• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ಮೈಸೂರು ಮಾಜಿ ಮೇಯರ್ ವಿರೋಧ

|
Google Oneindia Kannada News

ಮೈಸೂರು, ಜೂನ್ 6: ಕೆಆರ್‌ಎಸ್‌ನಲ್ಲಿ ನಾಲ್ವಡಿ ಅವರ ಸರಿಸಮನಾಗಿ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಒಪ್ಪಿಗೆ ಸೂಚಿಸಿದರ ಹಿಂದೆ ರಾಜಕೀಯ ಪ್ರವೇಶ ಮಾಡುವ ಆಸಕ್ತಿ ಇದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದ್ದಾರೆ.

   Sanitizer company claiming to destroy corona fined by high court| Devtol Sanitizer |Oneindia Kannada

   ರೈತಸಂಘ, ಬಹು ಜನ ವಿದ್ಯಾರ್ಥಿ ಸಂಘ, ನಾಲ್ವಡಿ ಫೌಂಡೇಷನ್ ಹಾಗೂ ದಸಂಸ ಸಹಯೋಗದಲ್ಲಿ ಶನಿವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಪ್ರಶ್ನಿಸಿ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ರಾಜವಂಶಸ್ಥರು ಸರ್ಕಾರದ ತಿರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

   ಇದರಲ್ಲಿ ಅವರ ರಾಜಕೀಯ ಪ್ರವೇಶದ ಆಸಕ್ತಿ ಇರಬಹುದು. ಸರ್ ಎಂ.ವಿಶ್ವೇಶ್ವರಯ್ಯ ಸರ್ಕಾರಿ ನೌಕರನಂತೆ ಒಂದು ವರ್ಷ ಕೆಲಸ ನಿರ್ವಹಿಸಿದ್ದಾರೆ. ಅದಕ್ಕೆ ವೇತನವನ್ನೂ ಪಡೆದಿದ್ದಾರೆ. ಹಾಗಿದ್ದ ಮಾತ್ರಕ್ಕೆ ನೌಕರನ ಪ್ರತಿಮೆಯನ್ನು ನಾಲ್ವಡಿ ಅವರಿಗೆ ಸಮನಾಗಿ ನಿಲ್ಲಿಸುವುದು ಸೂಕ್ತವಲ್ಲ. ಎಲ್ಲೆಡೆ ಇದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ತಮ್ಮ ಪೂರ್ವಿಕರ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥರೂ ದನಿಗೂಡಿಸಬೇಕಿತ್ತು. ಆದರೆ, ರಾಜವಂಶಸ್ಥರು ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

   ಕೆಆರ್ ಎಸ್ ಮುಂಭಾಗ ಒಡೆಯರ್, ಸರ್ ಎಂವಿ ಪ್ರತಿಮೆ‌ ಸ್ಥಾಪನೆ; ರಾಜಮಾತೆ ಹರ್ಷಕೆಆರ್ ಎಸ್ ಮುಂಭಾಗ ಒಡೆಯರ್, ಸರ್ ಎಂವಿ ಪ್ರತಿಮೆ‌ ಸ್ಥಾಪನೆ; ರಾಜಮಾತೆ ಹರ್ಷ

   ಯಾವುದೇ ಕಾರಣಕ್ಕೂ ನಾಲ್ವಡಿ ಸಮನಾಗಿ ಸರ್‌ಎಂವಿ ಪ್ರತಿಮೆ ನಿರ್ಮಿಸಲು ಬಿಡುವುದಿಲ್ಲ. ಒಂದು ವೇಳೆ ನಿರ್ಮಿಸಿದರೆ, ಸರ್‌ಎಂವಿ ಪ್ರತಿಮೆ ಧ್ವಂಸ ಮಾಡುತ್ತೇವೆ. ರಕ್ತಪಾತ ಆದರೂ ಬಿಡುವುದಿಲ್ಲ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

   ನಾಲ್ವಡಿ ಕೃಷ್ಣರಾಜ ಒಡೆಯರ್ ಅಸ್ಪಶ್ಯತೆ ಹೋಗಲಾಡಿಸಿ ಶೋಷಿತ ಸಮುದಾಯಕ್ಕೂ ಶಿಕ್ಷಣ, ಸಮಾನತೆ ಹಾಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಮತ್ತೆ ಸಮಾಜದಲ್ಲಿ ಅಸ್ಪಶ್ಯತೆ ಜಾರಿಗೆ ತರುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ನಾಲ್ವಡಿ ಅವರ ಪ್ರತಿಮೆ ಪಕ್ಕದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನೂ ನಿಲ್ಲಿಸಬೇಕು ಎನ್ನುವ ಉzಶ ಹೊಂದಿದೆ ಎಂದು ದೂರಿದರು.

   ನಂದೀಶ್ ರಾಜೇ ಅರಸ್ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದಲ್ಲಿ ನಾಲ್ವಡಿ ಪ್ರತಿಮೆ ನಿರ್ಮಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲೇ ನೀಲಿ ನಕ್ಷೆ ತಯಾರಿಸಲಾಗಿತ್ತು. ಆದರೆ, ಸಚಿವ ರಮೇಶ್ ಜಾರಕಿಹೋಳಿ ಅವರು ಇತಿಹಾಸ ತಿಳಿಯದೇ ಮಾತನಾಡುತ್ತಿದ್ದಾರೆ. ಅವರು ಒಮ್ಮೆ ನಾಲ್ವಡಿ ಇತಿಹಾಸ ಓದಿಕೊಳ್ಳಬೇಕಿದೆ ಎಂದರು.

   ಈ ವೇಳೆ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಬಸವರಾಜು, ಪೃಥ್ವಿರಾಜು, ಶಾಂತರಾಜೇ ಅರಸ್, ಟಿ.ಎಂ.ವಿಜಯರಾಜೇ ಅರಸ್, ಅಶ್ವಥ್ ನಾರಾಯಣ ರಾಜೇ ಅರಸ್, ಸೋಸಲೇ ಸಿದ್ದರಾಜು, ಎಚ್.ಎಲ್.ಯಮುನಾ ಉಪಸ್ಥಿತರಿದ್ದರು.

   English summary
   Mysore former mayor purushottham opposed construction of Sir M Vishweshwaraiah statue with Nalwadi Krishnaraja Wadeyar statue
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X