ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಸಿಎಫ್ ಟಿಆರ್ ಐ ನಲ್ಲಿದೆ ಊಹಿಸಲು ಸಾಧ್ಯವಾಗದ ಅತ್ಯಾಧುನಿಕ ಆಹಾರ ಉತ್ಪನ್ನಗಳು

|
Google Oneindia Kannada News

ಮೈಸೂರು, ಅಕ್ಟೋಬರ್ 30: ರಾಜ್ಯದ ಹೆಸರಾಂತ ಸಂಸ್ಥೆ ಸಿಎಫ್ ಟಿಆರ್ ಐನ ಸಂಸ್ಥಾಪನಾ ದಿನದ ಅಂಗವಾಗಿ ಇಂದು ಮಂಗಳವಾರ ಹಮ್ಮಿಕೊಂಡಿರುವ ಮುಕ್ತ ದಿನ ಕಾರ್ಯಕ್ರಮದಲ್ಲಿ ವಿಶೇಷ ಯಂತ್ರಗಳು ನೋಡುಗರನ್ನು ನಿಬ್ಬೆರಗಾಗಿಸುವಂತೆ ಮಾಡಿದವು.

ದೋಸೆ-ಮುದ್ದೆ ತಯಾರಿಸುವ, ನಿಂಬೆಹಣ್ಣು ಹೋಳು ಮಾಡುವ, ಸಿರಿ ಧಾನ್ಯ-ಕಾಫಿ ಬೀಜ ಹುರಿಯುವ ಹಾಗೂ ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರೋಪಕರಣಗಳು ಹಾಗೂ ಆಹಾರ ಉತ್ಪನ್ನಗಳು ಅನಾವರಣಗೊಂಡಿದ್ದು ಜನರ ಮೆಚ್ಚುಗೆಗೂ ಪಾತ್ರವಾದವು.

ಸಾಮಾನ್ಯ ದಿನಗಳಲ್ಲಿ ಸಿಎಫ್ ಟಿಆರ್ ಐಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ. ಆದರೆ, ಮುಕ್ತ ದಿನದ ಅಂಗವಾಗಿ ಸಂಸ್ಥೆಗೆ ಮುಕ್ತ ಪ್ರವೇಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ನಾಗರೀಕರು ಭೇಟಿ ನೀಡಿ ಬಗೆ-ಬಗೆಯ ಆಹಾರ ಉತ್ಪನ್ನಗಳು, ಯಂತ್ರಗಳ ಬಗ್ಗೆ ಮಾಹಿತಿ ಪಡೆದರು.

ಅಪೌಷ್ಟಿಕತೆ ಹೋಗಲಾಡಿಸಲು ಸಿಎಫ್ ಟಿಆರ್ ಐನಿಂದ ವಿಶೇಷ ಉಪಾಹಾರಅಪೌಷ್ಟಿಕತೆ ಹೋಗಲಾಡಿಸಲು ಸಿಎಫ್ ಟಿಆರ್ ಐನಿಂದ ವಿಶೇಷ ಉಪಾಹಾರ

ನೂತನವಾಗಿ ನಿರ್ಮಿಸಿರುವ ರಾಗಿ ಮುದ್ದೆ ತಯಾರಿಸುವ ಯಂತ್ರ ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಇದು ಗಂಟೆಗೆ 25 ಕೆ.ಜಿ.ರಾಗಿ ಹಿಟ್ಟು-ನೀರನ್ನು ಬಳಸಿಕೊಂಡು 210 ಗ್ರಾಂನ 300 ರಾಗಿ ಮುದ್ದೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಸೋಮವಾರ ಮಧ್ಯಾಹ್ನ ಆರಂಭವಾದ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು-ಸಾರ್ವಜನಿಕರು ಆಗಮಿಸಿದ್ದರಿಂದ 170 ಗ್ರಾಂ ತೂಕದ ಮುದ್ದೆಗಳನ್ನು ತಯಾರಿಸಿ, ಸಾರ್ವಜನಿಕರಿಗೆ ಉಣಬಡಿಸಿದರು.

 ದೋಸೆ ಸವಿದ ಸಾರ್ವಜನಿಕರು

ದೋಸೆ ಸವಿದ ಸಾರ್ವಜನಿಕರು

ದೋಸೆ ತಯಾರಿಸುವ ಯಂತ್ರವು ಗಂಟೆಗೆ 400 ದೋಸೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಸಾರ್ವಜನಿಕರು ದೋಸೆ ಸವಿದರು. ಜತೆಗೆ 4.50 ಲಕ್ಷ ರೂ. ಮೌಲ್ಯದ ರಾಗಿ ಮುದ್ದೆ ತಯಾರಿಸುವ, 6 ಸಾವಿರ ರೂ.ಮೌಲ್ಯದ ನಿಂಬೆ ಹಣ್ಣು ಹೋಳು ಮಾಡುವ ಯಂತ್ರ, ವಿಜ್ಞಾನ ಸಂಶೋಧನೆಗೆ ಬೇಕಾದ ಗ್ಲಾಸ್ ನ ಪರಿಕರಗಳು ಸೇರಿದಂತೆ ಮತ್ತಿತರೆ ಆಹಾರ ಸಂಬಂಧಿತ ತಂತ್ರಜ್ಞಾನಗಳನ್ನು ಕಣ್ತುಂಬಿಕೊಂಡರು.

ಸಿಎಫ್ ​​​ಟಿಆರ್​ಐನಿಂದ ನೆರೆ ಸಂತ್ರಸ್ತರಿಗೆ ರುಚಿಯಾದ ಪೌಷ್ಟಿಕಾಂಶ ಆಹಾರ ಪೂರೈಕೆ

 ಕಾಳು-ಕಾಫಿಬೀಜ ಹುರಿಯುವ ಯಂತ್ರ

ಕಾಳು-ಕಾಫಿಬೀಜ ಹುರಿಯುವ ಯಂತ್ರ

ಸಿಎಫ್ ಟಿಆರ್ ಐನ ವಿನ್ಯಾಸ ಹಾಗೂ ನಿರ್ಮಾಣ ವಿಭಾಗವು ನಿರ್ಮಿಸಿರುವ ಬಿಸಿ ಗಾಳಿಯಿಂದಲೇ ಕಾಳು-ಕಾಫಿಬೀಜ ಹುರಿಯುವ ಯಂತ್ರ ಆಕರ್ಷಣೀಯವಾಗಿದ್ದು, ಇದರ ಮೌಲ್ಯ 1.50 ಲಕ್ಷ ರೂ. ಇದು 15 ನಿಮಿಷದಲ್ಲಿ ಅರ್ಧ ಕೆಜಿ ಕಾಫಿ ಪುಡಿ ಹಾಗೂ ಕಡಲೇಕಾಯಿ ಬೀಜವನ್ನು ಹದವಾಗಿ ಹುರಿಯುತ್ತದೆ. ಸ್ಥಳದಲ್ಲೇ ಕಡಲೆಕಾಯಿ ಬೀಜ ಹುರಿದು, ಮಸಾಲೆ ಸೇರಿಸಿ ಸಾರ್ವಜನಿಕರಿಗೆ ನೀಡುತ್ತಿದ್ದರಿಂದ ತಿಂಡಿಪ್ರಿಯರು ಚೆನ್ನಾಗಿ ಸವಿದರು.

 ರಾಗಿ ಮುದ್ದೆ ತಯಾರಿಗೂ ಬಂತು ಅತ್ಯಾಧುನಿಕ ಯಂತ್ರ ರಾಗಿ ಮುದ್ದೆ ತಯಾರಿಗೂ ಬಂತು ಅತ್ಯಾಧುನಿಕ ಯಂತ್ರ

 ಗಮನ ಸೆಳೆದ ತಂತ್ರಜ್ಞಾನ

ಗಮನ ಸೆಳೆದ ತಂತ್ರಜ್ಞಾನ

ಕಿತ್ತಲೆ, ಮಾವು, ದಾಳಿಂಬೆ, ಸೀಬೆ, ದ್ರಾಕ್ಷಿ, ಸೇಬು ಹಣ್ಣಿನ ರಸವನ್ನು ತಯಾರಿಸುವ ವಿಧಾನಗಳು. ಹಣ್ಣುಗಳ ರಸ ತೆಗೆದು ಅದಕ್ಕೆ ಕಾರ್ಬೊನೇಟೆಡ್ ನೀರನ್ನು (ಸೋಡಾ ಮಿಶ್ರಿತ ನೀರು) ಸೇರಿಸಿ ಬಾಟಲಿಗೆ ಸೇರಿಸುವ ವಿಧಾನಗಳನ್ನು ಪ್ರದರ್ಶಿಸಲಾಯಿತು.

ಉಳಿದಂತೆ ರಾಗಿ ಬಿಸ್ಕೆಟ್-ಚಕ್ಕುಲಿ, ಬೇಕರಿ ಪದಾರ್ಥಗಳು, ಸಿರಿಧಾನ್ಯಗಳ ಆಹಾರ ಪದಾರ್ಥಗಳು, ಮೊಟ್ಟೆಯಿಂದ ತಯಾರಿಸಿದ ಒಣ ಆಹಾರ ಉತ್ಪನ್ನಗಳು, ಫುಡ್ ಪ್ಯಾಕ್ ಮಾಡುವ ವಿಧಾನಗಳು, ಪ್ರೋಟೀನ್ ಯುಕ್ತ ಆಹಾರ ಸೇವೆಯಿಂದ ಆಗುವ ಅನುಕೂಲ-ಅನಾನುಕೂಲಗಳು ಸೇರಿದಂತೆ ಮತ್ತಿತರೆ ಆಹಾರನ್ನು ತಯಾರಿಸುವ ತಂತ್ರಜ್ಞಾನಗಳು ಗಮನ ಸೆಳೆದವು.

 ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ

ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ

ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರದಲ್ಲಿ ಪೆಡಲ್, ಬ್ಲೋವರ್ ಹಾಗೂ ಪ್ರತ್ಯೇಕಗೊಳಿಸುವ ಕೊಳವೆ ಹೀಗೆ 3 ಭಾಗಗಳಿವೆ. ಪೆಡಲ್ ತುಳಿಯುತ್ತಿದ್ದಂತೆ, ಅದಕ್ಕೆ ಜೋಡಿಸಿರುವ ಚಿಕ್ಕ ಫ್ಯಾನ್ ತಿರುಗಲು ಆರಂಭವಾಗುತ್ತದೆ.

ಅದರ ಮೇಲ್ಭಾಗದಲ್ಲಿ ಚಿಕ್ಕದಾದ ಕಿಂಡಿಯಿದ್ದು, ಅದಕ್ಕೆ ಕಾಳನ್ನು ಸುರಿದರೆ ಕಾಳು ಮತ್ತು ಹೊಟ್ಟು ಬೇರ್ಪಡುತ್ತದೆ. ಅಲ್ಲದೆ, ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗೇರ್ ಸೌಲಭ್ಯ ವನ್ನು ಕಲ್ಪಿಸಲಾಗಿದೆ.

English summary
Tuesday Muktha dina was organized as part of the founding day of CFTRI. Special machines attract the viewers in program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X