• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಊಟಕ್ಕೂ ಕಷ್ಟಪಡುತ್ತಿರುವ ಕ್ರೀಡಾಪಟು ಸಹಾಯಕ್ಕೆ ನ್ಯೂಜೆರ್ಸಿಯ ಕಟ್ಟೆ ಬಾಯ್ಸ್

By Prasad
|

ಈಗಾಗಲೇ ಬಹಳಷ್ಟು ಜನರಿಗೆ ತಿಳಿದಿರುವಂತೆ, ಕಟ್ಟೆ ಬಾಯ್ಸ್ ಅಂದರೆ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಕ್ರೀಡಾ ಮನೋಭಾವ ಹಾಗು ಸಹಾಯಹಸ್ತ ಚಾಚುವಂಥ ಹೃದಯ ಶ್ರೀಮಂತಿಗೆಯುಳ್ಳ ಕನ್ನಡಿಗರ ಗುಂಪು.

ನೂರಾರು ಕನ್ನಡ ಸಂಘ ಸಂಸ್ಥೆಗಳು ಕನ್ನಡ ಪತಾಕೆಯನ್ನು ಪ್ರಪಂಚದ ನಾನಾ ಮೂಲೆಗಳಲ್ಲಿ ಹಾರಿಸುತ್ತಿದ್ದರೆ, ಈ ಕಟ್ಟೆ ಬಾಯ್ಸ್ ವಿಶೇಷತೆ ಏನೆಂದರೆ ಅಲ್ಲಿದ್ದುಕೊಂಡು ಸದ್ದು ಗದ್ದಲವಿಲ್ಲದೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವುದು.

ಇವರ ಸಮಾಜಸೇವೆ ಚಟುವಟಿಕೆಗಳು ಹಲವಾರು ನೇಪಾಳ ಭೂಕಂಪದಲ್ಲಿ ನೊಂದವರಿಗೆ ಸಹಾಯ, ಆತ್ಮಹತ್ಯೆ ಮಾಡಿಕೊಂಡ ಕನ್ನಡ ರೈತ ಕುಟುಂಬಗಳಿಗೆ ನೆರವು, ಯುದ್ಧದಲ್ಲಿ ವೀರ ಮರಣ ಹೊಂದಿದ ಕನ್ನಡ ಯೋಧರ ಸಂಸಾರಕ್ಕೆ ಸಹಾಯ... ಇತ್ಯಾದಿ ಇತ್ಯಾದಿ

ಅದಕ್ಕೆ ಮತ್ತೊಂದು ಸೇರ್ಪಡೆ, ನತದೃಷ್ಟ ಕನ್ನಡ ಕ್ರೀಡಾಪಟು ಅನಂತ ರಾವ್ ಗೆ ಸಹಾಯ ಹಸ್ತ ಚಾಚಿರುವುದು. [ಹೆಮ್ಮೆಯ ವೀರ ಪುತ್ರರಿಗೆ ಕಟ್ಟೆ ಬಾಯ್ಸ್ ಅಳಿಲು ಸೇವೆ]

ಯಾರಿವರು ಅನಂತ ರಾವ್? : ಮೈಸೂರಿನ ಕನ್ನಡಿಗ ಅನಂತ ರಾವ್ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಪಟು. 9ನೇ ವಯಸಿನಲ್ಲಿ ಸಾಧನೆಯನ್ನು ಪ್ರಾರಂಭಿಸಿ 15 ರಾಷ್ಟ್ರಮಟ್ಟದ, ನೂರಾರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 120ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಮತ್ತು 5 ರಾಷ್ಟ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಪ್ರತಿಭಾವಂತ.

ದುರಾದೃಷ್ಟವಶಾತ್ 2010 ಅಕ್ಟೋಬರ್ ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಲ್ಯಾಂಡ್ ಆಗುವಾಗ ಬೆನ್ನುಹುರಿಗೆ ಬಲವಾದ ಪೆಟ್ಟಾಗಿ ತಮ್ಮ ದೇಹದ ಸ್ವಾಧೀನ ಕಳೆದು ಕೊಂಡಿದ್ದಾರೆ. ದೈನಂದಿನ ಕೆಲಸವನ್ನು ಮಾಡಲೂ ಅಶಕ್ತರಾಗಿರುತ್ತಾರೆ. ಪೆಟ್ಟಿನ ಮೇಲೊಂದು ಪೆಟ್ಟಂತೆ ಇವರ ತಂದೆಯವರು ಮೃತರಾಗಿದ್ದಾರೆ. ಪ್ರತಿನಿತ್ಯದ ಊಟ ಮತ್ತು ಬಾಡಿಗೆಗೂ ಪರೆದಾಡುವ ಪರಿಸ್ಥಿತಿಯಿದೆ.

ಇದನ್ನು ಗಮನಿಸಿದ ಕಟ್ಟೆ ಬಾಯ್ಸ್ 125,000 ರು. ಮತ್ತು ಪುಟ್ಟರಾಜು, ಲೋಕಸಭಾ ಸದಸ್ಯರು, ಸಾ. ರಾ . ಮಹೇಶ್, ಶಾಸಕರು, ರವಿ ಕುಮಾರ್, ಮಹಾಪೌರರು ತಲಾ 25,000 ರು. ಒಟ್ಟು ರು 200,000 ಎರಡು ಲಕ್ಷ ರು.ಗಳನ್ನು ಅನಂತರಾವ್ ಅವರಿಗೆ ನೀಡಲಾಯಿತು.

ಇತ್ತೀಚೆಗೆ ಬಿಡುಗಡೆಯಾದ, ಕ್ರೀಡಾಪಟು ಜೀವನ ಒಳಗೊಂಡ ಬಾಲಿವುಡ್ ಸಿನಿಮಾವನ್ನು ದುಡ್ಡುಕೊಟ್ಟು ನೋಡಿಬಂದ ನಾವು ಚೆನ್ನಾಗಿದೆಯೆಂದು ಹಾಡಿ ಹೊಗಳುತ್ತೇವೆ, ನಿರ್ಮಾಪಕ ರು 700 (ಏಳುನೂರು) ಕೋಟಿ ಲಾಭ ಬಾಚಿಕೊಳ್ಳುತ್ತಾನೆ. ದುರ್ದೈವದ ಸಂಗತಿಯೆಂದರೆ, ನಮ್ಮ ಮನೆ ಹುಡುಗ ಕನ್ನಡಿಗ, ಹೆಮ್ಮೆಯ ಕ್ರೀಡಾಪಟು ಒಪ್ಪತ್ತಿನ ಊಟಕ್ಕೆ ಕಣ್ಣೀರು ಹಾಕುತ್ತಿದ್ದರೂ ನಮಗದು ಕಾಣುವುದಿಲ್ಲ. ಎಂಥ ವಿಪರ್ಯಾಸ!

ಸಹಾಯ ಹಸ್ತ ಮಾಡಲು ಬಯಸುವವರು ಸಂಪರ್ಕಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Katte Boys, a group of Kannadigas in News Jersey, USA has come forward to help talented sportsman Ananth Rao in Mysuru. Gymnast from Mysuru had suffered injury to his back in 2010. He is struggling to eke a livelihood. Thanks to Katte Boys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more