Mandya Lok Sabha Constituency: ಮಂಡ್ಯ ಚುನಾವಣಾ ಕಣದಲ್ಲಿನ ಫೈನಲ್ ಅಭ್ಯರ್ಥಿಗಳು ಇವರೇ ನೋಡಿ
ಬೆಂಗಳೂರು, ಏಪ್ರಿಲ್. 10: ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಕೊಂಡಿವೆ. ಅಭ್ಯರ್ಥಿಗಳು ಚುನಾವಣಾ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಇದೇ ವೇಳೆ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯ ಕಣದಲ್ಲಿ ಉಳಿದವರೆಷ್ಟು ಎಂಬುದನ್ನು ತಿಳಿಯೋಣ.
ರಾಜ್ಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಒಟ್ಟು 27 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ಈ 27 ಮಂದಿ ಅಭ್ಯರ್ಥಿಗಳಲ್ಲಿ 08 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿದೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕವಾದ ಏಪ್ರಿಲ್ 08 ರಂದು 05 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ಲೋಕಸಭಾ ಚುನಾಣ ಕಣದಲ್ಲಿ ಇರುವವರೇಷ್ಟು...? ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಡಾ. ಕುಮಾರ ಮಾಹಿತಿ ನೀಡಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಚಿಕ್ಕನಂಜಾಚಾರಿ, ಕೆ. ಶಿವಾನಂದ, ಲೋಲ, ಯೋಗೇಶ್ ಮತ್ತು ಶಿವನಂಜಪ್ಪ ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದಾರೆ. ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ.

ಅಂತಿಮ ಕಣದಲ್ಲಿರುವ 14 ಅಭ್ಯರ್ಥಿಗಳ ವಿವರ ಹೀಗಿದೆ
| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ಪಕ್ಷ |
| 1 | ಎಚ್.ಡಿ.ಕುಮಾರಸ್ವಾಮಿ | ಜನತಾದಳ (ಜಾತ್ಯಾತೀತ) |
| 2 | ವೆಂಕಟರಮಣೇಗೌಡ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
| 3 | ಶಿವಶಂಕರ್.ಎಸ್ | ಬಹುಜನ ಸಮಾಜ ಪಕ್ಷ |
| 4 | ಚಂದ್ರಶೇಖರ ಕೆ.ಆರ್ | ಕರ್ನಾಟಕ ರಾಷ್ಟ್ರ ಸಮಿತಿ |
| 5 | ಬೂದಯ್ಯ | ಕರುನಾಡ ಪಾರ್ಟಿ |
| 6 | ಹೆಚ್.ಡಿ.ರೇವಣ್ಣ | ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ |
| 7 | ಲೋಕೇಶ್ ಎಸ್ | ಉತ್ತಮ ಪ್ರಜಾಕೀಯ ಪಕ್ಷ |
| 8 | ಎಸ್ ಅರವಿಂದ್ | ಪಕ್ಷೇತರ |
| 9 | ಚನ್ನಮಾಯಿಗೌಡ | ಪಕ್ಷೇತರ |
| 10 | ಚಂದನ್ ಗೌಡ ಕೆ | ಪಕ್ಷೇತರ |
| 11 | ಎನ್.ಬಸವರಾಜು | ಪಕ್ಷೇತರ |
| 12 | ಬೀರೇಶ್ ಸಿ ಟಿ | ಪಕ್ಷೇತರ |
| 13 | ರಾಮಯ್ಯ.ಡಿ | ಪಕ್ಷೇತರ |
| 14 | ರಂಜಿತ ಎನ್ | ಪಕ್ಷೇತರ |
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊದಲನೇ ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications