ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಪ್ರಯಾಣಿಕರ ಗಮನಕ್ಕೆ; ರೈಲು ಸಮಯ ಪರಿಷ್ಕರಣೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 23: ನೈಋತ್ಯ ರೈಲ್ವೆ ಮೈಸೂರು ವಿಭಾಗ ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಹೊಸ ವೇಳಾಪಟ್ಟಿ ಈಗಾಗಲೇ ಜಾರಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಮತ್ತು ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ಶೆಟ್ಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ಮೈಸೂರಿನಿಂದ ಹೊರಡುವ, ಆಗಮಿಸುವ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಮಾನ್ಯ ರೈಲುಗಳ ಸಂಚಾರ ಇನ್ನೂ ಆರಂಭವಾಗಿಲ್ಲ. ಹಬ್ಬದ ವಿಶೇಷ ರೈಲುಗಳನ್ನು ಆಯ್ದ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

South Western Railways Rescheduled Train Timings

ರೈಲುಗಳ ವೇಳಾಪಟ್ಟಿ

* ರೈಲು ಸಂಖ್ಯೆ 06581/ 06582 ಹುಬ್ಬಳ್ಳಿ-ಮೈಸೂರು-ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್ ರೈಲು ಹುಬ್ಬಳ್ಳಿಯಿಂದ 23/12/2020 ರಂದು ಮತ್ತು ಮೈಸೂರಿನಿಂದ 23/12/2020 ರಂದು ಪ್ರಾರಂಭವಾಗುವ ಸಮಯವನ್ನು ಪರಿಷ್ಕರಿಸಲಾಗಿದೆ.
ರೈಲು ಸಂಖ್ಯೆ 06581 ಹುಬ್ಬಳ್ಳಿ-ಮೈಸೂರು ಉತ್ಸವದ ವಿಶೇಷ ಎಕ್ಸ್‌ ಪ್ರೆಸ್ 18:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ 08:55 ಗಂಟೆಗೆ ಮೈಸೂರು ತಲುಪಲಿದೆ. ರೈಲು ಸಂಖ್ಯೆ 06582 ಮೈಸೂರು-ಹುಬ್ಬಳ್ಳಿ ಸ್ಪೆಷಲ್ ಎಕ್ಸ್‌ ಪ್ರೆಸ್ ಮೈಸೂರಿನಿಂದ 18:35 ಗಂಟೆಗೆ ಹೊರಟು ಮರುದಿನ 10:25 ಗಂಟೆಗೆ ಧಾರವಾಡಕ್ಕೆ ಆಗಮಿಸಲಿದೆ.

* ರೈಲು ಸಂಖ್ಯೆ 06210/ 06209 ಮೈಸೂರು-ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಮೈಸೂರಿನಿಂದ ಮಂಗಳವಾರ 19:00 ಗಂಟೆಗೆ ಹೊರಟು ಗುರುವಾರ ಅಜ್ಮೀರ್ ತಲುಪುವುದು ಗುರುವಾರ 15.10 ಗಂಟೆಗೆ. 22.12.2020 ರಿಂದ ಜಾರಿಗೆ ಬರುವಂತೆ ಮೈಸೂರಿನಿಂದ ರೈಲಿನ ಪರಿಷ್ಕೃತ ಸಮಯ ಬದಲಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

* ರೈಲು ಸಂಖ್ಯೆ 06209 ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ಭಾನುವಾರ ಅಜ್ಮೀರ್‌ನಿಂದ 06.00 ಗಂಟೆಗೆ ಹೊರಟು ಮಂಗಳವಾರ 02.15 ಗಂಟೆಗೆ ಮೈಸೂರು ತಲುಪಲಿದೆ. ಅಜ್ಮೀರ್‌ನಿಂದ ರೈಲಿನ ಪರಿಷ್ಕೃತ ಸಮಯವು 20.12.2020 ರಿಂದ ಬದಲಾಗಿದೆ.

English summary
South western railway Mysuru division rescheduled train timings. New time table will come to effect from December 23, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X