ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಾಪ ಸಿಂಹ 'ಬ್ಲೂ ಫಿಲಂ ಹೀರೋ': ಕಾಂಗ್ರೆಸ್‌ ವಕ್ತಾರನ ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 30: ಮೊನ್ನೆ ಬಿ.ವೈ ವಿಜಯೇಂದ್ರ ಅವರ ಮೇಲೆ ಹಣ ಲೂಟಿ ಆರೋಪ ಮಾಡಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಈಗ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ಪ್ರತಾಪ್ ಸಿಂಹ ಅವರನ್ನು "ಹೀ ಇಸ್ ಎ ಬ್ಲೂ ಫಿಲಂ ಹೀರೋ" ಎಂದು ಎಂ.ಲಕ್ಷ್ಮಣ್ ನಿಂದಿಸಿದ್ದಾರೆ.

ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್ ಅವರು, "ಪ್ರತಾಪ್ ಸಿಂಹ ನಿನೋಬ್ಬನೆ ದೇಶದಲ್ಲಿ ಬುದ್ದಿವಂತಾನಾ.? ನೀನು ಎಷ್ಟು ಹೆಣ್ಣು ಮಕ್ಕಳನ್ನು ಹಾಳು ಮಾಡಿದ್ದಿಯಾ ಅಂತ ಗೊತ್ತಿದೆ. ಅದಕ್ಕೆ ಸಾಕ್ಷಿ ಇದೆ. ಕೋರ್ಟ್ ಅನುಮತಿ ಪಡೆದು ಪ್ರೊಜೆಕ್ಟರ್ ಅಲ್ಲೆ ಬಿಡುಗಡೆ ಮಾಡ್ತೀನಿ. ನಿಮ್ಮ ಭ್ರಷ್ಟಾಚಾರ, ವೈಯುಕ್ತಿಕ ಜೀವನದ ಬಗ್ಗೆ ನನಗೆ ಮಾಹಿತಿ ಇದೆ. ಪ್ರತಾಪ್ ಸಿಂಹ ಒಬ್ಬ ಬ್ಲೂ ಫಿಲಂ ಹೀರೋ, ಪ್ರತಾಪ್ ಸಿಂಹ ಒಬ್ಬ ಕಚ್ಚೆಹರುಕ, ಬಾಯಿ ಹರುಕ" ಎಂದು ಕಿಡಿಕಾರಿದರು.

ನಿನ್ನ ಯೋಗ್ಯತೆ ಏನು ಅಂತ ಸಾಬೀತು ಮಾಡುತ್ತೇನೆ

ನಿನ್ನ ಯೋಗ್ಯತೆ ಏನು ಅಂತ ಸಾಬೀತು ಮಾಡುತ್ತೇನೆ

"ಪ್ರತಾಪ್ ಸಿಂಹ ನೀವು ಸೈಟಿಗಾಗಿ ಮಡದಿಯನ್ನು ತಂಗಿ ಅಂತ ಹೇಳಿದ್ದಿಯಾ. ಚುನಾವಣೆ ಸಂದರ್ಭದಲ್ಲಿ ಒಂದು ಆಡಿಯೋ ವೈರಲ್ ಆಗಿತ್ತು. ಅಂತಹ ಇನ್ನು ನಾಲ್ಕು ಆಡಿಯೋ ಇದೆ. ಈಗಲೇ ನಿನ್ನ ಯೋಗ್ಯತೆ ಏನು ಅಂತ ಸಾಬೀತು ಮಾಡುತ್ತೇನೆ. ನೀನೇನು ಮಾಡುತ್ತೀಯಾ ಪ್ರತಾಪ್ ಸಿಂಹ ಎಂದು ವಾಗ್ದಾಳಿ ನಡೆಸಿದ ಲಕ್ಷ್ಮಣ್, ಶೇ.10 ಗೆ ಸಂಸದರ ಅನುದಾನವನ್ನು ಮಾರಿಕೊಂಡಿದ್ದು, ಇದಕ್ಕೂ ದಾಖಲೆಗಳಿವೆ. ಅಲ್ಲದೇ ಪತ್ರಕರ್ತನಾಗಿದ್ದಾಗ ಏನೇನು ಮಾಡಿದ್ದಿಯಾ ಅನ್ನೋದು ಗೊತ್ತಿದೆ, ಇದಕ್ಕೆಲ್ಲಾ ದಾಖಲೆಗಳಿವೆ" ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರರಿಂದ 5 ಸಾವಿರ ಕೋಟಿ ರೂ. ಲೂಟಿ: ಕಾಂಗ್ರೆಸ್ ಆರೋಪಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರರಿಂದ 5 ಸಾವಿರ ಕೋಟಿ ರೂ. ಲೂಟಿ: ಕಾಂಗ್ರೆಸ್ ಆರೋಪ

ಅವನೇ ನನ್ನ ವಿರುದ್ಧ ಕೇಸ್ ಹಾಕಲಿ

ಅವನೇ ನನ್ನ ವಿರುದ್ಧ ಕೇಸ್ ಹಾಕಲಿ

"ಪ್ರತಾಪ್ ಸಿಂಹ ವಿರುದ್ಧ ನಾನು ಕೋರ್ಟ್ ನಲ್ಲಿ ಕೇಸ್ ಹಾಕುವುದಿಲ್ಲ. ಬದಲಿಗೆ ಅವನೇ ನನ್ನ ವಿರುದ್ಧ ಕೇಸ್ ಹಾಕಲಿ, ಗಟ್ಸ್ ಇದ್ದರೆ ನನ್ನ ಮೇಲೆ ಕೇಸ್ ಹಾಕಲಿ. ಮಾನನಷ್ಟ ಮೊಕದ್ದಮೆ ಹಾಕಲಿ. ನಾನು ದಾಖಲೆಗಳನ್ನು ಕೋರ್ಟ್ ಗೆ ನೀಡುತ್ತೇವೆ. ಈ ಹಿಂದೆ ಪ್ರಕಾಶ್ ರೈ ಇವರ ವಿರುದ್ದ 1 ರೂ. ಕೇಸ್ ಹಾಕಿದ್ದರು. ಆಗ ಅವರ ಕೈಕಾಲು ಹಿಡಿದು ಕೇಸ್ ವಾಪಸ್ ತೆಗೆಸಿದ್ದರೂ, ನನ್ನ ಮೇಲೆ ಒತ್ತಡ ಹಾಕಿ ಕೇಸ್ ಹಾಕಬಹುದು. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ನೀವು ಹೆದರಿಸಿದ ತಕ್ಷಣ ನಾನು ಹೆದರುವುದಿಲ್ಲ. ಚುನಾವಣಾ ಸಂದರ್ಭದ ಆ ಹುಡುಗಿ ಎಲ್ಲಿ ಹೋದಳು? ಕೊಲೆ ಏನಾದರೂ ಮಾಡಿಸಿಬಿಟ್ಟರೆ?" ಎಂದು ಪ್ರತಾಪ್ ಸಿಂಹ ಅವರನ್ನು ಎಂ.ಲಕ್ಷ್ಮಣ್ ಪ್ರಶ್ನಿಸಿದ್ದಾರೆ.

ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀಯಾ?

ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀಯಾ?

ನಾನೊಬ್ಬ ರೋಲ್‍ಕಾಲ್ ಗಿರಾಕಿ, ಬ್ಲಾಕ್‍ಮೆಲರ್ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಹಾಗೇನಾದರೂ ನಾನು ಯಾರಿಗಾದರೂ ಬ್ಲಾಕ್ ಮೇಲ್ ಮಾಡಿದ್ದರೆ ಅದನ್ನು ಸಾಬೀತು ಮಾಡಲಿ. ಕಲಾಮಂದಿರದ ಮುಂದೆ ನಾನೇ ನೇಣಿಗೆ ಶರಣಾಗುತ್ತೇನೆ. ರಾಷ್ಟ್ರಪತಿಗಳಿಗೆ ಪತ್ರ ಬರೆದು ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ ಎಂದ ಎಂ.ಲಕ್ಷ್ಮಣ್, ನೀನೇನು ನನ್ನ ಬಗ್ಗೆ ಮಾತಾಡುತ್ತೀಯಾ, ನನ್ನ ಆರೋಪ ಸತ್ಯವಾದರೆ ನೀನು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀಯಾ? ಎಂದು ಬಹಿರಂಗ ಸವಾಲು ಹಾಕಿದ್ದಾರೆ.

"ಬಿಜೆಪಿಯಲ್ಲಿದ್ದರೂ ವಿಶ್ವನಾಥ್ ಅವರಿಗೆ ಪೂರ್ವಾಶ್ರಮದ ಪ್ರಭಾವ ಕಡಿಮೆಯಾಗಿಲ್ಲ"

ಕಾಂಗ್ರೆಸ್ ನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು

ಕಾಂಗ್ರೆಸ್ ನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು

ಇತ್ತೀಚಿಗೆ ಸಿಎಂ ಯಡುಊರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಮೇಲೆ 5 ಸಾವಿರ ಕೋಟಿ ರೂ. ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ವಿಜಯೇಂದ್ರರ ಮೇಲಿನ ಆರೋಪದ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ನನ್ನ ಪಕ್ಷದಿಂದಲೂ ಒಂದು ರುಪಾಯಿ ಪಡೆದಿಲ್ಲ ಎಂದರು.

ಜೊತೆಗೆ ಪ್ರತಾಪ್ ಸಿಂಹ ಪರ್ಸೆಂಟೇಜ್ ತೆಗೆದುಕೊಳ್ಳುತ್ತಾರೆ ಎಂದಿದ್ದು, ಈ ಹಿಂದೆ ಪರಿವರ್ತನಾ ಸಭೆಯಲ್ಲಿ ಅಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಇವರಿಬ್ಬರ ಈ ವಾಕ್ಸಮರ ಇನ್ನೂ ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಕಾದು ನೋಡಬೇಕು.

English summary
Mysuru District Congress spokesperson M Lakshman has criticized of MP Pratap Simha "he is a blue film hero'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X