• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ್ ಬಂದ್ LIVE: ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ರಾಜಧಾನಿ

|

ಬೆಂಗಳೂರು, ಸೆಪ್ಟೆಂಬರ್ 10: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಇಂದು(ಸೆ.10) ಭಾರತ್ ಬಂದ್ ಕರೆ ನೀಡಿವೆ.

ತೈಲ ಬೆಲೆ ಏರಿಕೆ ಖಂಡಿಸಿ ಮಾತ್ರವಲ್ಲದೆ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನ ಕಾಣುತ್ತಿರುವುದು ಮತ್ತು ರಫೆಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಲು ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದ್ದು, ದೇಶದೆಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪೆಟ್ರೋಲ್ ಬೆಲೆ ಲೀಟರ್ ಗೆ ರೂ.80 ಗಡಿ ದಾಟಿದ್ದು, ಡೀಸೆಲ್ ಬೆಲೆ ರೂ. 75 ರ ಆಸುಪಾಸಿನಲ್ಲಿದೆ. ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ.

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

Bharat Bandh on September 10: Live Updates

ಬಂದ್ ಗೆ ಕರೆನೀಡದಿದ್ದು ಕಾಂಗ್ರೆಸ್ ಮತ್ತು ಇನ್ನಿತರ ವಿರೋಧಪಕ್ಷಗಳೇ ಆಗಿರುವುದರಿಂದ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಕರ್ನಾಟಕಕ್ಕೂ ಆ ಬಿಸಿ ತಟ್ಟಲಿದೆ.

ಪೆಟ್ರೋಲ್ ಬೆಲೆ ಹೆಚ್ಚಳದ ನಿಜವಾದ ಕಾರಣ, ಭಾರತ ಬಂದ್ ಯಾಕೆ ಹೇಳ್ರಣ್ಣ

ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದ್ದು, ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

Newest First Oldest First
3:53 PM, 10 Sep
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯೂ ತಣ್ಣಗಾದ ಬಂದ್ ಬಿಸಿ
3:32 PM, 10 Sep
ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭ, ಸಹಜ ಸ್ಥಿತಿಯತ್ತ ರಾಜಧಾನಿ
3:31 PM, 10 Sep
ಮಹಾರಾಷ್ಟ್ರದಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
2:43 PM, 10 Sep
ಪ್ರತಿಭಟನೆಯ ವೇಳೆ ಕಾಂಗ್ರೆಸ್ ನ ಮಾಜಿ ಮಂತ್ರಿ ಬಿಸ್ಮಿತಾ ಗೋಗಾಯ್ ಅವರನ್ನು ಅಸ್ಸಾಮಿನಲ್ಲಿ ಬಂಧಿಸಿದ ಪೊಲೀಸರು.
2:41 PM, 10 Sep
'ಪ್ರತಿಭಟನೆ ಮಾಡಲು ಕಾಂಗ್ರೆಸ್ ಗೆ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಇಂಧನ ಬೆಲೆ ಏರಿಕೆಯಾಗಿತ್ತು'- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
1:48 PM, 10 Sep
ಮಗು ಮೃತಪಟ್ಟಿದ್ದಕ್ಕೆ ಪ್ರತಿಭಟನೆ ಕಾರಣವಲ್ಲ. ಮಗುವನ್ನು ಮನೆಯಿಂದ ಆಸ್ಪತ್ರೆಗೆ ಕರೆತರುವಾಗಲೇ ವಿಳಂಬವಾಗಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರಿಂದ ಸಮಜಾಯಿಷಿ
1:46 PM, 10 Sep
ಬಿಹಾರದ ಜೆಹಾನಾಬಾದ್ ನಲ್ಲಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ 2 ವರ್ಷ ವಯಸ್ಸಿನ ಮಗು ಸಾವು. ಆಸ್ಪತ್ರೆ ಹಾದಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಬೇಗ ಆಸ್ಪತ್ರೆ ಸೇರದ ಅಂಬುಲೆನ್ಸ್. ಮಗುವಿನ ಸಾವಿಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರೇ ಹೊಣೆ ಎಂದ ಬಿಜೆಪಿ
1:35 PM, 10 Sep
"ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವುದಕ್ಕೆ ಹಕ್ಕಿದೆ. ಆದರೆ ಇದರಿಂದ ಏನು ಪ್ರಯೋಜನವಾದಂತಾಯಿತು? ಬಸ್ಸುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ, ಪೆಟ್ರೋಲ್ ಪಂಪ್ ಅನ್ನು ದ್ವಂಸಗೊಳಿಸಲಾಗಿದೆ, ಅಂಬುಲೆನ್ಸ್ ವೊಂದು ಪ್ರತಿಭಟನೆಯ ಸಂದರ್ಭದಲ್ಲಿ ಸಿಲುಕಿಕೊಂಡಿದ್ದರಿಂದ ಮಗುವೊಂದು ಮೃತವಾಗಿದೆ. ಇದಕ್ಕೆಲ್ಲ ಯಾರು ಹೊಣೆ"-ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
1:30 PM, 10 Sep
ಭಾರತ್ ಬಂದ್ ಪ್ರತಿಭಟನೆ ವೇಳೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡ ಅಂಬುಲೆನ್ಸ್. ಎರಡು ವರ್ಷದ ಮಗು ಸಾವು.
1:17 PM, 10 Sep
ದೆಹಲಿಯಲ್ಲಿ ಭಾರತ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಡಪಕ್ಷದ ಸೀರಾಮ್ ಯಚೂರಿ ಮತ್ತು ಎ.ರಾಜಾ ಮತ್ತಿತರು.
1:06 PM, 10 Sep
ಯಾದಗಿರಿಯಲ್ಲಿ ಬಂದ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಅಂಗಡಿ ಮುಂಗಟ್ಟು ಮುಚ್ಚಿದ ಕಾರ್ಯಕರ್ತರು
12:53 PM, 10 Sep
"ಈ ದೇಶದಲ್ಲಿ ರೈತರ ಸಾಲಮನ್ನಾ ಸಾಧ್ಯವಿಲ್ಲ. ಆದರೆ ಉದ್ಯಮಿಗಳಿಗೆ 45,000 ಕೋಟಿ ರೂ. ಉಡುಗೊರೆ ನೀಡುವುದಕ್ಕೆ ಸರ್ಕಾರದ ಬಳಿ ಹಣವಿದೆ! ನರೇಂದ್ರ ಮೋದಿಯವರು ಇಡೀ ದೇಶದ ಸುತ್ತ ಸುತ್ತುತ್ತಾರೆ. ಆದರೆ ಒಂದು ಕಡೆಯೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡುತ್ತಿಲ್ಲ"- ರಾಹುಲ್ ಗಾಂಧಿ
12:49 PM, 10 Sep
'ಈ ದೇಶದ ಜನತೆಯ ಮನಸ್ಸಿನಲ್ಲಿರುವ ದುಃಖ ನಮ್ಮ ಹೃದಯದಲ್ಲೂ ಇದೆ. ಆದರೆ ಆ ದುಃಖ ಈ ದೇಶದ ಪ್ರಧಾನಿ ಮೋದಿಯವರಿಗೆ ಮತ್ತು ಬಿಜೆಪಿಯವರಿಗೆ ಗೊತ್ತಿಲ್ಲ. ಭಾರತದ ಯುವಕರಿಗೆ ಗೊತ್ತಿರಲಿ, ಮೋದಿ ತಮ್ಮ ಸ್ನೇಹಿತನಿಗೆ ನೀಡಿದ 45,000 ಕೋಟಿ ರೂ.ಹಣ ಅವರದಲ್ಲ. ಈ ದೇಶದ ಯುವಕರು ಮತ್ತು ರೈತರದು'- ರಾಹುಲ್ ಗಾಂಧಿ
12:30 PM, 10 Sep
"ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಒಂದಾಗಿದ್ದೇವೆ" ಎಂದು ಮಹಾಮೈತ್ರಿಯ ಸೂಚನೆಯನ್ನು ಮತ್ತೊಮ್ಮೆ ನೀಡಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
12:25 PM, 10 Sep
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷವಾದರೂ ಎಂದಿಗೂ ಡಾಲರ್ ಎದುರು ರೂಪಾಯಿ ಈ ಪರಿ ಕುಸಿತ ಕಂಡಿರಲಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ- ರಾಹುಲ್ ಗಾಂಧಿ
12:18 PM, 10 Sep
ರೈತರ ಸಾಲಮನ್ನಾ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಒಬ್ಬ ಉದ್ಯಮಿಗೆ 45,000 ಕೋಟಿ ರೂ. ನೀಡುವುದಕ್ಕೆ ಸಾಧ್ಯವಿದೆ- ರಾಹುಲ್ ಗಾಂಧಿ
12:14 PM, 10 Sep
ಭಾರತ್ ಬಂದ್ ಪ್ರತಿಭಟನೆ ವೇಳೆ ಮಹಾಮೈತ್ರಿಯ ಸೂಚನೆ ನೀಡಿದ ವಿಪಕ್ಷಗಳು.
11:58 AM, 10 Sep
"ವಿರೋಧ ಪಕ್ಷದ ಬಳಿ ಯಾವುದೇ ಸ್ಟ್ರಾಟಜಿಯಾಗಲೀ, ಉತ್ತಮ ನಾಯಕತ್ವವಾಗಲೀ ಇಲ್ಲ. ಅವರಿಂದ ಇನ್ನೇನನ್ನು ನಿರೀಕ್ಷಿಸುವುದಕ್ಕೆ ಸಾಧ್ಯ? ಇದೇ ರೀತಿ ಮುಂದುವರಿದರೆ ಅವರು ಈಗಿರುವ ಸ್ಥಿತಿಗಿಂತ ಕೆಳಗೆ ತಲುಪುವುದು ಖಂಡಿತ"- ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
11:51 AM, 10 Sep
ಭಾರತ ಎಂದಿಗೂ ಬಂದ್ ಆಗುವುದಿಲ್ಲ. ಅದು ಎಂದಿಗೂ ಚಲನಶೀಲವಾಗಿಯೇ ಇರುತ್ತದೆ. ಕಾಂಗ್ರೆಸ್ ಪ್ರಾಯೋಜಿತ ಈ ಬಂದ್ ಗೆ ಯಾರೂ ಬೆಂಬಲ ನೀಡುವುದಿಲ್ಲ. ಅವರ ಮಹಾಘಟಬಂಧನದ ಬಲೂನ್ ಸಹ ಸದ್ಯದಲ್ಲೇ ಠುಸ್ಸೆನ್ನುತ್ತೆ- ಮುಕ್ತಾರ್ ಅಬ್ಬಾಸ್ ನಖ್ವಿ
11:44 AM, 10 Sep
ನಮ್ಮೊಂದಿಗೆ ಈಗ ಯಾವೆಲ್ಲ ಮಿತ್ರಪಕ್ಷಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆಯೋ, ನಾವೆಲ್ಲರೂ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸುತ್ತೇವೆ- ರಾಹುಲ್ ಗಾಂಧಿ
11:43 AM, 10 Sep
ತೈಲ ಬೆಲೆ ಏರಿಕೆ ಬಗ್ಗೆಯಾಗಲೀ, ರೈತರ ಸ್ಥಿತಿಯ ಬಗ್ಗೆಯಾಗಲೀ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆಯಾಗಲೀ ಪ್ರಧಾನಿ ನರೇಂದ್ರ ಮೋದಿಜೀ ಒಂದೂ ಮಾತನಾಡುತ್ತಿಲ್ಲ- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
11:38 AM, 10 Sep
ರಾಮಲೀಲಾ ಮೈದಾನದಲ್ಲಿ ಭಾರತ್ ಬಂದ್ ಧರಣಿ ವೇಳೆ ಮಾನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
11:21 AM, 10 Sep
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಪೆಟ್ರೋಲ್ ಪಂಪ್ ಧ್ವಂಸಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು
11:07 AM, 10 Sep
ಮಂಬೈಯಲ್ಲಿ ಅಂಗಡಿಗಳನ್ನು ಒತ್ತಾಯದಿಂದ ಮುಚ್ಚಿಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡರು
10:47 AM, 10 Sep
ದೆಹಲಿಯ ರಾಮಲೀಲಾ ಮೈದಾನದಲ್ಲಿಪ್ರತಿಭಟನೆಗೆ ಕಾಂಗ್ರೆಸ್ ನೊಂದಿಗೆ 12 ಪಕ್ಷಗಳು ಭಾಗಿ
10:44 AM, 10 Sep
ರಸ್ತೆಯಲ್ಲಿ ಚಹ, ಅಡುಗೆ ಮಾಡಿ ಶಿರಸಿಯಲ್ಲಿ ಪ್ರತಿಭಟನೆ
10:40 AM, 10 Sep
"ಈ ದೇಶದ ಜನರ ಹಿತಾಸಕ್ತಿಗೆ ವಿರುದ್ಧವಾದ ಸಾಕಷ್ಟು ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಈ ಸರ್ಕಾರವನ್ನು ಬದಲಾಯಿಸಲು ಇದು ಸರಿಯಾದ ಸಮಯ"- ಮಾಜಿ ಪ್ರಧಾನಿ ಮನಮೋಹನ್ ಸಿಂಗ್
10:36 AM, 10 Sep
ಮೈಸೂರಿನಲ್ಲಿ ರೈಲು ಪ್ರಯಾಣಿಕರಿಗೆ ತಟ್ಟದ ಬಂದ್ ಬಿಸಿ. ಎಂದಿನಂತೆ ರೈಲು ಸಂಚಾರ ಆರಂಭ. ಬಸ್ ನಿಲ್ದಾಣಗಳಿಂದ ರೈಲು ನಿಲ್ದಾಣದತ್ತ ಮುಖ ಮಾಡುತ್ತಿರುವ ಪ್ರಯಾಣಿಕರು.
10:26 AM, 10 Sep
ಬೆಂಗಳೂರಿನಲ್ಲಿ ಅಹಿತಕರ ಘಟನೆ ತಪ್ಪಿಸಲು ಪೆಟ್ರೋಲ್ ಬಂಕ್ ಗಳನ್ನು ಮುಚ್ಚುವಂತೆ ಸೂಚಿಸಿದ ಪೊಲೀಸರು.
10:20 AM, 10 Sep
ಮಂಗಳೂರಿನ ಬೆಂದೂರ್ ವೆಲ್ ನಲ್ಲಿ ಮೆಡಿಕಲ್ ಶಾಪ್ ಮುಚ್ಚಿಸಲು ಪ್ರಯತ್ನಿಸಿದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Bandh September 10 Live Updates: Congress and other opposition parties call Bharat Bandh to oppose petrol and diesel price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more