ಆರ್‌ಸಿಬಿ ಕಪ್ ಗೆಲ್ಲೋದಕ್ಕೆ ಇನ್ನೂ ಅವಕಾಶ ಇದೆ, ಆದ್ರೆ ಹಿಂಗೆ ಆಗಬೇಕು ಅಷ್ಟೇ!

ಆರ್‌ಸಿಬಿ ತಂಡ ಕಪ್ ಗೆದ್ದಿಲ್ಲ, ಆರ್‌ಸಿಬಿ ಕಪ್ ಗೆದ್ದಿಲ್ಲ ಅಂತಾ ಇಷ್ಟು ವರ್ಷಗಳಿಂದ ಕೂಡ ಅಭಿಮಾನಿಗಳು ಪರದಾಡುತ್ತಿದ್ದಾರೆ. ಆದರೂ ಆರ್‌ಸಿಬಿ ಮಾತ್ರ ತನ್ನ ಕೈಗೆ ಬಂದ ಅವಕಾಶ ಕಳೆದುಕೊಂಡು, ಕಪ್ ಗೆಲ್ಲದೆ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. 2024ರ IPLಗೆ ಮೊದಲು ಹೊಸ ಅಧ್ಯಾಯ ಅಂತಾ ಹೇಳಿದ್ದ ವಿರಾಟ್ ಕೊಹ್ಲಿ ಅವರಿಗೂ ನಿರಾಸೆ ಆಗಿದೆ. ಹೀಗಿದ್ದಾಗಲೇ ಆರ್‌ಸಿಬಿ ಕಪ್ ಗೆಲ್ಲುವ ಅವಕಾಶ ಈಗಲೂ ಇದೆ! ಅದು ಹೆಂಗೆ ಗೊತ್ತಾ?

ಆರ್‌ಸಿಬಿ ತಂಡ ಸತತ 6 ಸೋಲನ್ನ ಕಂಡು ಆಡಿರುವ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ. ಇನ್ನುಳಿದ 7ರಲ್ಲಿ ಸೋತು 2 ಅಂಕ ಪಡೆದು -1.046ರ ನೆಟ್ ರನ್‌ರೇಟ್ ಪಡೆದಿದೆ. ಈ ಮೂಲಕ ಆರ್‌ಸಿಬಿ ತಂಡ ಈಗ 2024ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿ ಇದೆ. ಹಾಗಾದರೆ ಈ ಹಂತದಲ್ಲಿ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗುತ್ತಾ? ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗಲು ಇನ್ನೂ ಎಷ್ಟು ಗೆಲುವು ಬೇಕು? ಈ ಮೂಲಕ ಆರ್‌ಸಿಬಿ ತಂಡ ಕಪ್ ಗೆಲ್ಲುವ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಮುಂದೆ ಓದಿ.

RCB s Playoff Hopes Are Still Alive But This Should Happen

2024ರಲ್ಲಿ ಆರ್‌ಸಿಬಿ ಕಪ್ ಗೆಲ್ಲುತ್ತಾ?

ಇದೀಗ ಕನ್ನಡದ ಖ್ಯಾತ ಕ್ರಿಕೆಟ್ ತಜ್ಞರು ಹಾಗೂ ಮಾಜಿ ಆಟಗಾರರ ನಡುವೆ ನಡೆದಿರುವ, ಮಹತ್ವದ ಸಂಭಾಷಣೆ ಆಧಾರದಲ್ಲಿ ಹೇಳುವುದಾದರೆ. ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ಈಗಲೂ ಅವಕಾಶ ಇದೆ. ಆದರೆ ಆರ್‌ಸಿಬಿ ತಂಡ ಇನ್ನುಳಿದ 6ಕ್ಕೆ 6 ಪಂದ್ಯಗಳನ್ನ ಗೆಲ್ಲಲೇಬೇಕು. ಇದು ಮಾತ್ರವಲ್ಲ ರಾಜಸ್ಥಾನ ರಾಯಲ್ಸ್ & ಕೆಕೆಆರ್ ತಂಡಗಳು ಇನ್ನುಳಿದ ಎಲ್ಲಾ ಪಂದ್ಯ ಗೆಲ್ಲಬೇಕು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಕೇವಲ 2 ಪಂದ್ಯ ಮಾತ್ರ ಗೆಲ್ಲಬೇಕು. ಆ ನಂತರ ಲಖನೌ ತಂಡವು ಕೇವಲ ಒಂದೇ ಒಂದು ಪಂದ್ಯ ಗೆಲ್ಲಬೇಕು. ಆಗ ಮಾತ್ರ ಆರ್‌ಸಿಬಿ ತಂಡಕ್ಕೆ ಮುಂದಿನ ಹಂತ ತಲುಪಲು ಅವಕಾಶ ಸಿಗಲಿದೆಯಂತೆ. ಈ ಚರ್ಚೆಯ ವಿಡಿಯೋಗೆ ಮುಂದೆ ನೋಡಿ.


ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ..

ಈಗಿನ ಸ್ಥಿತಿ ನೋಡುತ್ತಿದ್ದರೆ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡ ಆಗಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲೂ ಗೆಲ್ಲಬೇಕು, ದೊಡ್ಡ ಅಂತರದಲ್ಲಿಯೇ ಗೆಲುವು ಸಾಧಿಸಬೇಕಿದೆ. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್​ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿನ ಪಂದ್ಯಗಳು ಮುಗಿದಾಗ, ಆರ್‌ಸಿಬಿ ತಂಡ ಒಟ್ಟು 14 ಅಂಕ ಪಡೆದಿರುತ್ತೆ. ಉಳಿದ ತಂಡ ಇವರಿಗಿಂತ ಹಿಂದೆ ಇರಬೇಕಾಗುತ್ತದೆ. ಆರ್‌ಸಿಬಿ ಕೊನೇ ತಂಡವಾಗಿ ಪ್ಲೇಆಫ್ ತಲುಪುವುದಕ್ಕೆ ಇದರಿಂದ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+