ಹಿಂದೂಗಳ ಹತ್ಯೆಯಾದರೆ ಬಿಜೆಪಿಗೆ ಹಬ್ಬ- ಸಚಿವ ಸಂತೋಷ್‌ ಲಾಡ್‌ ಹೀಗಂದಿದ್ಯಾಕೆ?

ಹುಬ್ಬಳ್ಳಿ, ಏಪ್ರಿಲ್‌ 23: ರಾಜ್ಯದಲ್ಲಿ ಅನೇಕ ಹಿಂದೂ ಮಹಿಳೆಯರ ಹತ್ಯೆ ಹಾಗೂ ದೌರ್ಜನ್ಯ ನಡೆದರೆ ಪ್ರತಿಭಟನೆ ನಡೆಸದ ಬಿಜೆಪಿ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕ ಹಿಂದೂ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದರಿಂದ ಪ್ರಚಾರ ಪಡೆಯುತ್ತಿದೆ. ಬಿಜೆಪಿಗೆ ಹಿಂದೂಗಳ ಹತ್ಯೆಯಾದರೆ ಹಬ್ಬ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಹತ್ಯೆಗೀಡಾದ ನೇಹಾ ಹಿರೇಮಠ ಮನೆಯನ್ನು ಬಿಜೆಪಿಯವರು ಪ್ರಚಾರ ತಾಣವನ್ನಾಗಿಸಿಕೊಂಡಿದ್ದಾರೆ. ಬಿಜೆಪಿ ನಾಯಕರು ನಿತ್ಯ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ ಎಂದರು.

Minister Santosh Lad Lashes Out At BJP On Neha Hiremath Murder Case

ಕೊಲೆಗೀಡಾದ ವಿದ್ಯಾರ್ಥಿನಿ ನೇಹಾಳ ತಂದೆ ನಿರಂಜನ ಹಿರೇಮಠ ನನ್ನ ಸ್ನೇಹಿತ. ಬಿಜೆಪಿಯವರು ನಿಮ್ಮನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ನೈಜತೆ ನಿರಂಜನ ಅವರಿಗೆ ತಿಳಿಯಬೇಕು. ಆ ಕುಟುಂಬದ ದುಃಖ ನಮಗೆ ಅರ್ಥವಾಗುತ್ತದೆ. ಕೈ ಮುಗಿದು ಕೇಳುತ್ತೇನೆ ಪಕ್ಷದ ಬಗ್ಗೆ ಮಾಡನಾಡುವುದನ್ನು ಬಿಡಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮೊದಲ ಬಾರಿಗೆ ಶಾಸಕರಾದವರು. ಯಡಿಯೂರಪ್ಪ ಅವರ ಹೆಸರು ಇಲ್ಲದಿದ್ದರೆ ವಿಜಯೇಂದ್ರ ಶೂನ್ಯ. ಅಂತವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ವಿಜಯೇಂದ್ರ ಅವರು ತಕ್ಷಣ ಮುಖ್ಯಮಂತ್ರಿಯವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ನೇಹಾ ಹತ್ಯೆ ಪ್ರಕರಣ: ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಿದ ಸಿಐಡಿ ತಂಡ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್‌ಪಿ ದರ್ಜೆಯ ಅಧಿಕಾರಿ ನೇತೃತ್ವದ ತಂಡ ಸೋಮವಾರ ತಡರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಿದೆ. ತಂಡದಲ್ಲಿ ಡಿವೈಎಸ್‌ಪಿ ದರ್ಜೆ ಅಧಿಕಾರಿ ಸೇರಿ ಎಂಟು ಮಂದಿ ಸಿಬ್ಬಂದಿ ಇರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಸಿಐಡಿ ಅಧಿಕಾರಿಗಳ ತಂಡ ಇಂದು ಮಂಗಳವಾರ ಬೆಳಗ್ಗೆ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಿದೆ. ನಂತರ ವಿದ್ಯಾನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಈವರೆಗೆ ಕೈಗೊಂಡ ತನಿಖೆಯ ಮಾಹಿತಿ ಪಡೆದು, ತನಿಖಾಧಿಕಾರಿಯಿಂದ ಕಡತ ಹಸ್ತಾಂತರಿಸಿಕೊಳ್ಳುವ ಸಾಧ್ಯತೆಯಿದೆ. ನೇಹಾ ಪಾಲಕರ ಹೇಳಿಕೆಯನ್ನು ಸಹ ಪಡೆದು ತನಿಖೆ ಮುಂದುವರಿಸಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸ್ಥಳೀಯ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ, ಕೃತ್ಯಕ್ಕೆ ಬಳಸಿದ ಚಾಕು, ಕೊಲೆಯಾದ ನೇಹಾಳ ಮತ್ತು ಆರೋಪಿ ಫಯಾಜ್‌ನ ರಕ್ತದ ಮಾದರಿ, ಬಟ್ಟೆಗಳನ್ನು ಸಂಗ್ರಹಿಸಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅಲ್ಲದೇ, ಕೃತ್ಯ ನಡೆದ ಸ್ಥಳದಲ್ಲಿದ್ದ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+