Get Updates
Get notified of breaking news, exclusive insights, and must-see stories!

Bengaluru Air Quality: ಬೆಂಗಳೂರಿನ ಈ ಬಡಾವಣೆಗಳಲ್ಲಿ 200-300 ಕಳಪೆ ದಾಖಲು, ವಿವರ

ಬೆಂಗಳೂರು, ನವೆಂಬರ್ 15: ಬೆಂಗಳೂರು ನಿವಾಸಿಗಳು ಅಂದುಕೊಂಡಂತೆ ವಿಜೃಂಭಣೆಯ ದೀಪಾವಳಿ ಆಚರಿಸಿದ್ದಾರೆ. ಎಲ್ಲಡೆ ಪಟಾಕಿಗಳ ಸದ್ದು ಕೇಳಿ ಬಂದಿದೆ. ಪರಿಣಾಮದ ಹಬ್ಬದ ಮೊದಲ ದಿನವೇ ವಾಯು ಮಾಲಿನ್ಯ ಪ್ರಮಾಣ ಏರಿಕೆ ಆಗಿದೆ. ಕಳೆದ ಎರಡೇ ದಿನದಲ್ಲಿ ಬೆಂಗಳೂರು ವಾಯು ಗುಣಮಟ್ಟ ಕಳಪೆ ದಾಖಲಾಗಿದೆ.

ದೀಪಾವಳಿ ಹಬ್ಬದಾಚರಣೆಯಲ್ಲಿದ್ದ ಜನರು ಪಟಾಕಿ ಸಿಡಿಸಿದ್ದರಿಂದ ಅದರ ಹೊಗೆ ಸೂಸುವಿಕೆಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕಳೆಪೆಯತ್ತ ಸಾಗಿದೆ. ಈ ಪೈಕಿ ವಿಜಯನಗರ ಸುತ್ತಮುತ್ತಲಿನ ಪ್ರದೇಶದಲ್ಲಿ 251 AQI ಇದ್ದದ್ದೂ ಕಂಡು ಬಂದಿದೆ.

Bengaluru Air Pollution Rise in During Festival: Few Areas Recorded AQI 200 More, see data

ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ವಾಯು ಗುಣಮಟ್ಟ ಹಾಳಾಗುವಿಕೆಗೆ ಒಳಗೊಂಡ ಪ್ರದೇಶಗಳ ಪೈಕಿ ಜಯನಗರ ಬಡಾವಣೆಯಲ್ಲಿ ಅತ್ಯಧಿಕ ಮಟ್ಟದಲ್ಲಿ ಗಾಳಿ ಮಾಲಿನ್ಯಗೊಂಡಿದೆ ಎಂದು ವರದಿ ಆಗಿದೆ. ಇಲ್ಲಿ ಎರಡು ದಿನಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 250 ಮೀರಿದೆ. ಮಂಗಳವಾರ ಸಂಜೆ 6 ಗಂಟೆಯ ಹೊತ್ತಿಗೆ, ಜಯನಗರದಲ್ಲಿ AQI 255 ದಾಖಲಾಗಿದೆ. ಇಲ್ಲಿ 2.5 ಇಲ್ಲವೇ ಅದಕ್ಕಿಂತ ಕಡಿಮೆ ಅಳತೆಯ ಸೂಕ್ಷ್ಮ(ಮೈಕ್ರೋ) ಕಣಗಳು 2.5 ಮುಖ್ಯ ಮಾಲಿನ್ಯಕಾರಕವಾಗಿದೆ. ಇದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

200-300 ನಡುವಿನ AQI ಕಳಪೆ ಸೂಚಕ

ಗಾಳಿ ಗುಣಮಟ್ಟವು 50 AQI ನಷ್ಟು ಇಲ್ಲವೇ ಅದಕ್ಕಿಂತ ಕಡಿಮೆ ಇದ್ದರೆ ಅದು ಉಸಿರಾಟಕ್ಕೆ ಅರ್ಹ ಗಾಳಿ ಎನ್ನಲಾಗುತ್ತದೆ. ಇದರ ಪ್ರಮಾಣ 200-300 ನಡುವಿನ AQI ಮದ್ಯವಿದ್ದರೆ ಅದನ್ನು ಕಳಪೆ ಎಂದು ಮಂಡಳಿ ಪರಿಗಣಿಸುತ್ತದೆ. ಕಳಪೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ದೀರ್ಘಾವಧಿಯಲ್ಲಿ ಕಂಡು ಬಂದರೆ ಹೆಚ್ಚಿನ ಜನರಿಗೆ ಉಸಿರಾಟದ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ.

ವಾರದ ಹಿಂದೆ ಜಯನಗರ 5 ನೇ ಬ್ಲಾಕ್‌ನಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಲ್ದಾಣದಲ್ಲಿ AQI 61 ಆಗಿತ್ತು. ಈ ಪ್ರಮಾಣವನ್ನು ತೃಪ್ತಿಕರ ವಾದ ಗುಣಮಟ್ಟವಾಗಿದೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆದ ಪರಿಣಾಮ ಪರಿಸರ ಮಾಲಿನ್ಯದಲ್ಲಿ ನಾಲ್ಕು ಪಟ್ಟು ಮಾಲಿನ್ಯ ಹೆಚ್ಚಳವಾಗಿದೆ ಎಂದು ಮಂಡಳಿಯ ಅಂಕಿ ಸಂಖ್ಯೆಗಳು ಸಾಬೀತು ಮಾಡಿವೆ.

Bengaluru Air Pollution Rise in During Festival: Few Areas Recorded AQI 200 More, see data

ಬೆಂಗಳೂರು ದಕ್ಷಿಣ-ಪಶ್ಚಿಮ ಭಾಗಗಳಲ್ಲಿ ಮಾಲಿನ್ಯ

ಬೆಂಗಳೂರು ದಕ್ಷಿಣ ಭಾಗದ ಅನೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 200 ಕ್ಕೂ ಹೆಚ್ಚು ದಾಖಲಾಗಿದೆ. ಇದನ್ನು ನೋಡಿದರೆ ಉತ್ತಮ ಗಾಳಿಯ ಕುಸಿತವಾಗಿರುವುದು ಗೊತ್ತಾಗುತ್ತದೆ. ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ಪ್ರದೇಶಗಲ್ಲಿ 271 AQI ದಾಖಲಾಗಿದೆ. ಪಶ್ಚಿಮ ಬೆಂಗಳೂರಿನ ಕೆಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ 257 ಕಂಡು ಬಂದಿದೆ.

ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯಗೊಂಡಿದೆ. ಹೆಬ್ಬಾಳ, ಕಸ್ತೂರಿ ನಗರ ಮತ್ತು ಇತರ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು 101 ಮತ್ತು 200ರ ನಡುವೆ ದಾಖಲಾಗುವ ಮೂಲಕ ಮಧ್ಯಮ ವರ್ಗದಲ್ಲಿದೆ.

ಕರ್ನಾಟಕದ ವಿಷಯಕ್ಕೆ ಬರುವುದಾದರೆ, ರಾಮನಗರ ಜಿಲ್ಲೆ ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯದ ನಗರಗಳು ಹಬ್ಬದ ವೇಳೆ ಮಾಲಿನ್ಯಗೊಂಡಿವೆ. ಕರ್ನಾಟಕದ ಒಂದೆರಡೆ ಕಡಿಮೆ ಮಾಲಿನ್ಯವು ದಾಖಲಾಗಿದೆ. ರಾಮನಗರ ಬಿಟ್ಟು ಬೆಂಗಳೂರಿನ ಅಕ್ಕಪಕ್ಕದ ಪ್ರದೇಶಗಳಲ್ಲಿ AQI 200 ಕೆಲವೊಮ್ಮೆ 200ಕ್ಕೂ ಅಧಿಕ AQI ದಾಖಲಿಸಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಡಾಟಾಗಳು ಮಾಹಿತಿ ನೀಡಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+