ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ದೆಹಲಿಯ 5, 7 ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತು ರೈತರನ್ನು ಟೀಕಿಸುವ ಮೊದಲು ಪಟಾಕಿ ಸುಡುವುದನ್ನು ಬಿಡಿ"

|
Google Oneindia Kannada News

ನವದೆಹಲಿ, ನವೆಂಬರ್ 17: "ದೆಹಲಿಯ 5 ಸ್ಟಾರ್ ಮತ್ತು 7 ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತ ಜನರು ವಾಯು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂಷಿಸಿತ್ತಿದ್ದಾರೆ, ಆದರೆ ಪಟಾಕಿಗಳ ಬಗ್ಗೆ ಏಕೆ ನಿರ್ಲಕ್ಷ್ಯ ವಹಿಸಿದ್ದಾರೆ," ಎಂದು ಸುಪ್ರೀಂಕೋರ್ಟ್ ಬುಧವಾರ ಪ್ರಶ್ನೆ ಮಾಡಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯದ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ, ನಿಷೇಧದ ನಡುವೆಯೂ ಪಟಾಕಿ ಸುಡುವುದನ್ನು ನಿರ್ಲಕ್ಷಿಸುತ್ತೇವೆ'' ಎಂದು ಹೇಳಿದರು.

ದೆಹಲಿ ಎನ್‌ಸಿಆರ್‌ನಲ್ಲಿ ಶಾಲೆ-ಕಾಲೇಜು ಬಂದ್, ಶೇ.50ರಷ್ಟು ಸಿಬ್ಬಂದಿಗೆ WFH, ಕಾಮಗಾರಿಗಳಿಗೆ ಫುಲ್ ಸ್ಟಾಪ್!ದೆಹಲಿ ಎನ್‌ಸಿಆರ್‌ನಲ್ಲಿ ಶಾಲೆ-ಕಾಲೇಜು ಬಂದ್, ಶೇ.50ರಷ್ಟು ಸಿಬ್ಬಂದಿಗೆ WFH, ಕಾಮಗಾರಿಗಳಿಗೆ ಫುಲ್ ಸ್ಟಾಪ್!

"ದೆಹಲಿಯ 5 ಸ್ಟಾರ್ ಮತ್ತು 7 ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತುಕೊಳ್ಳುವ ಜನರು ವಾಯಾಮಾಲಿನ್ಯಕ್ಕೆ ರೈತರು ಹೇಗೆ ಕಾರಣರಾಗುತ್ತಾರೆ ಎಂಬ ಬಗ್ಗೆ ಟೀಕಿಸುತ್ತಾರೆ. ಪ್ರತಿ ಭೂಮಿ ಹಿಡುವಳಿಯಿಂದ ರೈತರು ಗಳಿಸುವ ಆದಾಯವನ್ನು ನೀವೇನಾದರೂ ನೋಡಿದ್ದೀರಾ?," ಎಂದು ನ್ಯಾಯಮೂರ್ತಿ ಎನ್ ವಿ ರಮಣ್ ಪ್ರಶ್ನಿಸಿದ್ದಾರೆ.

Delhi People sit in 5 star hotels and Blaming farmers for pollution, But why ignore firecrackers: SC

ಸುಪ್ರೀಂಕೋರ್ಟ್‌ಗೆ ದೆಹಲಿ ಸರ್ಕಾರದ ವರದಿ ಸಲ್ಲಿಕೆ:

ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಪ್ರಮುಖವಾಗಿ ಕಾರಣವಾಗುವ ಐದು ರಾಜ್ಯಗಳಲ್ಲಿ ಬಿಕ್ಕಟ್ಟು ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಿಬ್ಬಂದಿಯು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಆರಂಭಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ದೆಹಲಿ ಸರ್ಕಾರವು ವರದಿ ಸಲ್ಲಿಸಿದೆ.

ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ:

"ಸಾರ್ವಜನಿಕ ಕಚೇರಿಗಳು ಮುಚ್ಚಲ್ಪಟ್ಟಿದ್ದ ಒಂದು ಅಥವಾ ಎರಡು ದಿನಗಳನ್ನು ನೀವು ಏಕೆ ಗುರುತಿಸಲು ಸಾಧ್ಯವಿಲ್ಲ, ನೀವು ಸಂಚಾರವನ್ನು ಏಕೆ ಸ್ಥಗಿತಗೊಳಿಸಲಿಲ್ಲ," ಎಂದು ದೆಹಲಿ-ಎನ್‌ಸಿಆರ್‌ನಲ್ಲಿನ ಮಾಲಿನ್ಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಪ್ರಶ್ನೆಗೆ ದೆಹಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ ಉತ್ತರಿಸಿದರು. ಶೇ.100ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಕ್ರಮ ತೆಗೆದುಕೊಂಡ ಏಕೈಕ ರಾಜ್ಯ ದೆಹಲಿ ಆಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಹಣಕಾಸು ನೆರವನ್ನು ಒದಗಿಸಲಾಗಿತ್ತು," ಎಂದು ಹೇಳಿದರು.

Delhi People sit in 5 star hotels and Blaming farmers for pollution, But why ignore firecrackers: SC

"ನೀವು ಜಾರಿ ಮತ್ತು ತಪಾಸಣೆ ಕ್ರಮಕ್ಕೆ ಒತ್ತು ನೀಡಿದ್ದೀರಿ. ಇವುಗಳ ಹೊರತಾಗಿ, ನೀವು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡರೆ ಅದು ಉತ್ತಮ ಪರಿಣಾಮವನ್ನು ಬೀರುತ್ತದೆ ಅಲ್ಲವೇ," ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಸರ್ಕಾರದ ಪರ ವಕೀಲ ಭಿಷೇಕ್ ಮನು ಸಿಂಘ್ವಿ, "ಕೇಂದ್ರದ ಪಟ್ಟಿ ಮಾಡಿರುವುದರಲ್ಲಿ ಶೇ.90ರಷ್ಟು ಕೆಲಸವನ್ನು ದೆಹಲಿ ಸರ್ಕಾರ ಮಾಡಿದೆ. ನಾವು ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬಹುದು; ಆದರೆ ಅದಕ್ಕಾಗಿ ನಾವು ಟೆಂಡರ್ ಪ್ರಕ್ರಿಯೆ ನಡೆಸಬೇಕಾಗುತ್ತದೆ," ಎಂದರು.

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಎಷ್ಟಿದೆ?:

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಮಂಗಳವಾರ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ವಲಯದಲ್ಲಿ 403 ಆಗಿದೆ. ಸೋಮವಾರ ಇದೇ ಗಾಳಿಯ ಗುಣಮಟ್ಟ ಸೂಚ್ಯಂಕವು 353 ಆಗಿದೆ. ಮಧ್ಯರಾತ್ರಿ 12.27 ಕ್ಕೆ ದೆಹಲಿಯಲ್ಲಿ ಒಟ್ಟಾರೆ AQI 397 ಆಗಿತ್ತು, ಇದು 'ತೀವ್ರ' ವರ್ಗದ ಗಡಿಯಾಗಿದೆ; 400 ಕ್ಕಿಂತ ಹೆಚ್ಚಿನ ಓದುವಿಕೆಗಳನ್ನು 'ತೀವ್ರ' ಅಥವಾ 'ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಹಾಗಿದ್ದರೆ ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ. ದೆಹಲಿಯಲ್ಲಿ ಪ್ರಸ್ತುತ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟದಿಂದ ಅತಿ ಕಳಪೆ ಮಟ್ಟಕ್ಕೆ ತಲುಪಿದೆ.

English summary
People in Delhi sit in 5- and 7-star hotels and Blaming farmers for pollution, same time why ignore firecrackers: Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X