• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನಾನು ಸುಳ್ಳು ಹೇಳೊಲ್ಲ': ರಾಹುಲ್ ಗಾಂಧಿ ಮೇಲೆ ರಫೇಲ್ ಸಿಇಒ ಸಿಟ್ಟು

|

ಮಾರ್ಸಿಲ್ಲಿ (ಫ್ರಾನ್ಸ್), ನವೆಂಬರ್ 13: ರಫೇಲ್ ಜೆಟ್ ಆಫ್‌ಸೆಟ್ ಒಪ್ಪಂದದ ವಿಚಾರವಾಗಿ ಡಸಾಲ್ಟ್ ಮತ್ತು ರಿಲಯನ್ಸ್ ಪಾಲುದಾರಿಕೆಯ ಕುರಿತು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಡಸಾಲ್ಟ್ ಏವಿಯೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎರಿಕ್ ಟ್ರಾಪ್ಪಿಯರ್ ಕಿಡಿಕಾರಿದ್ದಾರೆ.

'ನಾನು ಸುಳ್ಳು ಹೇಳುವುದಿಲ್ಲ. ನಾನು ಈ ಹಿಂದೆ ಘೋಷಿಸಿದ ಸತ್ಯ ಮತ್ತು ನಾನು ನೀಡಿದ ಹೇಳಿಕೆಗಳೆಲ್ಲವೂ ನಿಜ. ನನಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ನನ್ನಂತೆ ಸಿಇಒ ಹುದ್ದೆಯಲ್ಲಿ ಇದ್ದರೆ ನೀವೂ ಸುಳ್ಳು ಹೇಳುವುದಿಲ್ಲ' ಎಂದು ಟ್ರಾಪ್ಪಿಯರ್ ರಾಹುಲ್ ಗಾಂಧಿ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಫೇಲ್ ಒಪ್ಪಂದಕ್ಕೆ ಎಚ್‌ಎಎಲ್‌ಅನ್ನು ಏಕೆ ಆಯ್ದುಕೊಳ್ಳಲಿಲ್ಲ: ಕಾರಣ ನೀಡಿದ ಕೇಂದ್ರ ಸರ್ಕಾರ

ಅನಿಲ್ ಅಂಬಾನಿ ಅವರ ನಷ್ಟದಲ್ಲಿರುವ ರಿಲಯನ್ಸ್ ಡಿಫೆನ್ಸ್‌ನಲ್ಲಿ ಡಸಾಲ್ಟ್ 284 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದು, ಆ ಹಣವನ್ನು ನಾಗಪುರದಲ್ಲಿ ಭೂಮಿ ಖರೀದಿ ಮಾಡಲು ಬಳಸಿಕೊಳ್ಳಲಾಗಿದೆ. ಡಸಾಲ್ಟ್ ಸಿಇಒ ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆದರೆ ಮೋದಿ ಅವರು ಉಳಿಯುವುದು ಸಾಧ್ಯವಿಲ್ಲ ಎಂದು ನ.2ರಂದು ರಾಹುಲ್ ಗಾಂಧಿ ಹೇಳಿದ್ದರು.

ಫ್ರಾನ್ಸ್‌ನ ಮಾರ್ಸಿಲ್ಲಿ ನಗರದಲ್ಲಿ ಎಎನ್ಐ ಜತೆ ಮಾತನಾಡಿದ ಟ್ರಾಪ್ಪಿಯರ್, ಕಾಂಗ್ರೆಸ್ ಪಕ್ಷದೊಂದಿಗೆ ಈ ಮೊದಲು ವ್ಯವಹಾರ ನಡೆಸಿದ ಅನುಭವ ಇದೆ. ಆದರೆ, ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ತಮಗೆ ನೋವನ್ನುಂಟು ಮಾಡಿದೆ ಎಂದು ಪ್ರತಿಕ್ರಿಯಿಸಿದರು.

ರಫೇಲ್: ಬೆಲೆಯ ವಿವರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ನೀಡಿದ ಕೇಂದ್ರ

'ಕಾಂಗ್ರೆಸ್ ಜತೆ ಸುದೀರ್ಘ ಕಾಲದ ಒಡನಾಟ ಇದೆ. ಭಾರತದೊಂದಿಗೆ ನಮ್ಮ ಮೊದಲ ಒಪ್ಪಂದ ನಡೆದಿದ್ದು 1953ರಲ್ಲಿ. ನೆಹರೂ ಮತ್ತು ಇತರೆ ಪ್ರಧಾನಿಗಳ ಜತೆ ನಾವು ಭಾರತದಲ್ಲಿ ಕೆಲಸ ಮಾಡಿದ್ದೇವೆ. ಆದರೆ, ನಾವು ಯಾವುದೇ ಪಕ್ಷದೊಂದಿಗೆ ಕೆಲಸ ಮಾಡಿಲ್ಲ. ನಾವು ಭಾರತದ ವಾಯುಪಡೆ ಮತ್ತು ಭಾರತ ಸರ್ಕಾರಕ್ಕೆ ಯುದ್ಧ ವಿಮಾನದಂತಹ ಸಮರ ಉಪಕರಣಗಳನ್ನು ಪೂರೈಸುತ್ತಿದ್ದೇವೆ. ಇದು ಬಹಳ ಮುಖ್ಯವಾದುದು' ಎಂದು ಹೇಳಿದರು.

ಪಾಲುದಾರಿಕೆಯಲ್ಲಿ ಹೂಡಿಕೆ

ಪಾಲುದಾರಿಕೆಯಲ್ಲಿ ಹೂಡಿಕೆ

'ನಾವು ರಿಲಯನ್ಸ್‌ನಲ್ಲಿ ಹಣ ಹೂಡಿಕೆ ಮಾಡುತ್ತಿಲ್ಲ. ಈ ಹಣವು ಜಂಟಿ ಪಾಲುದಾರಿಕೆಗೆ ಹೋಗುತ್ತಿದೆ. ನನ್ನ ಬಳಿ ಈ ಒಪ್ಪಂದಂಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಭಾಗದ ನೇತೃತ್ವವನ್ನು ವಹಿಸಿಕೊಂಡಿರುವ ಡಸಾಲ್ಟ್ ಕಂಪೆನಿಯ ಎಂಜಿನಿಯರ್‌ಗಳು ಮತ್ತು ಕೆಲಸಗಾರರಿದ್ದಾರೆ. ಇದೇ ವೇಳೆ, ತಮ್ಮ ದೇಶದ ಅಭಿವೃದ್ಧಿಗೆ ಬಯಸಿ ಜಂಟಿ ಪಾಲುದಾರಿಕೆಯಲ್ಲಿ ಹಣ ಹೂಡಿಕೆ ಮಾಡುವ ರಿಲಯನ್ಸ್‌ನಂತಹ ಭಾರತೀಯ ಕಂಪೆನಿಯೂ ಇವೆ. ಹೀಗಾಗಿ ಆ ಕಂಪೆನಿ ಯುದ್ಧ ವಿಮಾನಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಲಿದೆ' ಎಂದರು.

50:50 ಹೂಡಿಕೆ

ಡಸಾಲ್ಟ್ ಮಾಡಿರುವ ಹೂಡಿಕೆ ಕುರಿತು ಸ್ಪಷ್ಟೀಕರಣ ನೀಡಿದ ಟ್ರಾಪ್ಪಿಯರ್, ಸರ್ಕಾರಿ ನಿಯಮಾವಳಿಗಳ ಅನ್ವಯ ಷೇರು ಹಂಚಿಕೆ ಒಪ್ಪಂದವು ಶೇ 49ರಷ್ಟು ಡಸಾಲ್ಟ್‌ಗೆ ಇದ್ದರೆ, ಶೇ 51ರಷ್ಟು ರಿಲಯನ್ಸ್‌ದ್ದಾಗಿರುತ್ತದೆ. ಹೀಗಾಗಿ ಈ ಮೊತ್ತವನ್ನು ರಿಲಯನ್ಸ್ ಸರಿದೂಗಿಸಲಿದೆ ಎಂದು ತಿಳಿಸಿದರು.

ಈ ಕಂಪೆನಿಯಲ್ಲಿ ನಾವಿಬ್ಬರೂ ಸುಮಾರು 800 ಕೋಟಿ ರೂಗಳನ್ನು 50:50ಯಾಗಿ ಹೂಡಿಕೆ ಮಾಡಬೇಕಿದೆ. ಕೆಲಸ ಆರಂಭಿಸಲು, ಕೆಲಸಗಾರರು ಮತ್ತು ಉದ್ಯೋಗಿಗಳಿಗೆ ವೇತನ ನೀಡಲು ಮುಂತಾದವುಗಳಿಗಾಗಿ ಈಗಾಗಲೇ 40 ಕೋಟಿ ರೂ. ಹಣ ವಿನಿಯೋಗಿಸಿದ್ದೇವೆ. ಆದರೆ ಇದು 800 ಕೋಟಿ ರೂ.ಗೆ ಹೆಚ್ಚಳವಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಡಸಾಲ್ಟ್ 400 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದರು.

ಆಫ್‌ಸೆಟ್ ಉತ್ಪಾದನೆಯ ಪಾಲುದಾರಿಕೆ ಇಲ್ಲ: ಎಚ್‌ಎಎಲ್ ಸ್ಪಷ್ಟನೆ

30 ಕಂಪೆನಿಗಳ ಜತೆಗೆ ಕೆಲಸ

30 ಕಂಪೆನಿಗಳ ಜತೆಗೆ ಕೆಲಸ

ಆಫ್‌ಸೆಟ್ ಕೆಲಸಗಳನ್ನು ನಿರ್ವಹಿಸಲು ಡಸಾಲ್ಟ್ ಏಳು ವರ್ಷಗಳ ಅವಧಿ ಹೊಂದಿದೆ. ಮೊದಲ ಮೂರು ವರ್ಷಗಳಲ್ಲಿ ನಾವು ಯಾರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಹೇಳಿಕೊಳ್ಳುವಂತಿಲ್ಲ. ನಾವು ಈಗಾಗಲೇ 30 ಕಂಪೆನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಕೆಲಸ ಹಂಚಿಕೊಂಡಿದ್ದೇವೆ. ಇವು ಒಪ್ಪಂದಕ್ಕೆ ಅನ್ವಯ ಶೇ 40ರಷ್ಟು ಆಫ್‌ಸೆಟ್ ಚಟುವಟಿಕೆಗಳನ್ನು ನಿಭಾಯಿಸುತ್ತವೆ. ಶೇ 10ರಷ್ಟು ರಿಲಯನ್ಸ್ ನೋಡಿಕೊಳ್ಳುತ್ತದೆ. ಉಳಿದ ಶೇ 30ರಷ್ಟು ವ್ಯವಹಾರಗಳು ಈ ಕಂಪೆನಿಗಳು ಮತ್ತು ಡಸಾಲ್ಟ್ ನಡುವಿನ ನೇರ ಒಪ್ಪಂದದ ಮೂಲಕ ನಡೆಯುತ್ತವೆ.

ಬೆಲೆ ಅಗ್ಗವಾಗಿದೆ

ಬೆಲೆ ಅಗ್ಗವಾಗಿದೆ

ಈಗಿನ ರಫೆಲ್ ವಿಮಾನಗಳು ಶೇ 9ರಷ್ಟು ಅಗ್ಗವಾಗಿವೆ. 36 ವಿಮಾನಗಳ ಬೆಲೆಯು 18 ವಿಮಾನಗಳಿಗೆ ಸಮನಾಗಿದೆ. 18ರ ಎರಡುಪಟ್ಟು 36. ಹಾಗೆ ನೋಡಿದರೆ ದರವನ್ನು ದುಪ್ಪಟ್ಟು ಮಾಡಬೇಕಾಗಿತ್ತು. ಆದರೆ, ಸರ್ಕಾರದಿಂದ ಸರ್ಕಾರದ ನಡುವೆ ಕೆಲವು ವ್ಯವಹಾರಗಳು ನಡೆದಿವೆ. ನಾನು ದರವನ್ನು ಶೇ 9ರಷ್ಟು ಇಳಿಸಲೇಬೇಕಾಗಿತ್ತು. ಈ ಮೊದಲು ಕಾಂಗ್ರೆಸ್ ಸರ್ಕಾರ ಮಾಡಿಕೊಂಡ 126 ಯುದ್ಧ ವಿಮಾನಗಳ ಬೆಲೆಗಿಂತಲೂ 36 ಯುದ್ಧ ವಿಮಾನಗಳ ಒಪ್ಪಂದದಲ್ಲಿನ ಬೆಲೆ ಕಡಿಮೆ.

'ರಫೇಲ್ ರಾದ್ಧಾಂತದ ತನಿಖೆಯಾದರೆ ಮೋದಿ ಕತೆ ಅಷ್ಟೇ ಎಂದ ರಾಹುಲ್!'

ಎಚ್‌ಎಎಲ್ ಜತೆ ಪಾಲುದಾರಿಕೆ ಏಕಿಲ್ಲ?

ಎಚ್‌ಎಎಲ್ ಜತೆ ಪಾಲುದಾರಿಕೆ ಏಕಿಲ್ಲ?

ಆರಂಭದಲ್ಲಿ 126 ಯುದ್ಧ ವಿಮಾನಗಳ ತಯಾರಿಕೆ ಒಪ್ಪಂದದಲ್ಲಿ ಎಚ್‌ಎಎಲ್ ಮತ್ತು ರಿಲಯನ್ಸ್ ಎರಡರ ಜತೆಗೂ ಡಸಾಲ್ಟ್ ಪಾಲುದಾರಿಕೆಗೆ ಮುಂದಾಗಿತ್ತು. 126 ವಿಮಾನಗಳನ್ನು ತಯಾರಿಸುವ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಏಕೆಂದರೆ ಭಾರತ ಸರ್ಕಾರ 36 ವಿಮಾನಗಳನ್ನು ತುರ್ತಾಗಿ ಖರೀದಿ ಮಾಡಲು ಬಯಸಿತ್ತು.

ಹೀಗಾಗಿ ನಾನು ರಿಲಯನ್ಸ್ ಜತೆ ಒಪ್ಪಂದ ಮುಂದುವರಿಸಲು ತೀರ್ಮಾನಿಸಿದೆ. ಕೆಲವು ದಿನಗಳ ಹಿಂದಷ್ಟೇ ಎಚ್‌ಎಎಲ್ ಕೂಡ ತಾನು ಆಫ್‌ಸೆಟ್ ಕಾರ್ಯಗಳ ಭಾಗವಾಗಲು ಬಯಸುತ್ತಿಲ್ಲ ಎಂದು ಹೇಳಿದೆ. ಇದು ನಾನೇ ತೆಗೆದುಕೊಂಡ ತೀರ್ಮಾನ. ಹೊಸ ಖಾಸಗಿ ಕಂಪೆನಿಯಲ್ಲಿ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುವುದು ರಿಲಯನ್ಸ್ ನಿರ್ಧಾರವಾಗಿದೆ.

ರಫೇಲ್ ಒಪ್ಪಂದ: ಬೆಲೆ ಮತ್ತು ತಾಂತ್ರಿಕ ವಿವರ ನೀಡಲು ಸುಪ್ರೀಂಕೋರ್ಟ್ ಸೂಚನೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dassault Aviation CEO Eric Trappier rubbished allegation made by Congress President Rahul Gandhi that he lied about the details of Dassault- Reliance Joint Venture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more