Summer Special Trains: ಬೆಂಗಳೂರು & ಮೈಸೂರಿನಿಂದ ಇಲ್ಲಿಗೆ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು: ವೇಳಾಪಟ್ಟಿ, ನಿಲ್ದಾಣ ಗಮನಿಸಿ

ಬೆಂಗಳೂರು, ಏಪ್ರಿಲ್ 17: ಭಾರತೀಯ ರೈಲ್ವೆ ವ್ಯಾಪ್ತಿಯ ಕರ್ನಾಟಕ ರಾಜ್ಯದ ಬೆಂಗಳೂರಿನಿಂದ ಬೇರೆ ಬೇರೆ ಕಡೆ ವಿಶೇಷ ರೈಲು ಬಿಡಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮೈಸೂರಿನಿಂದ (Summer Special Trains) ವಿಶೇಷ ರೈಲುಗಳು ಉತ್ತರ ಭಾರತದ ರಾಜ್ಯಗಳಿಗೆ ಪ್ರಯಾಣ ಬೆಳೆಸಲಿವೆ.

ಬೆಂಗಳೂರಿನಿಂದ ರೈಲುಗಳು ವಾಸ್ಕೋಡ ಗಾಮಾ- ಮುಜಾಫರ್ ನಗರ, ಬೆಂಗಳೂರು-ಮಾಲ್ಡಾ, ಬೆಂಗಳೂರು- ಕಲಬುರಗಿ, ಬೆಂಗಳೂರು- ಪ್ರಯಾಗ್ರಾಜ್, ರಾಣಿ ಕಮಲಾಪತಿ- ಮೈಸೂರು, ಬೆಂಗಳೂರು- ನ್ಯೂ ಟಿನ್ಸುಕಿಯಾ ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿವೆ.

SWR Lunches Summer Special Weekly Trains Bengaluru amp amp Mysuru to Uttar Bharat Areas Schedule

ಈ ಬೇಸಿಗೆ ವಿಶೇಷ ರೈಲುಗಳ ಸಂಚಾರ, ದರ ಬುಕ್ಕಿಂಗ್‌ ಗಾಗಿ ಈ ಅಧಿಕೃತ ವೆಬ್‌ಸೈಟ್ www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಇಲ್ಲವೇ 139ಗೆ ಕರೆ ಮಾಡಿ ಎಂದು ಬೆಂಗಳೂರು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೇಸಿಗೆ ರೈಲುಗಳ ಸೇವೆಯ ಮಾಹಿತಿ ಇಲ್ಲಿದೆ

* ವಾಸ್ಕೋ ಡ ಗಾಮಾ ವೀಕ್ಲಿ ಎಕ್ಸ್‌ಪ್ರೆಸ್

ವಾಸ್ಕೋ ಡ ಗಾಮಾ-ಮುಜಾಫರ್‌ಪುರ್-ವಾಸ್ಕೋ ಡ ಗಾಮಾ ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ-07309/07310 ) ರೈಲು ನಾಲ್ಕು ಟ್ರಿಪ್ ಹೊಡೆಯಲಿದೆ. ಇದೇ ತಿಂಗಳು ಏಪ್ರಿಲ್ 17, 24, ಮೇ 1 ಮತ್ತು 8 ರಂದು (ಬುಧವಾರ) ಸಂಜೆ 4ಕ್ಕೆ ಹೊರಟು ಶುಕ್ರವಾರ ಬೆಳಗ್ಗೆ 09ಕ್ಕೆ ಮುಜಾಫರ್‌ಪುರ ತಲುಪತ್ತದೆ.

ಅದೇ ರೈಲು ಮುಜಾಫರ್‌ಪುರದಿಂದ (ಸಂಖ್ಯೆ- 07310) ಏಪ್ರಿಲ್ 20, 27, ಮೇ 4 ಮತ್ತು 11 ರಂದು ಮಧ್ಯಾಹ್ನ 1ಕ್ಕೆ ಗಂಟೆಗೆ ಮುಜಫರ್‌ಪುರದಿಂದ ಹೊರಟು ಸೋಮವಾರ ಬೆಳಗ್ಗೆ 06.30ಕ್ಕೆ ವಾಸ್ಕೋಡಗಾಮಾ ಮುಟ್ಟಲಿದೆ.

ಈ ರೈಲು ಮಡಗಾಂವ್, ಥಿವಿಮ್, ಸಾವಂತವಾಡಿ ರಸ್ತೆ, ರತ್ನಗಿರಿ, ಚಿಪ್ಲುನ್ ಸೇರಿದಂತೆ ಅನೇಕ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಎಲ್ಲ ವಿಧದ ಎಸಿ ಕೋಚ್ ಸಹಿತ 20 ಕೋಚ್‌ಗಳು ಇರಲಿವೆ.

SWR Lunches Summer Special Weekly Trains Bengaluru amp amp Mysuru to Uttar Bharat Areas Schedule

* ಬೆಂಗಳೂರು-ಮಾಲ್ಡಾ ಟೌನ್ ವಿಶೇಷ ರೈಲು

ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಾಲ್ಡಾ ಟೌನ್- ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06565/06566) ವಿಶೇಷ 11 ಟ್ರಿಪ್‌ ಹೊಡೆಯಲಿದೆ. ಒಂದು ರೈಲು ಏಪ್ರಿಲ್ 17 ರಿಂದ ಜೂನ್ 26 ರವರೆಗೆ ಪ್ರತಿ ಬುಧವಾರ ಸಂಜೆ 4:35ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ಯಿಂದ ಪ್ರಯಾಣ ಬೆಳೆಸುತ್ತದೆ.

ಇದೇ ರೈಲು ಶುಕ್ರವಾರ ಬೆಳಗ್ಗೆ 07:30ಕ್ಕೆ ಮಾಲ್ಡಾ ಟೌನ್‌ ತಲುಪಲಿದ್ದು, ಮರಳಿ (ರೈಲು ಸಂಖ್ಯೆ 06566) ಏಪ್ರಿಲ್ 20 ರಿಂದ ಜೂನ್ 29 ರವರೆಗೆ ಪ್ರತಿ ಶನಿವಾರ ಮಾಲ್ಡಾ ಟೌನ್‌ನಿಂದ ಬೆಳಗ್ಗೆ 08.50ಕ್ಕೆ ಅಲ್ಲಿಂದ ಬಿಟ್ಟು ಸೋಮವಾರ ಬೆಂಗಳೂರಿಗೆ ಬರಲಿದೆ.

ಈ ರೈಲು ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ವಿಜಯನಗರ, ಪಲಾಸ, ಬ್ರಹ್ಮಪುರಗಡೆ, ಖುರ್ದಾ ರಸ್ತೆ, ಭುವನೇಶ್ವರ್, ಬಂದ್ರಾಕ್ ಸೇರಿದಂತೆ ವಿವಿಧೆಡೆ ನಿಲ್ಲಲಿದೆ. ಈ ರೈಲು ಎಲ್ಲ ವಿಧದ ರೈಲ್ವೆ ಕೋಚ್ ಸೇರಿದಂತೆ ಒಟ್ಟು 19 ಬೋಗಿಗಳನ್ನು ಒಳಗೊಂಡಿದೆ.

* ರಾಣಿ ಕಮಲಾಪತಿ-ಮೈಸೂರು ವೀಕ್ಲಿ ಎಕ್ಸ್‌ಪ್ರೆಸ್

ರಾಣಿ ಕಮಲಾಪತಿ-ಮೈಸೂರು-ರಾಣಿ ಕಮಲಾಪತಿ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಗದಗ ಮುಖೇನ ಒಂದು ಡಜನ್‌ಗೂ (15) ಹೆಚ್ಚು ಟ್ರಿಪ್ ಹೊಡೆಯಲಿದೆ. ಏಪ್ರಿಲ್ 18 ರಿಂದ ಜುಲೈ 25 ಪ್ರತಿ ಗುರುವಾರ ಬೆಳಗ್ಗೆ 08.30ಕ್ಕೆ ರಾಣಿ ಕಮಲಾಪತಿಯಿಂದ ಪ್ರಯಾಣ ಆರಂಭಿಸುತ್ತದೆ. ಶುಕ್ರವಾರದಂದು ರಾತ್ರಿ 10.35 ಗಂಟೆಗೆ ಮೈಸೂರಿಗೆ ತಲುಪುತ್ತದೆ.

ಮರಳಿ ಮೈಸೂರಿನಿಂದ ರೈಲು (ಸಂಖ್ಯೆ 01661) ಏಪ್ರಿಲ್ 20 ರಿಂದ ಜುಲೈ 27 ರವರೆಗೆ ಶನಿವಾರ ಬೆಳಗ್ಗೆ 07.30ಕ್ಕೆ ಹೊರಟು ಭಾನುವಾರದಂದು ರಾತ್ರಿ 10.30ಕ್ಕೆ ರಾಣಿ ಕಮಲಾಪತಿ ಮುಟ್ಟಲಿದೆ. ಈ ರೈಲು ನರ್ಮದಾಪುರಂ, ಬೇಲಾಪುರ, ಅಹ್ಮದ್‌ನಗರ, ಸೋಲಾಪುರ, ಹೊಟಗಿ ಸೇರಿ ವಿವಿಧೆಡೆ ನಿಲ್ಲಲಿದೆ. ಜನರಲ್ ಸೆಕೆಂಡ್ ಕ್ಲಾಸ್-2, ಬ್ರೇಕ್, ಎಸ್‌ಸಿ-2 ಟೈರ್-2, ಎಸ್‌ಸಿ-3, ಸ್ಲೀಪರ್ ಕ್ಲಾಸ್-4, ಟೈರ್-3, ಎಸ್‌ಸಿ-3 ಟೈರ್ ಏಕಾನಮಿ-7ಲಗೇಜ್ ಸೇರಿ 22 ಬೋಗಿ ರೈಲಾಗಿದೆ.

* ಬೆಂಗಳೂರು-ಕಲಬುರಗಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು

ಬೆಂಗಳೂರು-ಕಲಬುರಗಿ- ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06589/06590) ಒಟ್ಟು 9 ಟ್ರಿಪ್‌ ಹೊಡೆಯಲಿದೆ. ಏಪ್ರಿಲ್ 21 ರಿಂದ ಮೇ 19ವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ರಾತ್ರಿ 11ಕ್ಕೆ ಬೆಂಗಳೂರು ಎಸ್‌ಎಂವಿಟಿ ಬಿಡುತ್ತದೆ.

ಮರುದಿನ ಬೆಳಗ್ಗೆ 09ಕ್ಕೆ ಕಲಬುರಗಿಗೆ ಆಗಮಿಸಲಿದೆ. ಮರಳಿ ಅಲ್ಲಿಂದ (ರೈಲು 06590) ಏಪ್ರಿಲ್ 22 ರಿಂದ ಮೇ 20ರವರೆಗೆ ಪ್ರತಿ ಸೋಮವಾರ ಮತ್ತು ಬುಧವಾರ ಸಂಜೆ 5 ಗಂಟೆಗೆ ಹೊಡುತ್ತದೆ. ಮಾರನೇ ದಿನ ಬೆಳಗ್ಗೆ 04.20ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ ಇನ್ನಿತರ ಕಡೆ ನಿಲ್ಲಲಿದೆ.

* ಬೆಂಗಳೂರು-ಪ್ರಯಾಗ್ರಾಜ್ ವೀಕ್ಲಿ ಎಕ್ಸ್‌ಪ್ರೆಸ್

ಪ್ರಯಾಗರಾಜ್ - ಬೆಂಗಳೂರು-ಪ್ರಯಾಗ್ರಾಜ್ ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ 04131/04132 ) ರೈಲು 11 ಟ್ರಿಪ್ ಹೊಡೆಯಲಿದೆ. ಈ ರೈಲು ಏಪ್ರಿಲ್ 21 ರಿಂದ ಜೂನ್ 30ರವರೆಗೆ ಪ್ರತಿ ಭಾನುವಾರ ರಾತ್ರಿ 11.30 ಕ್ಕೆ ಪ್ರಯಾಗ್ರಾಜ್ ನಿಂದ ಸಂಚಾರ ಆರಂಭಿಸಿ ಮಂಗಳವಾರ ಸಂಜೆ 6.30ಕ್ಕೆ ರಾಜಧಾನಿ ಬೆಂಗಳೂರಿಗೆ ಬರಲಿದೆ.

ಬೆಂಗಳೂರಿನ ಎಸ್‌ಎಂವಿಟಿ ಯಿಂದ ಏಪ್ರಿಲ್ 24 ರಿಂದ ಜುಲೈ 3ರವರೆಗೆ ಪ್ರತಿ ಬುಧವಾರ ಬೆಳಗ್ಗೆ 07.10ಕ್ಕೆ ಸಂಚಾರ ಆರಂಭಿಸಿ ಗುರುವಾರ ರಾತ್ರಿ 12ಕ್ಕೆ ಪ್ರಯಾಗ್‌ರಾಜ್‌ಗೆ ತೆರಳಲಿದೆ. ಮಾಣಿಕ್‌ಪುರ, ಸತ್ನಾ, ಕಟ್ನಿ, ಜಬಲ್‌ಪುರ್, ಇಟಾರ್ಸಿ, ನಾಗ್‌ಪುರ, ಬಲ್ಲರ್‌ಶಾ, ವಾರಂಗಲ್, ವಿಜಯವಾಡದ ಇನ್ನಿತರ ಕಡೆಗಳಲ್ಲಿ ನಿಲುಗಡೆ ಹೊಂದಿರಲಿದೆ.

* ನ್ಯೂ ಟಿನ್ಸುಕಿಯಾ-ಬೆಂಗಳೂರು ಸಾಪ್ತಾಹಿಕ ರೈಲು

ನ್ಯೂ ಟಿನ್ಸುಕಿಯಾ-ಬೆಂಗಳೂರು- ನ್ಯೂ ಟಿನ್ಸುಕಿಯಾ ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ 05952/05951) ರೈಲು ವಿಶೇಷ 9 ಟ್ರಿಪ್‌ಗಳ ಮೂಲಕ ಸೇವೆ ನೀಡಲಿದೆ. ಮೇ 2 ರಿಂದ ಜೂನ್ 27ರವರೆಗೆ ಪ್ರತಿ ಗುರುವಾರ ಸಂಜೆ 6.45 ಗಂಟೆಗೆ ನ್ಯೂ ಟಿನ್ಸುಕಿಯಾದಿಂದ ಹೊರಟು ಭಾನುವಾರ ಬೆಳಗ್ಗೆ 09.30ಕ್ಕೆ ಬೆಂಗಳೂರಿಗೆ ಬರಲಿದೆ.

ಮೇ 6 ರಿಂದ ಜುಲೈ 1 ರವರೆಗೆ ಪ್ರತಿ ಸೋಮವಾರ ಮಧ್ಯರಾತ್ರಿ 12.30ಕ್ಕೆ ಮರಳಿ ಬೆಂಗಳೂರಿನಿಂದ (ಸಂಖ್ಯೆ 05951) ಹೊರಟು ಬುಧವಾರ ಮಧ್ಯಾಹ್ನ 1.15 ಗಂಟೆಗೆ ನ್ಯೂ ಟಿನ್ಸುಕಿಯಾ ಮುಟ್ಟಲಿದೆ. ಈ ರೈಲು ಧೇಮಾಜಿ, ಉತ್ತರ ಲಖಿಂಪುರ, ಹರ್ಮುಟಿ, ವಿಶ್ವನಾಥ್ ಚರಾಲಿ, ರಂಗಪಾರ ಉತ್ತರ ಸೇರಿ ಇನ್ನಿತರ ಕಡೆಗಳಲ್ಲಿ ನಿಲುಗಡೆ ನೀಡಲಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+