Get Updates
Get notified of breaking news, exclusive insights, and must-see stories!

Heart attack: ವಾಯು ಮಾಲಿನ್ಯ'ದಿಂದಲೂ 'ಹೃದ್ರೋಗ' ಸಮಸ್ಯೆ: ತಜ್ಞರ ವಿವರಣೆ

ಬೆಂಗಳೂರು, ನವೆಂಬರ್ 06: ಇತ್ತೀಚಿನ ದಿನಗಳಲ್ಲಿ 'ಹೃದಯ ಸಂಬಂಧಿ' ಆರೋಗ್ಯ ಸಮಸ್ಯೆಗಳು ಸಾಮಾನ್ಯ ಎಂಬತಾಗಿದೆ. ಅತೀಯಾದ ತಂಬಾಕು ಸೇವನೆ, ವ್ಯಾಯಾಮ ಮಾಡದಿರುವುದು ಸೇರಿದಂತೆ ಹಲವು ಕಾರಣಗಳಿಂದ ಹೃದ್ರೋಗದಿಂದ ಜನರು ಬಳಲುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಯು ಮಾಲಿನ್ಯ ಕಾರಣದಿಂದ ಹೃದಯ ಕಾಯಿಲೆಗಳು ಹೆಚ್ಚಾಗುತ್ತಿವೆ. ಅಚ್ಚರಿ ಎನಿಸಿದರೂ ಇದು ಸತ್ಯ.

ಹೌದು, ಅತೀಯಾದ ಮದ್ಯಪಾನ, ತಂಬಾಕು ಸೇವನೆ, ವ್ಯಾಯಾಮದ ಕೊರತೆ, ಒತ್ತಡದಂತಹ ಸಮಸ್ಯೆಗಳು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದರು. ಇದೀಗ ವಾಯು ಮಾಲಿನ್ಯ ಕಾರಣದಿಂದಾಗಿ ಶೇ. 10ರಷ್ಟು ರೋಗಿಗಳು ಹೃದ್ರೋಗದಿಂದ ಬಳಲುತ್ತಿದ್ದಾರೆ ಎಂದು ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾಹಿತಿ ನೀಡಿದ್ದಾರೆ.

Heart Attack: Air Pollution Causes Heart Disease Like Tobacco and Alcohol, That is Invisible Killer

ಭಾರತದ ಅನೇಕ ನಗರಗಳಲ್ಲಿ ವಾಯು ಮಾಲಿನ್ಯ ಹದಗೆಡುತ್ತಿದೆ. ದಿನೇ ದಿನೆ ಈ ಉಸಿರಾಟ ಸಮಸ್ಯೆ ಬಿಗಡಾಯಿಸುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕವು ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಇದು ಕಡಿಮೆ ಜನರ ಮೇಲೆ ಗುರುತಿಸಲ್ಪಟ್ಟಿದೆ. ಹೀಗಾಗಿ ಇದನ್ನು 'ಅದೃಶ್ಯ ಕೊಲೆಗಾರ' ಎಂದು ಕರೆಯಲಾಗುತ್ತಿದೆ.

ಅಸ್ತಮಾ, ಉಸಿರಾಟ ತೊಂದರೆ

ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ, ಮಾಲಿನ್ಯ ಹದಗೆಡುತ್ತಿರುವ 252 ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದು ಕಳವಳಕಾರಿ ಸಂಗತಿ. ಇಂದಿನ ವಾಯು ಮಾಲಿನ್ಯವು ಮನುಷ್ಯನ ಹೃದಯ ರಕ್ತನಾಳದ ಕಾಯಿಲೆಗಳನ್ನು ತಂದೊಡ್ಡುತ್ತುದೆ. ವಾಯು ಮಾಲಿನ್ಯದಲ್ಲಿನ ಬ್ರಾಂಕೈಟಿಸ್ ಅಥವಾ ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ ಎಂದು ಅವರು ಎಚ್ಚರಿಸಿದರು.

ಮಾಲಿನ್ಯದಲ್ಲಿ 2.5 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಪರ್ಟಿಕ್ಯುಲೇಟ್ ಮ್ಯಾಟರ್ (PM) ಇದು ಶ್ವಾಸಕೋಶದ ತಡೆಗೋಡೆಗಳ ಮೂಲಕ ಹಾದು ಹೋಗಿ ದೇಹ ಸೇರುತ್ತದೆ. ನಂತರ ರಕ್ತನಾಳಗಳೊಳಗೆ ಹರಿಯುತ್ತದೆ. ನಂತರ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

Heart Attack: Air Pollution Causes Heart Disease Like Tobacco and Alcohol, That is Invisible Killer

ಮಾಲಿನ್ಯದಿಂದ ಮೃತಪಟ್ಟವರು ಸಂಖ್ಯೆ ಹೀಗಿದೆ

ವ್ಯಕ್ತಿಯ ಜೀವ ಹಿಂಡುವ ಈ ವಾಯು ಮಾಲಿನ್ಯವು ಒಂದು ರೀತಿಯ ತಂಬಾಕು ಎಂದು ಕರೆಯಲಾಗುತ್ತಿದೆ. ಈ ವಾಯು ಮಾಲಿನ್ಯ ಕಾರಣದಿಂದ ದೇಶದಲ್ಲಿ 22 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಸದಾ ವಾಹನ ದಟ್ಟಣೆಗಳಿಂದಲೇ ತುಂಬಿರುವ ರಸ್ತೆಗಳು, ಇಂಧನ ಪೂರೈಕೆ ಮತ್ತು ಕೃಷಿ ಪ್ರದೇಶಗಳಲ್ಲಿ ಕೆಲಸ ಮಾಡುವವರು ವಾಯು ಮಾಲಿನ್ಯ ಕಾರಣದಿಂದ ಹೃದ್ರೋಗ ಸಮಸ್ಯೆಯಿಂದ ಬಳಲುವ ಅಪಾಯ ಹೆಚ್ಚಿರುತ್ತದೆ ಎಂದು ವೈದ್ಯರು ವಿವರಿಸಿದರು.

ಸದ್ಯ ನಮ್ಮ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಜತೆಗೆ ಹೃದಯ ಸಂಬಂಧಿ ಸಮಸ್ಯೆಗಳ ಪರಿಶೀಲನೆ, ತಪಾಸಣೆಗೆ ಒಪ್ಪಂದ ಮಾಡಿಕೊಂಡಿದೆ. ನಿಯಮಿತವಾಗಿ ಚಾಲಕರು, ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡುತ್ತಿದೆ. ಈ ಒಪ್ಪಂದವನ್ನು ರಾಜ್ಯ ಪೊಲೀಸ್ ಇಲಾಖೆಗೂ ವಿಸ್ತರಿಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಮಾಲಿನ್ಯ ತಡೆಗೆ ನೀತಿ ರೂಪಿಸಬೇಕಿದೆ

ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ವರ್ಲ್ಡ್ ಹಾರ್ಟ್ ಫೆಡರೇಶನ್ ಕ್ಲೀನರ್ ಸಂಸ್ತೆ ಉತ್ತಮ ಸಾರಿಗೆ ಸಂಪರ್ಕ, ಸ್ವಚ್ಛತೆ, ಸೂಕ್ತ ತ್ಯಾಜ್ಯ ನಿರ್ವಹಣೆ, ವಿದ್ಯುತ್ ಉತ್ಪಾದನೆ ಮತ್ತು ಶುದ್ಧ ಇಂಧನ ಮತ್ತು ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ನೀತಿ ರೂಪಿಸುವಂತೆ ಸಲಹೆ ನೀಡಿದೆ.

ಭಾನುವಾರ ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಹಿರಿಯ ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ.ದೀಪಕ್ ಕೃಷ್ಣಮೂರ್ತಿ ಅವರು, ವಾಯು ಮಾಲಿನ್ಯದಲ್ಲಿ ಹೃದಯರಕ್ತನಾಳ ಸಮಸ್ಯೆ ಉಂಟುಮಾಡುವ ಅಪಾಯಕಾರಿ ಅಂಶ ಹೊಂದಿದೆ. ಅದರಲ್ಲಿರುವ ಉನ್ನತ ಮಟ್ಟದ ಸೂಕ್ಷ್ಮ ಕಣಗಳ ಮ್ಯಾಟರ್ (PM2.5) ಎಂಡೋಥೀಲಿಯಲ್ ರಕ್ತನಾಳಗಳ ಸಮರ್ಥ ನಿರ್ವಹಣೆಗೆ ಅಡ್ಡಿ ಮಾಡುತ್ತದೆ. ಹೃದಯ ಪರಿಧಮನಿಗಳಲ್ಲಿ ನಿಧಾನಗತಿಯ ರಕ್ತ ಹರಿವು ಮತ್ತು ವ್ಯವಸ್ಥಿತ ಉರಿಯೂತ, ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+