ಸಿಎಂಬಾಯ್ ಫ್ರೆಂಡ್ ಗಳ ಮೇಲೆ ಸುಳ್ಳು ಅತ್ಯಾಚಾರ ದೂರು ಕೊಡ್ತಾರೆ ಹೆಣ್ಣುಮಕ್ಕಳು: ಹರಿಯಾಣ ಸಿಎಂ

ದೇಶಕ್ಕೆ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದ್ದ ಅವರು, ಜನಸಂಖ್ಯಾ ಸ್ಫೋಟಕ್ಕೆ ಮುಸ್ಲಿಮರೇ ಕಾರಣ ಎಂದೂ ಹೇಳಿಕೆ ನೀಡಿದ್ದರು.

ಅಲ್ಲದೆ, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಪರ ಮಾತನಾಡಿದ್ದ ಸಾಕ್ಷಿ, ಅವರೊಬ್ಬ ಸರಳ ಮನುಷ್ಯ ಎಂದು ಬಣ್ಣಿಸಿದ್ದರು.

English summary
In a highly controversial remark, BJP MP from Unnao, Sakshi Maharaj, on Friday called for the demolition of Jama Masjid in Delhi and said he should be hanged if idols of Hindu gods are not found there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X