• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರಪ್ರತಿಕ್ರಿಯೆ:ವಿವಿಧ ಸಂಘಟನೆಗಳಿಂದ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟನೆ

By Yashaswini
|

ಮೈಸೂರು, ಸೆಪ್ಟೆಂಬರ್ 10 : ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಗೆ ಮೈಸೂರು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರ ಸಂಘ, ಸಂಸ್ಥೆಗಳು ಬೆಂಬಲ ಘೋಷಿಸಿವೆ.

ಈ ನಡುವೆ ಹೋಟೆಲ್ ಮಾಲೀಕರ ಸಂಘ, ಟ್ರಾವೆಲ್ಸ್ ಅಸೋಸಿಯೇಷನ್, ಆಟೋ ಮಾಲೀಕರ ಸಂಘ, ಕೈಗಾರಿಕೆ, ವರ್ತಕರು ನೈತಿಕ ಬೆಂಬಲವನ್ನು ಮಾತ್ರ ಘೋಷಿಸಿದ್ದಾರೆ.

ವಿಶಿಷ್ಟ ಶೈಲಿಯ ಪ್ರತಿಭಟನೆಗಳಿಗೆ ಹೆಸರಾದ ಮೈಸೂರಿನಲ್ಲಿ ಇಂದು ಕೂಡ ಅವೆಲ್ಲವೂ ಪುನರಾವರ್ತಿತವಾದಂತಿದೆ. ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜನತದಳದಿಂದ ನಡು ರಸ್ತೆಯಲ್ಲಿ ಓಲೆ ಹಾಕಿ ಪಾತ್ರೆ ಇಟ್ಟು ಬೆಂಕಿ ಹಾಕದೆ ಪ್ರತಿಭಟನೆ ನಡೆಸಿದರು.

ಭಾರತ್ ಬಂದ್ LIVE: ದೆಹಲಿಯಲ್ಲಿ ಮಹಾಮೈತ್ರಿಕೂಟದ ಸೂಚನೆ?

ನಗರದ ಕೋರ್ಟ್ ‌ಎದುರಿನ‌ ಗಾಂಧಿ ಪ್ರತಿಮೆ‌ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಓಲೆಗೆ ಬೆಂಕಿ ಹಾಕಲು ನಮ್ಮ‌ ಹತ್ತಿರ ಹಣವಿಲ್ಲ ಎಂದು ಅಳುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸಿದರು.

ಇನ್ನು ಬಂದ್ ಹಿನ್ನೆಲೆ ನಗರದ ‌‌ ಕೆ.ಆರ್‌. ಆಸ್ಪತ್ರೆ ಖಾಲಿ ಖಾಲಿಯಾಗಿತ್ತು. ಸದಾ ರೋಗಿಗಳಿಂದ ಸದಾ ತುಂಬಿ ತುಳುಕುತ್ತಿದ್ದ ಆಸ್ಪತ್ರೆ ವಾಹನ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಯವರೆಗೂ ಯಾವ ರೋಗಿಯೂ ದಾಖಲಾಗಿಲ್ಲ.

ಅಲ್ಲದೇ ಆಸ್ಪತ್ರೆಯಿಂದ ಪ್ರತಿ ದಿನ 70 ರಿಂದ 80 ಹೊರರೋಗಿಯಾಗಿ ಡಿಸ್ಚಾರ್ಜ್ ಆಗುತ್ತಿದ್ದರು. ಆದರೆ ಸಂಚಾರ ವ್ಯವಸ್ಥೆ ಇಲ್ಲದೆ ಆಸ್ಪತ್ರೆಯಲ್ಲೇ ರೋಗಿಗಳು ಉಳಿದುಕೊಂಡಿದ್ದಾರೆ. ಸ್ವಂತ ವಾಹನಗಳಿರುವ ರೋಗಿಗಳಷ್ಟೇ ಆಸ್ಪತ್ರೆ ಕಡೆ ಬರುತ್ತಿದ್ದಾರೆ.

ಭಾರತ್ ಬಂದ್: ಚಿಕ್ಕಮಗಳೂರಿನ ರಸ್ತೆಯಲ್ಲಿಯೇ ಕ್ರಿಕೆಟ್ ಆಡಿ ಪ್ರತಿಭಟನೆ

ಇನ್ನು ನಗರದಲ್ಲಿ ಯಾರೆಲ್ಲಾ ಪ್ರತಿಭಟನೆಗೆ ಬೆಂಬಲ ಸೂಚಿಸಿದರು? ಎಲ್ಲೆಲ್ಲಿ ಏನಾಯ್ತು ಎಂಬ ಮಾಹಿತಿ ಇಲ್ಲಿದೆ ನೋಡಿ...

 ವಿನೂತನ ಪ್ರತಿಭಟನೆ

ವಿನೂತನ ಪ್ರತಿಭಟನೆ

ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಜಿಲ್ಲೆಯ ಮೂಲೆ‌ ಮೂಲೆ‌ಯಿಂದ ಬರುತ್ತಿದ್ದ ರೋಗಿಗಳು ಇಂದು ಕಾಣದಾಗಿದ್ದಾರೆ. ಬೆಲೆ ಏರಿಕೆ ವಿರೋಧಿಸಿ ಇತ್ತ ಬೀದಿಗಿಳಿದ ಜೆಡಿಎಸ್ ಕಾರ್ಯಕರ್ತರು ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟಮಾಡಿ ವಿನೂತನ ಪ್ರತಿಭಟನೆ ಸಹ ನಡೆಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ವಾಹನ ಬಳಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಳ್ಳುವ ಗಾಡಿಯೇ ಗತಿಯೆಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 ಕೆಲವು ಸಂಘಟನೆಗಳಿಂದ ಮಾತ್ರ ಬೆಂಬಲ

ಕೆಲವು ಸಂಘಟನೆಗಳಿಂದ ಮಾತ್ರ ಬೆಂಬಲ

ದಿನೇ ದಿನೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದಂತೆ ಕರೆ ನೀಡಿರುವ ಬಂದ್ ಗೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಬಂದ್ ಗೆ ಸಂಬಂಧಿಸಿದಂತೆ ನಗರದ ಉಳಿದ ಸಂಘ, ಸಂಸ್ಥೆಗಳ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವಂತೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡರಾದರೂ ಕೆಲ ಸಂಘಟನೆಗಳು ಮಾತ್ರ ಬಂದ್ ಗೆ ಬೆಂಬಲ ಸೂಚಿಸಿವೆ.

ಭಾರತ ಬಂದ್ : ಉಡುಪಿಯಲ್ಲಿ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಹೊಡೆದಾಟ

 ಶಾಲಾ ಕಾಲೇಜಿಗೆ ರಜೆ

ಶಾಲಾ ಕಾಲೇಜಿಗೆ ರಜೆ

ಇದೇ ವೇಳೆ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ವತಿಯಿಂದ ಬಂದ್ ಗೆ ಬೆಂಬಲ ನೀಡಲಾಗಿದ್ದು, ಈ ಸಂಬಂಧ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೋದಂಡರಾಮು ಅವರು, ಕೆಲಕಾಲ ಪ್ರತಿಭಟಿಸುವ ಮೂಲಕ ಬಂದ್ ಗೆ ಬೆಂಬಲ ನೀಡಲಾಗುವುದು ಎಂದರು.

ಬಂದ್ ಗೆ ಸಂಬಂಧಿಸಿದಂತೆ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗುವುದರಿಂದ ಮಕ್ಕಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.

 ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು

ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು

ಇಂಧನ ಬೆಲೆ ಏರಿಕೆ ಖಂಡಿಸಿ ಕರೆ ನೀಡಿರುವ ಭಾರತ್ ಬಂದ್ ಗೆ ಮೈಸೂರು ಜಿಲ್ಲಾ ಬಸ್ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಖಾಸಗಿ ಬಸ್ ಗಳನ್ನು ರಸ್ತೆಗಿಳಿಸದೆ ಬಂದ್ ಯಶಸ್ಸಿಗೆ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ತಾಯೂರು ವಿಠ್ಠಲಮೂರ್ತಿ ಹೇಳಿದ್ದಾರೆ.

ಬಂದ್ ಬೆಂಬಲಿಸಿ ನಗರದ ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ ಎಂದು ಮೈಸೂರು ಸಿಟಿ ಫಿಲಂ ಎಕ್ಸಿಬ್ಯುಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಾಜಾರಾಂ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Mysore, protests took place in different style by various organizations. As well as wake of bandh City hospital was empty.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more