ಚುನಾವಣಾ ಕರ್ತವ್ಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಿಮಗೆ ತಿಳಿದಿದೆಯೇ?
ಬೆಂಗಳೂರು, ಏಪ್ರಿಲ್. 12: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ. ಇಂದಿನಿಂದ ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭವಾಗಿದೆ. ಈ ಬೆನ್ನಲ್ಲೇ ಚುನಾವಣಾ ಕರ್ತವ್ಯಕ್ಕೆ ಸಾವಿರಾರು ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗಾದರೇ ಚುನಾವಣಾ ಕರ್ತವ್ಯದಲ್ಲಿ ಏನು ಮಾಡಬೇಕು.. ಏನು ಮಾಡಬಾರದು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನು ಮಾಡಬಾರದು (DON'TS)
* ಮತದಾನ ಸಾಮಗ್ರಿಗಳನ್ನು ವಿತರಿಸುವಾಗ ನೀಡುವ ಕಂಟ್ರೋಲ್ ಯುನಿಟ್‌ಗೆ ಸೀಲ್ ಮಾಡಿ ಹಾಕಿರುವ ಪಿಂಕ್ ಪೇಪರ್ ಸೀಲ್ (Pink Paper Seal) ಅನ್ನು ಡ್ಯಾಮೇಜ್ ಮಾಡಬಾರದು, ಹರಿಯಬಾರದು, ಕೀಳಬಾರದು, ಅದರ ಮೇಲೆ ಏನನ್ನೂ ಬರೆಯಬಾರದು ಹಾಗೂ ಸಹಿ ಇತ್ಯಾದಿ ಮಾಡಬಾರದು.

* ಮತದಾನ ಸಾಮಗ್ರಿಗಳನ್ನು ವಿತರಿಸುವಾಗ ನೀಡುವ ಬ್ಯಾಲೆಟ್ ಯೂನಿಟ್‌ಗೆ ಸೀಲ್ ಮಾಡಿ ಹಾಕಿರುವ ಪಿಂಕ್ ಪೇಪರ್ ಸೀಲ್ ಅನ್ನು ಡ್ಯಾಮೇಜ್ ಮಾಡಬಾರದು, ಹರಿಯಬಾರದು, ಕೀಳಬಾರದು, ಅದರ ಮೇಲೆ ಏನನ್ನೂ ಬರೆಯಬಾರದು ಹಾಗೂ ಸಹಿ ಇತ್ಯಾದಿ ಮಾಡಬಾರದು.
* ಮತದಾನ ಸಾಮಗ್ರಿಗಳನ್ನು ವಿತರಿಸುವಾಗ ನೀಡುವ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯೂನಿಟ್ ಮತ್ತು VVPAT ಗೆ ಈಗಾಗಲೇ ಸೀಲ್ ಮಾಡಿ ಹಾಕಿರುವ ಅಡ್ರೆಸ್ ಟ್ಯಾಗುಗಳನ್ನು ಡ್ಯಾಮೇಜ್ ಮಾಡಬಾರದು, ಹರಿಯಬಾರದು. ಕೀಳಬಾರದು, ಅದರ ಮೇಲೆ ಏನನ್ನೂ ಬರೆಯಬಾರದು ಹಾಗೂ ಸಹಿ ಇತ್ಯಾದಿ ಮಾಡಬಾರದು.
* ಮತದಾನದ ಹಿಂದಿನ ದಿನ ಮತ್ತು ಅಣಕು ಮತದಾನಕ್ಕಿಂತ ಮುನ್ನ ಯಾವುದೇ ಕಾರಣಕ್ಕೂ ಕಂಟ್ರೋಲ್ ಯುನಿಟ್ ಮತ್ತು ಪವರ್ ಸ್ವೀಚ್ ಆನ್ ಸ್ಥಿತಿಯಲ್ಲಿ ಇರಬಾರದು.
* ಪದೇ ಪದೇ ಕಂಟ್ರೋಲ್ ಯೂನಿಟ್ ಅನ್ನು ಸ್ವಿಚ್ ಆಫ್ ಮತ್ತು ಆನ್ ಮಾಡಬಾರದು.
* ಮತದಾನದ ಹಿಂದಿನ ದಿನ VVPATನ್ನು EVM ಗೆ ಸಂಪರ್ಕಿಸಬಾರದು.
* ಕಂಟ್ರೋಲ್ ಯೂನಿಟ್ ಅನ್ನು ಸ್ವಿಚ್ ಆನ್ ಮಾಡಿಕೊಂಡು VVPATನ್ನು ಸಂಪರ್ಕಿಸಬಾರದು.
* VVPAT ಹಿಂಭಾಗದಲ್ಲಿರುವ ಪೇಪರ್ ರೋಲ್ ನಾಬ್ ನ್ನು ವರ್ಕಿಂಗ್ ಮೋಡ್ ಅಥವಾ ಅನ್ ಲಾಕ್ ಸ್ಥಿತಿಗೆ ತರದೆ ಸಿಯು ಪವರ್ ಸ್ವಿಚ್ ಆನ್ ಮಾಡಬಾರದು.
* ಕನೆಕ್ಟರ್ ಗಳ ಮೇಲಿರುವ ಕ್ಲಿಪ್ ಗಳನ್ನು ಒತ್ತದೆ ಕೇಬಲ್ ಗಳನ್ನು ಎಳೆದು ತೆಗೆಯಬಾರದು.
*ಸಿಯುನಲ್ಲಿ ಪ್ರಿಂಟರ್ ಎರರ್ ಎಂಬ ಸಂದೇಶ ಇದ್ದಾಗ ಮತದಾನ ಪ್ರಾರಂಭಿಸಬಾರದು ಮತ್ತು ಮುಂದುವರಿಸಬಾರದು.
* ಮತದಾನ ಮುಕ್ತಾಯವಾಗುವವರೆಗೂ VVPAT ನ ನಾಬ್ ನ್ನು ಚಾಲನೆ ಮಾಡಬಾರದು.
* ನೈಜ ಮತದಾನದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ PRO ಒಬ್ಬರೇ ವೋಟಿಂಗ್ ಕಂಪಾರ್ಟ್ ಮೆಂಟ್ ಒಳಗೆ ಪ್ರವೇಶಿಸಬಾರದು.
* ನೈಜ ಮತದಾನದ ಸಂದರ್ಭದಲ್ಲಿ VVPAT ನಲ್ಲಿ ಸ್ಲಿಪ್ ಮುದ್ರಿತಗೊಂಡು ತುಂಡಾಗದೇ ನೇತಾಡುತ್ತಿದ್ದರೆ, ಅದನ್ನು ಕಂಪಾರ್ಟ್ ಮೆಂಟ್ ಒಳಗೆ ಬೀಳಿಸಲು ಯಾವುದೇ ಪ್ರಯತ್ನ ಮಾಡಬಾರದು.
*ಕಂಟ್ರೋಲ್ ಯೂನಿಟ್ ಹಿಂಭಾಗದ Power Switch ಕಂಪಾರ್ಟ್ ಮೆಂಟನ್ನು ವ್ಯಾಕ್ಸ್ ನಿಂದ ಮೊಹರು ಮಾಡಬಾರದು.
* EVM ಮತ್ತು VVPAT ಗಳಲ್ಲಿ ಏನಾದರೂ ಸಮಸ್ಯೆ ಉದ್ಭವಿಸಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಸಂದರ್ಭದಲ್ಲಿ ರಿಪೇರಿ ಮಾಡಲು ಮುಂದಾಗಬಾರದು.
* ನೈಜ ಮತದಾನದ ಸಂದರ್ಭದಲ್ಲಿ VVPAT ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಅದನ್ನು ಬದಲಾಯಿಸಿದಲ್ಲಿ ಮಾಕ್ ಪೋಲ್ ಮಾಡಬಾರದು.
* ನೈಜ ಮತದಾನದ ಸಂದರ್ಭದಲ್ಲಿ ಅಂದರೆ ಮತದಾನ ಮುಕ್ತಾಯಕ್ಕೆ ಮುನ್ನ ಕಂಟ್ರೋಲ್ ಯೂನಿಟಟ್‌ನ ಕ್ಲೋಸ್ ಬಟನ್ ನ್ನು ಯಾವುದೇ ಕಾರಣಕ್ಕೂ ಒತ್ತಬಾರದು. [ಮತಗಟ್ಟೆಯೊಳಗೆ ಮತಯಂತ್ರ ವಶಪಡಿಸಿಕೊಳ್ಳುವಂತಹ ಸಂದರ್ಭಗಳನ್ನು ಹೊರತುಪಡಿಸಿ]

* ಮತದಾರರ ಅರ್ಹತೆ ಮತ್ತು ವಯಸ್ಸಿನ ಕುರಿತು PRO ವಿಚಾರಣೆ ಮಾಡಬಾರದು.
* ಟೆಂಡರ್ ಮತದಾರರ ವಿವರಗಳನ್ನು ಮತದಾರರ ರಿಜಿಸ್ಟರ್ 17A ನಲ್ಲಿ ದಾಖಲಿಸಬಾರದು.
* ಟೆಂಡರ್ ಮತದಾರನಿಗೆ EVM ನಲ್ಲಿ ಮತ ಹಾಕಲು ಅವಕಾಶ ನೀಡಬಾರದು.
* ಮತಗಟ್ಟೆಗೆ ಮತದಾರನು ಹಾಜರಾಗಿ ಮತದಾನ ಮಾಡಲು ನಿರಾಕರಿಸಿದರೆ, ಮತದಾನ ಮಾಡುವಂತೆ ಒತ್ತಾಯ ಮಾಡಬಾರದು.
* ಗುರುತು ಮಾಡಿದ ಮತದಾರರ ಪಟ್ಟಿಯಲ್ಲಿ PB ಎಂದು ಗುರುತು ಮಾಡಿರುವ ಮತದಾರರಿಗೆ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶವಿಲ್ಲ. ಹಾಗೆ ಅಂತಹ ಮತದಾರರು ಬಂದಲ್ಲಿ ಮತದಾನ ಮಾಡಿಸಬಾರದು.
ಏನು ಮಾಡಬೇಕು (DO's)
* VVPAT ಸೂಕ್ಷ್ಮ ಯಂತ್ರವಾಗಿದ್ದು, ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲೂ ಅದರ ಮೇಲೆ ನೇರವಾಗಿ ಬೆಳಕಿನ ಕಿರಣಗಳು ಬೀಳದಂತೆ ಎಚ್ಚರ ವಹಿಸಲೇಬೇಕು.
* ಮತದಾನ ದಿನದಂದು ಬೆಳಗ್ಗೆ 5.30ಕ್ಕೆ ಅಣಕು ಮತದಾನ ಪ್ರಾರಂಭಿಸಲೇಬೇಕು.
* ಅಣಕು ಮತದಾನ ಪ್ರಾರಂಭದಲ್ಲಿ, EVM ನಲ್ಲಿ ಯಾವುದೇ ಮತ ದಾಖಲಾಗಿಲ್ಲ, VVPATನ ಸ್ಕ್ರಿಪ್ ಕಂಪಾರ್ಟ್ ಮೆಂಟ್ ಖಾಲಿ ಇದೆ, ಮತದಾರರ ರಿಜಿಸ್ಟರ್ 17A ನಲ್ಲಿ ಯಾವುದೇ ಬರವಣಿಗೆ ಮಾಡಿಲ್ಲ ಖಾಲಿ ಇದೆ ಎಂಬ ಅಂಶಗಳನ್ನು ಪೋಲಿಂಗ್ ಏಜೆಂಟರಿಗೆ ತೋರಿಸಿ ಖಾತ್ರಿಪಡಿಸಲೇಬೇಕು.
*ಅಣಕು ಮತದಾನದ ಸಂದರ್ಭದಲ್ಲಿ BUನ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಗೆ [NOTA ಸೇರಿದಂತೆ] ಕನಿಷ್ಟ ಒಂದು ಮತವನ್ನು ಚಲಾಯಿಸಲೇಬೇಕು.
* ಅಣಕು ಮತದಾನದ ಸಂದರ್ಭದಲ್ಲಿ ಒಟ್ಟಾರೆಯಾಗಿ 50 ಮತಗಳನ್ನು ಚಲಾಯಿಸಲೇಬೇಕು.
* ಅಣಕು ಮತದಾನದ ಸಂದರ್ಭದಲ್ಲಿ NOTA ಸೇರಿದಂತೆ ಪ್ರತಿಯೊಬ್ಬ ಉಮೇದುವಾರರಿಗೆ ಮತಗಳನ್ನು ದಾಖಲು ಮಾಡಲು ಪೋಲಿಂಗ್ ಅಧಿಕಾರಿಗಳು/ ಸ್ಪರ್ಧಿಸಿರುವ ಉಮೇದುವಾರರು/ ಪೋಲಿಂಗ್ ಏಜೆಂಟರ ನೆರವನ್ನು ಪಡೆದು ಅಣಕು ಮತದಾನ ನಡೆಸಬೇಕು.
* ಅಣಕು ಮತದಾನ ಮುಗಿದ ಮೇಲೆ ಕಂಟ್ರೋಲ್ ಯೂನಿಟ್ ನಲ್ಲಿ ಪ್ರದರ್ಶಿತವಾಗುವ ಫಲಿತಾಂಶದೊಂದಿಗೆ VVPAT Slip ಗಳನ್ನು ತಾಳೆ ಮಾಡಲೇಬೇಕು.
* ಅಣಕು ಮತದಾನದ ಪ್ರಕ್ರಿಯೆಯ ನಂತರ CLEAR ಬಟನ್ ಒತ್ತಲೇಬೇಕು.
* ಅಣಕು ಮತದಾನದ ನಂತರ EVM ಮತ್ತು VVPAT ಸೀಲ್ ಮಾಡುವ ಮೊದಲು ಕಂಟ್ರೋಲ್ ಯೂನಿಟ್‌ನ ಪವರ್ ಸ್ವಿಚ್ ಆಫ್ ಮಾಡಲೇಬೇಕು.
* ಅಂತಿಮವಾಗಿ TOTAL ಬಟನ್ ಒತ್ತಿ ಕಂಟ್ರೋಲ್ ಯೂನಿಟ್ ನಲ್ಲಿ ದಾಖಲಾಗಿರುವ ಮತಗಳು '0' (ಸೊನ್ನೆ) ಎಂಬುದನ್ನು ಖಾತ್ರಿಪಡಿಸಿಕೊಳ್ಳಲೇಬೇಕು.
*ನೈಜ ಮತದಾನದ ಸಂದರ್ಭದಲ್ಲಿ EVM ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಅದನ್ನು ಬದಲಾಯಿಸಿದಲ್ಲಿ ಮಾಕ್ ಪೋಲ್ ಮಾಡಲೇಬೇಕು [NOTA ಸೇರಿದಂತೆ)
* ನೈಜ ಮತದಾನವನ್ನು ಬೆಳಗ್ಗೆ 7.00 ಗಂಟೆಗೆ ಪ್ರಾರಂಭಿಸಲೇಬೇಕು.
* ನೈಜ ಮತದಾನ ಮುಕ್ತಾಯವಾದ ಮೇಲೆ ಕಂಟ್ರೋಲ್ ಯೂನಿಟ್‌ನ ಕ್ಲೋಸ್ ಬಟನ್ ಒತ್ತಲೇಬೇಕು. ನಂತರ ಕಂಟ್ರೋಲ್ ಯೂನಿಟ್‌ನ ಪವರ್ ಸ್ವೀಚ್ ಆಫ್ ಮಾಡಲೇಬೇಕು.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications