ದಕ್ಷಿಣ ವಲಯ ನೂತನ ಐಜಿಪಿಯಾಗಿ ಪವಾರ್ ಪ್ರವೀಣ್ ಮಧುಕರ್ ಅಧಿಕಾರ ಸ್ವೀಕಾರ
ಮೈಸೂರು, ಜನೆವರಿ 1: ಡಿಐಜಿ ಸ್ಥಾನದಿಂದ ಐಜಿಪಿ ಸ್ಥಾನಕ್ಕೆ ಬಡ್ತಿ ಹೊಂದಿರುವ ಪವಾರ್ ಪ್ರವೀಣ್ ಮಧುಕರ್ ಅವರು ದಕ್ಷಿಣ ವಲಯದ ಐಜಿಪಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಐಜಿಪಿ ವಿಫುಲ್ ಕುಮಾರ್ ಸ್ಥಾನಕ್ಕೆ ಪವಾರ್ ಪ್ರವೀಣ್ ಮಧುಕರ್ ನಿಯೋಜನೆಗೊಂಡಿದ್ದಾರೆ. ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಯಲ್ಲಿ ನೂತನ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಮಧುಕರ್ ಅವರಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಸಿಂಗಂ ಅಣ್ಣಾಮಲೈ
ವಿಫುಲ್ ಕುಮಾರ್ ಅವರನ್ನು ದಕ್ಷಿಣ ವಲಯ ಐಜಿಪಿ ಹುದ್ದೆಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.
ವಿಫುಲ್ ಕುಮಾರ್ ಸ್ಥಾನಕ್ಕೆ ಡಿಐಜಿ ಸ್ಥಾನದಿಂದ ಐಜಿಪಿ ಸ್ಥಾನಕ್ಕೆ ಬಡ್ತಿ ಹೊಂದಿರುವ ಪವಾರ್ ಪ್ರವೀಣ್ ಮಧುಕರ್ ಅವರನ್ನು ನಿಯೋಜಿಸಲಾಗಿದೆ. ಇತ್ತೀಚಿಗೆ ಕರ್ನಾಟಕ ಸರ್ಕಾರ ಡಿ.ರೂಪ ಹಾಗೂ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿತ್ತು.