ಪಿಕ್ಚರ್ ಅಭಿ ಬಾಕಿ ಹೇ ಮೇರೇ ದೋಸ್ತ್: ಮೋದಿಯನ್ನು ಕಿಚಾಯಿಸಿದ ರಾಹುಲ್ ಗಾಂಧಿ

ನವದೆಹಲಿ, ನವೆಂಬರ್ 13: ರಫೇಲ್ ಒಪ್ಪಂದದಲ್ಲಿ 'ಕಳ್ಳತನ' ಮಾಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಲೇವಡಿ ಮಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಕಳ್ಳತನವನ್ನು ಮೋದಿ ಅವರು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ವಾಯುಪಡೆಯನ್ನು ಕೇಳದೆಯೇ ಒಪ್ಪಂದದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಮತ್ತು ಅಂಬಾನಿ ಜೇಬಿಗೆ 30 ಸಾವಿರ ಕೋಟಿ ರೂ. ಹಾಕಿರುವುದನ್ನು ಅಫಿಡವಿಟ್‌ನಲ್ಲಿ ಒಪ್ಪಿದ್ದಾರೆ. ಪಿಚ್ಚರ್ ಬರುವುದು ಇನ್ನೂ ಬಾಕಿ ಇದೆ, ನನ್ನ ಗೆಳೆಯ' ಎಂದು ಕೊನೆಯಲ್ಲಿ ಸಿನಿಮಾ ಸಂಭಾಷಣೆಯನ್ನು ಸೇರಿಸಿ ಹೇಳಿದ್ದಾರೆ.

ಡಸಾಲ್ಟ್ ಸಿಇಒ ಎರಿಟ್ ಟ್ರಾಪ್ಪಿಯರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಉಲ್ಲೇಖಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

rahul gandhi tweet on narendra modi rafale deal admitte theft in supreme court

ಡಸಾಲ್ಟ್ ಮತ್ತು ಎಚ್‌ಎಎಲ್ ನಡುವೆ ಕೆಲಸ ಹಂಚಿಕೆ ಸಂಬಂಧ ಒಪ್ಪಂದ ಅಂತಿಮಗೊಂಡಿತ್ತು ಎಂಬುದನ್ನು ಎರಿಕ್ ಒಪ್ಪಿಕೊಂಡಿದ್ದಾರೆ. ಹಾಗಾದರೆ ಯಾರ ಹೇಳಿಕೆ ಸರಿ? ಅವರು ಸ್ಪಷ್ಟೀಕರಣ ನೀಡಬೇಕು ಎಂದು ಶರ್ಮಾ ಆಗ್ರಹಿಸಿದ್ದಾರೆ.

ಡಸಾಲ್ಟ್ ಮತ್ತು ಎಚ್ಎಎಲ್ ಹೆಚ್ಚೂ ಕಡಿಮೆ ಒಪ್ಪಂದ ಅಂತಿಮಗೊಳಿಸಿವೆ ಎಂದು 2015ರ ಮಾರ್ಚ್ 25ರಂದು ಭಾರತೀಯ ವಾಯುಪಡೆ ಮುಖ್ಯಸ್ಥ ಅರುಪ್ ರಹಾ ಮತ್ತು ಎಚ್‌ಎಎಲ್ ಮುಖ್ಯಸ್ಥರ ಸಮ್ಮುಖದಲ್ಲಿ ಏಕೆ ಹೇಳಿಕೆ ನೀಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+