Bengaluru-Mysuru Expressway: ಪ್ರಯಾಣಿಕರೇ ಗಮನಿಸಿ, ಏಪ್ರಿಲ್ 18 & 19ರಂದು ಈ ಮಾರ್ಗಗಳಲ್ಲಿ ಬರುವ ಮುನ್ನ ಎಚ್ಚರ..
ಬೆಂಗಳೂರು, ಏಫ್ರಿಲ್, 18: ಬೆಂಗಳೂರು-ಮೈಸೂರು ಹೆದ್ದಾರಿ ಒಂದಲ್ಲ ಒಂದು ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇದೆ. ಇದೀಗ ಬೆಂಗಳೂರು ಸಂಚಾರ ಪೊಲೀಸರು ಏಪ್ರಿಲ್ 18 ಮತ್ತು 19ರಂದು ಹೆದ್ದಾರಿಯ ಈ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೆ ಕಿಮ್ಕೋ ಜಂಕ್ಷನ್ ಮತ್ತು ನ್ಯೂ ಗುಡ್ಡದಹಳ್ಳಿ ಜಂಕ್ಷನ್ ನಡುವಿನ ಮಾರ್ಗವನ್ನು ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಮತ್ತು ಅದರಾಚೆಗೆ ಎರಡೂ ದಿಕ್ಕುಗಳಲ್ಲಿ ಮುಚ್ಚಲಾಗುವುದು.

ಕೆಂಗೇರಿಯಿಂದ ಮೈಸೂರು ರಸ್ತೆ ಮೂಲಕ ನಗರದ ಕಡೆಗೆ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ನಾಗರಬಾವಿ ವೃತ್ತದ ಕಡೆಗೆ ಸಾಗಿ, ಚಂದ್ರಾಲೇಔಟ್ 80 ಅಡಿ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ, ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಹೋಗಿ, ಎಂಸಿ ವೃತ್ತ ತಲುಪಿ ಮಾಗಡಿ ರಸ್ತೆ ಮೂಲಕ ಸಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಬಿ ಜಂಕ್ಷನ್ ಮೂಲಕ ಹುಣಸೆ ಮರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ಖೋಡೆ ವೃತ್ತದ ಕಡೆಗೆ ಸಾಗಿ ಮೆಜೆಸ್ಟಿಕ್ ತಲುಪಬಹುದು. ಮಾರುಕಟ್ಟೆಯನ್ನು ತಲುಪಲು, ಬಿನ್ನಿ ಮಿಲ್ ಜಂಕ್ಷನ್ ಮೂಲಕ ಹೋಗಿ ಶಿರಸಿ ವೃತ್ತದಲ್ಲಿ ಎಡಕ್ಕೆ ಹೋಗಬಹುದು. ಇನ್ನು ನಾಯಂಡಹಳ್ಳಿ, ಬಿಎಚ್ ಇಎಲ್, ಮೈಸೂರು ರಸ್ತೆಯಿಂದ ನಗರದ ಕಡೆಗೆ ಬರುವ ವಾಹನಗಳು ಕಿಮ್ಕೋ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಅತ್ತಿಗುಪ್ಪೆ, ವಿಜಯನಗರ ಬಸ್ ನಿಲ್ದಾಣ ಮೂಲಕ ಎಂ.ಸಿ.ವೃತ್ತದಲ್ಲಿ ಬಲಕ್ಕೆ ತಿರುಗಿ ಮಾಗಡಿ ರಸ್ತೆ ಸೇರಬಹುದು.
ಹೆದ್ದಾರಿಯಲ್ಲಿ ಮುಂದುವರೆದ ಕಳ್ಳರ ಅಟ್ಟಹಾಸ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಇಲ್ಲಿ ಕಳೆದ ಕೆಲವು ದಿನಗಳಿಂದ ದೊರೋಡೆತನ ಕಂಟ್ರೋಲ್‌ಗೆ ಬಂದಿತ್ತು. ಆದರೆ ಮತ್ತೆ ಇದೀಗ ದೊರೋಡೆಕೋರರು ಅಟ್ಟಹಾಸ ಮುಂದುವರೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಮಂಡ್ಯ ಬಳಿ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಕುಟುಂಬದವರ ಮೇಲೆ ದಾಳಿ ನಡೆಸಿದ್ದು, ಈ ಘಟನೆ ತದವಾಗಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯುಗಾದಿ ಹಬ್ಬದ ದಿನದಂದು ಮಂಡ್ಯ ಬಳಿ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಕುಟುಂಬದವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಳೆದ ಮಂಗಳವಾರ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಯುಗಾದಿ ಹಬ್ಬದ ದಿನ ಸುಮಾರು ರಾತ್ರಿ 1 ಗಂಟೆ ವೇಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಲಂಬಾಣಿ ತಾಂಡ ಮತ್ತು ದೇವರಹೊಸಹಳ್ಳಿ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾರತ್ತಹಳ್ಳಿಯ ಮಂಜುನಾಥ್ ಲೇಔಟ್ ನಿವಾಸಿ ಮಹೇಂದ್ರ ಮಹದೇವ್ (29) ಎಂಬುವವರು ಈ ಸಂಬಂಧ ದೂರು ದಾಖಲಿಸಿದ್ಧಾರೆ ಎಂದು ತಿಳಿದುಬಂದಿದೆ.
ಮಹೇಂದ್ರ ಹೊಸ ಆಟೋರಿಕ್ಷಾ ಖರೀದಿಸಿದ್ದು, ಈ ಹಿನ್ನೆಲೆ ಆತನ ಪತ್ನಿ, ಆತನ ಸೋದರ ಸಂಬಂಧಿ ವರುಣ್ ಮತ್ತು ಇತರ ಇಬ್ಬರು ಮಾದೇಶ್ ಮತ್ತು ಭರತ್ ಹುಣಸೂರು ತಾಲೂಕಿನ ದೇವಸ್ಥಾನಕ್ಕೆ ತೆರಳುತ್ತಿದ್ದರು. ಮಹೇಂದ್ರ ಮಹದೇವ್ ಮತ್ತು ಅವರ ಪತ್ನಿ ಮಮತಾ ಕಾರಿನಲ್ಲಿ ತೆರಳುತ್ತಿದ್ದರೆ, ವರುಣ್, ಮಾದೇಶ್ ಮತ್ತು ಭರತ್ ಹೊಸದಾಗಿ ಖರೀದಿಸಿದ್ದ ಆಟೋದಲ್ಲಿ ಹೋಗುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ವೇಳೆ ಬೈಕ್‌ನಲ್ಲಿ ಬಂದಿರುವ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜನ್ನು ನುಚ್ಚು ನುಚ್ಚು ಮಾಡಿದ್ದಾರೆ. ನಂತರ ಪೆಪ್ಪರ್ ಸ್ಪ್ರೇ ಬಳಸಿ, ಮಚ್ಚಿನಿಂದ ಹಲ್ಲೆ ನಡೆಸಿ, ಮಮತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಮಹೇಂದ್ರ ಅವರ ಕಾರು ಕಾಣದ ಹಿನ್ನೆಲೆ ವರುಣ್ ಆಟೋವನ್ನು ಮತ್ತೆ ಹಿಂದಕ್ಕೆ ತಿರುಗಿಸಿಕೊಂಡು ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಮಹೇಂದ್ರ ಅವರನ್ನು ರಕ್ಷಣೆ ಮಾಡಲು ಹೋದಾಗ ದುಷ್ಕರ್ಮಿಗಳು ಇವರ ಮೇಲೂ ಪೆಪ್ಪರ್ ಸ್ಪ್ರೇ ದಾಳಿ ನಡೆಸಿ, ಈ ವೇಳೆ ಆಟೋ ಗಾಜನ್ನು ಕೂಡ ಒಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬಳಿಕ ಸಂತ್ರಸ್ತರು 112ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದೆ. ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ್ದರಿಂದ ಬೈಕ್‌ನ ನೋಂದಣಿ ಸಂಖ್ಯೆಯನ್ನು ಗಮನಿಸಲು ಸಂತ್ರಸ್ತರಿಗೆ ಸಾಧ್ಯ ಆಗಿಲ್ಲ. ಇನ್ನಯ ಆರೋಪಿಗಳು 10 ಗ್ರಾಂ ಚಿನ್ನದ ಸರದೊಂದಿಗೆ ಪರಾರಿ ಆಗಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications