Delhi air quality: ಮಂಗಳವಾರವು ತೀವ್ರ ಕಳಪೆ ಗಾಳಿ ದಾಖಲು, ಶಾಲೆಗಳು ಬಂದ್
ನವದೆಹಲಿ, ನವೆಂಬರ್ 07: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮಂಗಳವಾರವೂ 'ತೀವ್ರ ಕಳಪೆ' ಪ್ರಮಾಣದ ದಾಖಲಾತಿ ಮುಂದುವರಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವೆಬ್‌ಸೈಟ್ ಮಾಹಿತಿ ನೀಡಿದೆ.
ದೆಹಲಿ ನಗರಾದ್ಯಂತ ಸೋಮವಾರ ಸುರಕ್ಷಿತ ಮಾನದಂಡಗಳಿಗಿಂತಲೂ ಏಳರಿಂದ ಎಂಟು ಪಟ್ಟು ವಾಯುಮಾಲಿನ್ಯ ಕಳಪೆ ಆಗಿತ್ತು. ಈ ಕಾರಣದಿಂದಲೇ ದೆಹಲಿಯ 10ನೇ ತರಗತಿ ಮತ್ತು 12 ನೇ ತರಗತಿಗಳನ್ನು ಹೊರತುಪಡಿಸಿ ಉಳಿದೆಲ್ಲ ತರಗತಿಗಳನ್ನು ನವೆಂಬರ್ 10 ರವರೆಗೆ ದೈಹಿಕ ತರಗತಿ ನಡೆಸದಂತೆ ತಿಳಿಸಲಾಗಿದೆ. ಮಾಲಿನ್ಯ ತಡೆಗೆ ನವೆಂಬರ್ 13 ರಿಂದ 20ರ ವರೆಗೆ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಇನ್ನೂ ಗುರುಗ್ರಾಮ್, NCR ನಲ್ಲಿ ಮಾಲಿನ್ಯ ದಿನೇ ದಿನೆ ಹದಗೆಡುತ್ತಿರುವ ಸಂಬಂಧ ಶಾಲಾ ಮಕ್ಕಳನ್ನು ಆರೋಗ್ಯ ದೃಷ್ಟಿಯಿಂದಾಗಿ ನರ್ಸರಿಯಿಂದ ಐದನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಫರಿದಾಬಾದ್‌ನ ಜಿಲ್ಲಾಧಿಕಾರಿ ವಿಕ್ರಮ್ ಸಿಂಗ್ ಅವರು ಮಂಗಳವಾರದಿಂದ ಅಕ್ಟೋಬರ್ 12 ರವರೆಗೆ 1-5 ಶಾಲೆಗಳ ಬಂದ್‌ಗೆ ಆದೇಶಿಸಿದ್ದಾರೆ.
ದೆಹಲಿ-NCR ವಾಯುಮಾಲಿನ್ಯ: 10 ಅಂಶಗಳು
1. ಮಂಗಳವಾರ ಬೆಳಗ್ಗೆ ದೆಹಲಿಯ ವಿವಿಧ ಪ್ರದೇಶಗಳಾದ ಆನಂದ್ ವಿಹಾರ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 432, ಆರ್‌ಕೆ ಪುರಂ 437 AQI, ಪಂಜಾಬಿ ಬಾಗ್ ನಲ್ಲಿ 439 AQI, ಮತ್ತು ನ್ಯೂ ಮೋತಿ ಬಾಗ್ ನಲ್ಲಿ 410 AQI ದಾಖಲಾಗಿದೆ.
2. ಮಂಗಳವಾರ ಬೆಳಗ್ಗೆ ಗುರುಗ್ರಾಮ್‌ನಲ್ಲಿನ ಗಾಳಿಯ ಗುಣಮಟ್ಟವು ತುಸು ಸುಧಾರಿಸಿದೆ ಎಂದು ವರದಿ ಆಗಿದೆ. ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ (CPCB) ರೀಡಿಂಗ್ ಸೆಕ್ಟರ್-51 ರಲ್ಲಿ 399 AQI ಪ್ರದರ್ಶನವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ಆನ್‌ಲೈನ್ ಮೂಲಕ ತರಗತಿ ನಡೆಸಲು ಗುರುಗ್ರಾಮ್ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಡಿಸಿ ನಿಶಾಂತ್ ಕುಮಾರ್ ಯಾದವ್ ಆದೇಶ ಹೊರಡಿಸಿದ್ದಾರೆ.

3. ನವೆಂಬರ್ 7 ರಿಂದ ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ತರಗತಿ ಕೈಗೊಳ್ಳಲು ಸೂಚಿಸಲಾಗಿದೆ. ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ. ವಾಯು ಗುಣಮಟ್ಟ ಕಳಪೆ ದಾಖಲಾತಿಯಿಂದ ಪರಿಸ್ಥಿತಿಯು ಗ್ರಾಪ್ 4ನೇ ಹಂತ ತಲುಪಿದೆ ಎಂದು ಡಿಸಿ ಯಾದವ್ ಕಳವಳ ವ್ಯಕ್ತಪಡಿಸಿದರು.
4. ಗೌತಮ್ ಬುದ್ಧ ನಗರ ಜಿಲ್ಲೆಯ ನೋಯ್ಡಾ ಸೆಕ್ಟರ್-62 ರಲ್ಲಿ ಬೆಳಗ್ಗೆ 6 ಗಂಟೆಗೆ 384 AQI (ಅತ್ಯಂತ ಕಳಪೆ) ದಾಖಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಜಿಲ್ಲಾಧಿಕಾರಿ ಭಾನುವಾರ ಸಂಜೆ ತಿಳಿಸಿದ್ದಾರೆ. ಮಾಲಿನ್ಯ ಹದಗೆಡುತ್ತಿದ್ದಂತೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ನಿವಾಸಿಗಳು ತಮ್ಮ ಮಕ್ಕಳ ದೈಹಿಕ ತರಗತಿ ರದ್ದಿಗೆ ಕೋರಿದ್ದರು. ಅದನ್ನು ಡಿಸಿ ನಿರಾಕರಿಸಿದ್ದಾರೆ.
5. ದೆಹಲಿಯ ಭಾನುವಾರ ಇಡೀ ದಿನದ ಸರಾಸರಿ AQI ಪ್ರತಿದಿನ ಸಂಜೆ 4 ಗಂಟೆಗೆ ದಾಖಲಾಗುತ್ತದೆ. ಈ ಪೈಕಿ ಸೋಮವಾರ 421 AQI ಕಂಡ ಬಂದಿದ್ದು, ತುಸು ಸುಧಾರಣೆ ಆಗಿದೆ. ಕಾರಣ ಭಾನುವಾರದಂದು 454 AQI ಕಂಡು ಬಂದಿತ್ತು.
6. ದೆಹಲಿ ಶಿಕ್ಷಣ ಸಚಿವ ಅತಿಶಿ ಅವರು ನವೆಂಬರ್ 10 ರವರೆಗೆ ಎಲ್ಲಾ ಶಾಲೆಗಳ ಪ್ರಾಥಮಿಕ ತರಗತಿಗಳ ಸ್ಥಗಿತಗೊಳಿಸುವ ಬಗ್ಗೆ ಘೋಷಿಸಿದ್ದಾರೆ. 6 ರಿಂದ 12 ನೇ ತರಗತಿಗಳ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಲು ತಿಳಿಸಿದ್ದರು. ಈ ಮಧ್ಯೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ತರಗತಿಗಳಿಗೆ ದೈಹಿಕ ತರಗತಿಗಳನ್ನು ನಡೆಸಲು ನಿರ್ಧರಿಸಿವೆ.
7. ದೆಹಲಿಯಲ್ಲಿ ದೀಪಾವಳಿ ಹಬ್ಬದ ಬಳಿಕ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ನಿರೀಕ್ಷೆ ಇದೆ. ದೆಹಲಿ ಸರ್ಕಾರವು ನಾಲ್ಕು ವರ್ಷಗಳ ಅಂತರದ ವಾಹನಗಳ ನಿಷೇಧ ವ್ಯವಸ್ಥೆ ಜಾರಿಗೆ ತಂದಿದೆ. ಬೆಸ-ಸಮ ವ್ಯವಸ್ಥೆ ಅಂದರೆ (0, 2, 4, 6, 8) ಕೊನೆಗೊಳ್ಳುವ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ ನ ವಾಹನಗಳು ಸಮ ದಿನಾಂಕಗಳಲ್ಲಿ ಕಾರ್ಯನಿರ್ವಹಿಸಬೇಕು. ಬೆಸ ಸಂಖ್ಯೆಯ (1, 3, 5, 7, 9) ವಾಹನಗಳು ಬೆಸ ದಿನಾಂಕಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.
8. ಜಿಆರ್‌ಎಪಿ ಹಂತದ 4 ಅಡಿಯಲ್ಲಿ ನಿರ್ಬಂಧಗಳು, ಎಲ್ಲಾ ರೀತಿಯ ನಿರ್ಮಾಣ ಕಾರ್ಯಗಳ ಮೇಲಿನ ನಿಷೇಧ ಮತ್ತು ರಾಜಧಾನಿಯೊಳಗೆ ಮಾಲಿನ್ಯಕಾರಕ ಟ್ರಕ್‌ಗಳ ಪ್ರವೇಶ ನಿಷೇಧ ಜಾರಿಯಲ್ಲಿದೆ.
9. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವ ಆದೇಶವನ್ನು ದೀಪಾವಳಿ ನಂತರ ತೆಗೆದುಕೊಳ್ಳಲು ತಿಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದರು.
10. ನೋಯ್ಡಾದಿಂದ ರಾಜಧಾನಿಗೆ ಮೂಲಭೂತ ಸೌಕರ್ಯಗಳ ತರುವ ಸರಕು ಸೇವಾ ವಾಹನಗಳಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಉಳಿದ ಟ್ರಕ್ ಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಗೌತಮ್ ಬುದ್ಧ ನಗರದಲ್ಲಿ ಬಿಎಸ್-III ಪೆಟ್ರೋಲ್ ಇಂಜಿನ್ ಮತ್ತು BS-IV ಡೀಸೆಲ್ ಇಂಜಿನ್ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications