ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಚಳಿಗಾಲದ ಅಧಿವೇಶನ ದಿನ 13: ಉಭಯ ಸದನಗಳಲ್ಲಿ ಯಾವ್ಯಾವ ಮಸೂದೆ ಮಂಡನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 15:12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕರು ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಇನ್ನೊಂದೆಡೆ, ಬಿಜೆಪಿ ಸಂಸದರ ಕಿರೋರಿ ಲಾಲ್ ಮೀನಾ ಸಿಂಗ್ ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಿ ಎಂದು ಒತ್ತಾಯಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿದೇಶಿ ಖಾತೆಗಳಲ್ಲಿ ಕಪ್ಪಯ ಹಣವಿರುವ ಕುರಿತು ಅಧಿಕೃತ ಅಂದಾಜು ಇಲ್ಲ ಎಂದು ಸರ್ಕಾರ ತಿಳಿಸಿದೆ.

ಏತನ್ಮಧ್ಯೆ, 12 ಸಂಸದರನ್ನು ಸದನದಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯುವಂತೆ ಕೋರಿ ಪ್ರತಿಪಕ್ಷಗಳು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

Parliament Winter Session Day 13: Bill To Further Amend NDPS Act To Be Moved Today

12 ಸದಸ್ಯರ ಅಮಾನತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನದಿಂದಲೂ ಮೇಲ್ಮನೆ ನಿರಂತರ ಮುಂದೂಡಿಕೆಗೆ ಸಾಕ್ಷಿಯಾಗಿದೆ.

ಸಿಬಿಐ ನಿರ್ದೇಶಕರ ಅಧಿಕಾರಾವಧಿ ವಿಸ್ತರಿಸುವ ಮಸೂದೆ ಮಂಡನೆ: ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸುವ ಮಸೂದೆಯನ್ನು ಮಂಡಿಸಲಾಯಿತು. ಪ್ರಸ್ತುತ ಎರಡು ವರ್ಷಗಳಿವೆ. ದೆಹಲಿಯ ವಿಶೇಷ ಪೊಲೀಸ್ ಸ್ಥಾಪನೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು,ಲೋಕಸಭೆಯಲ್ಲಿ ಡಿಸೆಂಬರ್ 9ರಂದು ಮಸೂದೆಯನ್ನು ಅಂಗೀಕರಿಸಲಾಗಿತ್ತು.

ಗಡಿ ವಿವಾದಗಳನ್ನು ಹೊಂದಿರುವ ರಾಜ್ಯಗಳನ್ನು ಪಟ್ಟಿ ಮಾಡಿದ ಸರ್ಕಾರ: ಸರ್ಕಾರವು ಗಡಿ ವಿವಾದಗಳನ್ನು ಹೊಂದಿರುವ ರಾಜ್ಯಗಳ ಹೆಸರನ್ನು ಪಟ್ಟಿ ಮಾಡಿದೆ. ಆಂಧ್ರಪ್ರದೇಶ-ಒಡಿಶಾ, ಹರಿಯಾಣ-ಹಿಮಾಚಲಪ್ರದೇಶ, ಲಡಾಖ್- ಹಿಮಾಚಲಪ್ರದೇಶ, ಮಹಾರಾಷ್ಟ್ರ-ಕರ್ನಾಟಕ, ಅಸ್ಸಾಂ-ಅರುಣಾಚಲಪ್ರದೇಶ, ಅಸ್ಸಾಂ-ನಾಗಾಲ್ಯಾಂಡ್, ಅಸ್ಸಾಂ-ಮೆಘಾಲಯ, ಅಸ್ಸಾಂ-ಮಿಜೋರಾಂ ನಡುವೆ ಗಡಿ ವಿವಾದಗಳಿವೆ.

ಕಳೆದ 7 ವರ್ಷಗಳಲ್ಲಿ 8.81 ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ಲೋಕಸಭೆಯಲ್ಲಿ ಇಂದು: 2021-2022 ಹಣಕಾಸು ವರ್ಷದಲ್ಲಿ ಅನುಕೂಲವಾಗುವಂತೆ ನಿರ್ಮಲಾ ಸೀತಾರಾಮನ್ ಇಂದು ಅಧಿಕೃತ ಪಾವತಿಗೆ ಸಂಬಂಧಿಸಿದಂತೆ ಮಸೂದೆ ಮಂಡಿಸಲಿದ್ದಾರೆ.

ಅಕ್ರಮ ಸಾಗಾಣಿಕೆಗೆ ಹಣಕಾಸು ಒದಗಿಸುವವರ ಶಿಕ್ಷೆಗೆ ಸಂಬಂಧಿಸಿದ ಪ್ರಮುಖ ನಿಬಂಧನೆಯನ್ನು ನಿಷ್ಕ್ರಿಯಗೊಳಿಸಿರುವ ಅಸ್ತಿತ್ವದಲ್ಲಿರುವ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಲ್ಲಿನ ಕರಡು ದೋಷವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ರಾಜ್ಯಸಭೆಯಲ್ಲಿ ಇಂದು: ಲೋಕಸಭೆಯಲ್ಲಿ ಅಂಗೀಕರಿಸಿದಂತೆ ನಾರ್ಕೊಟಿಕ್ ಡ್ರಗ್ಸ್ ಮತ್ತಯ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ 1985 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆಯನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.

Recommended Video

IPL 2022 Mega Auction: IPL ನಲ್ಲಿ ದುಡ್ಡಿನ ಸುರಿಮಳೆ! | Oneindia Kannada

English summary
Opposition MPs on Tuesday led a protest march from the Gandhi statue to Vijay Chowk demanding the revocation of the suspension of the 12 MPs from the Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X