ಈ ಬಿರು ಬೇಸಿಗೆಯಲ್ಲಿ ಜೀವಸಂಕುಲಗಳಿಗೆ ಜೀವಜಲ ನೀಡುವ ಜೀವದಾತರು...!
ಮೈಸೂರು, ಏಪ್ರಿಲ್ 16: ಬರದ ಪರಿಣಾಮ ಬಹಳಷ್ಟು ಕಡೆಗಳಲ್ಲಿ ಕೆರೆಗಳು ಒಣಗಿ ಹೋಗಿವೆ. ಹೀಗಾಗಿ ಮೂಕ ಪ್ರಾಣಿಗಳು ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ನಗರದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಜನರೇ ನೀರು ಒದಗಿಸುವ ಕಾರ್ಯ ಮಾಡುತ್ತಿರುವುದು ಕಂಡು ಬರುತ್ತದೆ.
ಮೈಸೂರು ನಗರದಲ್ಲಿ ಮೂಕ ಪ್ರಾಣಿಗಳಿಗೆ ನೀರು ಆಹಾರ ನೀಡುವ ಕಾಯಕವನ್ನು ಮಾಡಿಕೊಂಡು ಬರುತ್ತಿರುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿಯೇ ಇದೆ. ಬಹಳಷ್ಟು ವರ್ಷಗಳ ಹಿಂದಿನಿಂದಲೇ ಮನೆಯ ಮುಂದೆ ತೊಟ್ಟಿಗಳನ್ನು ನಿರ್ಮಾಣ ಮಾಡಿ ಅಲ್ಲಿ ನೀರನ್ನು ಸಂಗ್ರಹಿಸಿಡುವ ಮೂಲಕ ಬೀಡಾಡಿ ದನಗಳು, ಬೀದಿ ನಾಯಿಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳ ದಾಹ ನೀಗಿಸುತ್ತಾ ಬಂದವರಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಈ ಬಗ್ಗೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿರುವುದರಿಂದ ಬಹುತೇಕ ಜನರು ತಮ್ಮ ಮನೆ ಮುಂದೆ ಅಥವಾ ತಾರಸಿಯಲ್ಲಿ ನೀರಿಟ್ಟು ಪ್ರಾಣಿ ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ. ಈ ವರ್ಷವಂತು ಬಿಸಿಲು ಹೆಚ್ಚಿರುವ ಕಾರಣ ಮೂಕ ಪ್ರಾಣಿಗಳು, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಾ ಎಲ್ಲೆಂದರಲ್ಲಿ ಅಲೆಯುತ್ತಿವೆ.
ದಾಹನೀಗಿಸುವುದು ಪುಣ್ಯದ ಕಾರ್ಯ
ಬೇಸಿಗೆ ಸಮಯದಲ್ಲಿ ನೀರಿಗೆ ಸಮಸ್ಯೆ ಕಾಣಿಸುವುದರಿಂದ ನಗರದಾದ್ಯಂತ ನೀರು ಸಿಗುವುದು ಕಷ್ಟ ಸಾಧ್ಯ. ಇಂತಹ ಸಂದರ್ಭಗಳಲ್ಲಿ ಮೂಕ ಪ್ರಾಣಿಪಕ್ಷಿಗಳ ದಾಹ ನೀಗಿಸುವುದು ಕೂಡ ಪುಣ್ಯದ ಕೆಲಸವೇ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಬಹಳಷ್ಟು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ನೀರೊದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇನ್ನು ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಮೂಕ ಪ್ರಾಣಿಗಳ ದಾಹ ನೀಗಿಸಲು ಶ್ರಮಿಸುತ್ತಿರುವ ಆಧುನಿಕ ಭಗೀರಥರು ನೂರಾರು ಮಂದಿ ಕಾಣಸಿಗುತ್ತಾರೆ. ಅವರೆಲ್ಲರೂ ಪ್ರಚಾರಕ್ಕಾಗಿ ಕೆಲಸ ಮಾಡದೆ ಮಾನವೀಯ ದೃಷ್ಟಿಯಿಂದ ಮಾಡುತ್ತಿದ್ದಾರೆ.
ಪ್ರತಿನಿತ್ಯ ನೀರು ನೀಡುವ ಭಗೀರಥರು
ಇನ್ನು ನಗರದ ಹಲವೆಡೆ ದನಗಳಿಗಾಗಿಯೇ ನೀರಿನ ತೊಟ್ಟಿಗಳನ್ನು ಕಟ್ಟಲಾಗಿದೆ. ಆದರೆ ಎಲ್ಲ ಕಡೆಗಳಲ್ಲಿ ಈ ವ್ಯವಸ್ಥೆ ಇಲ್ಲ ಇದನ್ನು ಮನಗಂಡ ಕೆಲವರು ತಮ್ಮ ಮನೆ ಮುಂದೆ ಅಥವಾ ಅಂಗಡಿ ಮುಂದೆ ಪುಟ್ಟ ತೊಟ್ಟಿಗಳನ್ನು ನಿರ್ಮಿಸಿ ಅಥವಾ ಬಕೆಟ್ ಗಳನ್ನಿಟ್ಟು ಅದರಲ್ಲಿ ನೀರು ತುಂಬಿಸಿಡುತ್ತಾರೆ. ಬಾಯಾರಿದ ದನ, ನಾಯಿ, ಮೇಕೆಗಳು ಇಲ್ಲಿ ನೀರು ಕುಡಿದು ತೆರಳುತ್ತವೆ.

ಪ್ರತಿ ದಿನವೂ ಅಲ್ಲಿ ನೀರು ಸಿಗುವುದರಿಂದ ಬೀಡಾಡಿ ದನಗಳು ನೀರು ಕುಣಿದು ದಣಿವಾರಿಸಿಕೊಳ್ಳುತ್ತಿವೆ. ನೀರು ಒದಗಿಸುವವರಿಗೂ ಏನೋ ಒಂದು ರೀತಿಯ ತೃಪ್ತಿಯಾಗುತ್ತಿದೆ. ನೀರಿಗೆ ಹಣ ನೀಡಿ ಕುಡಿಯುವಂತಹ ಈ ಕಷ್ಟ ಕಾಲದಲ್ಲಿ ಪ್ರಾಣಿಗಳಿಗಾಗಿಯೇ ಪ್ರತ್ಯೇಕ ನೀರಿನ ತೊಟ್ಟಿ ಕಟ್ಟಿಸಿ ಪ್ರತಿ ದಿನ ನೀರು ಪೂರೈಸುವುದು ಸುಲಭದ ಕೆಲಸವಲ್ಲ.
ಇದು ಒಂದು ದಿನದ ಕಾಯಕವಲ್ಲ
ಇದು ಒಂದು ದಿನ ಮಾಡಿ ತೆಪ್ಪಗಾಗುವ ಕೆಲಸವೂ ಅದು ಅಲ್ಲ. ಏಕೆಂದರೆ ದಿನವೂ ನೀರು ಕುಡಿದು ಅಭ್ಯಾಸವಿರುವ ಕಾರಣ ಪ್ರಾಣಿಗಳು ಕೂಡ ಅದೇ ಸ್ಥಳಕ್ಕೆ ಬಂದು ನೀರಿಗಾಗಿ ಕಾಯುತ್ತವೆ. ಹೀಗಾಗಿ ಮನೆಯ ಮುಂದಿನ ತೊಟ್ಟಿಗಳಲ್ಲಿ ನೀರನ್ನು ತುಂಬಿಸಿಡುವ ಕೆಲಸವನ್ನು ಪ್ರತಿದಿನವೂ ಮಾಡಬೇಕಾಗುತ್ತದೆ. ಹೀಗಾಗಿ ಅವರ ಕಾರ್ಯ ಶ್ಲಾಘನೀಯವಾಗಿದೆ.

ಇನ್ನು ನಗರಕ್ಕೆ ಹೊಂದಿಕೊಂಡಂತಿರುವ ಚಾಮುಂಡಿಬೆಟ್ಟದ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳು ನೆಲೆಯೂರಿದ್ದು ಅವುಗಳಿಗೆ ನೀರಿನ ಮೂಲಗಳಿಲ್ಲದೆ ಇರುವುದರಿಂದ ಪರಿತಪಿಸುವಂತಾಗಿದ್ದು, ಅವುಗಳಿಗೆ ಅರಣ್ಯದ ನಡುವೆ ಇರುವ ಮರಗಿಡಗಳಲ್ಲಿ ನೀರಿನ ಬಾಟಲಿ, ಪಾತ್ರೆಗಳಲ್ಲಿ ನೀರನ್ನಿಡುವ ಕೆಲಸವನ್ನು ಸಂಘ ಸಂಸ್ಥೆ ಸೇರಿದಂತೆ ಸಾರ್ವಜನಿಕರು ಮಾಡುತ್ತಾ ಬರುತ್ತಿದ್ದಾರೆ.
ಎಲ್ಲರೂ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ
ಒಟ್ಟಾರೆ ಮಳೆ ಬಾರದೆ ಬರ ಕಾಡುತ್ತಿರುವ ಈ ಸಮಯದಲ್ಲಿ ಜನರು ತಮ್ಮ ಜತೆಗೆ ತಮ್ಮ ಸುತ್ತಮುತ್ತಲಿರುವ ಪ್ರಾಣಿ ಪಕ್ಷಿಗಳ ಬಗ್ಗೆಯೂ ಕಾಳಜಿ ವಹಿಸಿ ಅವುಗಳ ರಕ್ಷಣೆಗೆ ಧಾವಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯವೇ.. ಅವುಗಳಿದ್ದರಷ್ಟೆ ನಾವು ಬಾಳಲು ಸಾಧ್ಯ ಹೀಗಾಗಿ ಎಲ್ಲರೂ ತಮ್ಮ ಅಳಿಲು ಸೇವೆಯನ್ನು ಮಾಡಿದರೆ ನಮ್ಮ ಸುತ್ತಮುತ್ತಲಿನ ಜೀವಸಂಕುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications