ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಲರ್ನ್ ಟು ಸರ್ವ್,ಸರ್ವ್ ಟು ಲರ್ನ್' ಆರಂಭಿಸಿದ ಮೈಸೂರು ವಿವಿ

By Vanitha
|
Google Oneindia Kannada News

ಮೈಸೂರು, ಸೆ, 03 :ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ ಆಚರಿಸಿಕೊಂಡ ಖುಷಿಯಲ್ಲಿದೆ. ಇದರ ಅಂಗವಾಗಿ Learn To Serve, Serve To Learn (ಕಲಿಕೆಗಾಗಿ ಸೇವೆ, ಸೇವೆಗಾಗಿ ಕಲಿಕೆ) ಎಂಬ ಹೊಸ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ತೆಗೆದುಕೊಂಡಿದೆ.

ವಿಶ್ವವಿದ್ಯಾಲಯ ಈ ಕಾರ್ಯಕ್ರಮ ಮೂಲಕ ತನ್ನ ವ್ಯಾಪ್ತಿಗೆ ಬರುವ 100 ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು, ಪ್ರತಿ ಗ್ರಾಮಕ್ಕೆ 100 ರೈತರಂತೆ ಒಟ್ಟು 10,000 ರೈತರನ್ನು ಆಯ್ಕೆ ಮಾಡಿಕೊಂಡಿದೆ.[ಮೈಸೂರು ವಿವಿಗೆ ಜೋಡಿಯಾದ ಜಪಾನ್ ವಿವಿ]

Mysuru University adopt 100 villages based on Learn to serve, serve to learn programme

ಮೈಸೂರು ವಿ.ವಿ ಯ ವಾಣಿಜ್ಯ ಶಾಸ್ತ್ರ ವಿಭಾಗವು ಮೈಸೂರು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿನ ತಲಾ 25 ಗ್ರಾಮಗಳಂತೆ, 100 ಹಳ್ಳಿಗಳನ್ನು ದತ್ತು ಸ್ವೀಕರಿಸಿದೆ ಎಂದು ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ತಿಳಿಸಿದ್ದಾರೆ.

ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ವಿವಿಧ ಕಾರ್ಯಕ್ರಮಗಳ ಬಳಕೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಗ್ರಾಮೀಣ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಶ್ರಮವಹಿಸುವುದು ಈ ವಿನೂತನ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿ.ವಿ ಯ ಸ್ಯಾಟಲೇಟ್ ಕೇಂದ್ರಗಳ ಜೊತೆಗೆ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ 4 ಉಪವಿಭಾಗಗಳು ಸೇರಿದಂತೆ 50 ಅಧ್ಯಾಪಕರು, 500 ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಗ್ರಾಮೀಣ ಜನರ ಕುಂದು ಕೊರತೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ಈ ಕಾರ್ಯಕ್ರಮದ ಸಂಚಾಲಕ ಕೋಟೇಶ್ವರ್ ಮಾಹಿತಿ ನೀಡಿದ್ದಾರೆ.

English summary
Mysore University has decided to adopt 100 villages. This programme initial name as 'Learn To Serve, Serve To Learn'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X