ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್

Posted By:
Subscribe to Oneindia Kannada
   ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್ | Oneindia Kannada

   ಮೈಸೂರು, ಡಿಸೆಂಬರ್ 4: ಮೈಸೂರಿನ ಹಣಸೂರಿನಲ್ಲಿ ಹನುಮ ಜಯಂತಿಯ ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲವೆಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

   ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಿಮಿನಲ್ ಕೇಸ್, ಡಿ.4 ಹುಣಸೂರು ಬಂದ್

   "ಆಳುವವರ ಅಣತಿ ಮೀರುವಹಾಗಿಲ್ಲ ಅಲ್ವಾ ಸಾರ್?! ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಆಳುವ ಪಕ್ಷದ ಆಳುಗಳು ಅನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿರುವ ಅಣ್ಣಾಮಲೈ, ಸರ್ಕಾರವನ್ನು ಎದುರುಹಾಕಿಕೊಂಡ ಡಿಐಜಿ ರೂಪ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ, ಭಾಷಣ ನಿಲ್ಲಿಸಿ" ಎಂದು ಪ್ರತಾಪ್ ಸಿಂಹ ಟ್ವಿಟ್ಟರ್ ನಲ್ಲಿ ಪರೋಕ್ಷವಾಗಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ವಿರುದ್ಧ ಹರಿಹಾಯ್ದರು.

   'ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು

   ಭಾನುವಾರ ಹಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ತಡೆದು ಬಂಧಿಸಿದ್ದರು.ಇದರಿಂದ ಆಕ್ರೊಶಗೊಂಡ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಭಾನುವಾರ ರಾತ್ರಿಯೇ ಪ್ರತಾಪ್ ಸಿಂಹ ಅವರನ್ನು ಬಿಡುಗಡೆಗೊಳಿಸಿದರು.

   ಪ್ರತಾಪ್ ಸಿಂಹ ಬಿಡುಗಡೆ, ಡಿ 4.ರಂದು ಹುಣಸೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

   ಮುಂಜಾಗ್ರತ ಕ್ರಮವಾಗಿ ಮೈಸೂರು ಜಿಲ್ಲಾಡಳಿತ ಸೋಮವಾರ ಹುಣಸೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

   ರವಿ ಚನ್ನಣ್ಣನವರ್ ವಿರುದ್ಧ ಟ್ವೀಟ್ ಮಾಡಿರುವುದುಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತಿವೆ. ಯಾರು ಏನು ಹೇಳಿದ್ದಾರೆ ಎನ್ನುವುದನ್ನು ಸ್ಲೈಡ್ ಗಳಲ್ಲಿ ನೋಡಿ.

   ನಿಮಗೆ ಜೈ ಅಂದರೆ ಅವರು ಉತ್ತಮರು

   'ನಿಮಗೆ ಜೈ ಅಂದರೆ ಅವರು ಉತ್ತಮರು. ಇಲ್ಲದಿದ್ದರೆ ಅವರು ಆಳುಗಳು.. ಈ ಮಾತಡಲು ನಾಚಿಕೆ ಆಗಲ್ವ ಒಬ್ಬ ಖಡಕ್ ಆಧಿಕಾರಿ ಬಗ್ಗೆ..; ಎಂದು ಸಂತೋಷ್ ಬಿ ಎಸ್ ಎನ್ನುವರು ಪ್ರತಾಪ ಸಿಂಹ ಟ್ವೀಟ್ ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಖಾಖಿ ಹಾಕಿದೋರೆಲ್ಲ ಪೋಲಿಸ್ ಅಗಲ್ಲ

   ಮೀಸೆ ಬಿಟ್ಟೋರೆಲ್ಲ ಕೆಂಪೇಗೌಡ ಅಗಲ್ಲ, ಖಾಖಿ ಹಾಕಿದೋರೆಲ್ಲ ಪೋಲಿಸ್ ಅಗಲ್ಲ, ಹಿಂದೂಗಳನ್ನ ತಡೆದು ಯಾರು ಉದ್ದಾರ ಅಗಿಲ್ಲ ಭಾಷಣ ಬಿಟ್ಟು ಭಂಟಂಗಿತನ ಬಿಡ್ರಿ Mr.sp ಎಂದು ಪ್ರದೀಪ್ ಟಿ. ಕೆ ಎನ್ನುವರು ಚನ್ನಣ್ಣನವರ್ ವಿರುದ್ಧ ಕಿಡಿಕಾರಿದ್ದಾರೆ.

   ಅನ್ಯ ಮಾರ್ಗವಿಲ್ಲದೆ ಲಾಠಿ ಚಾರ್ಜ್ ಮಾಡಿದ್ದಾರೆ

   ನಿಷೇದಾಜ್ಞೆ ಇರುವಾಗ ಮೆರವಣಿಗೆ ಮಾಡಿದ್ದೂ ಅಲ್ಲದೆ,ಪೊಲೀಸ್ ಇಲಾಖೆ ಅನುಮತಿ ನೀಡದ ಪ್ರದೇಶದ ಕಡೆ ಮೆರವಣಿಗೆ ಸಾಗುವಂತೆ ಮಾಡಿ ಮೆರವಣಿಗೆಯನ್ನು ಉಗ್ರ ವಾಗಿಸಿದ್ದಾರೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಪೊಲೀಸರು ಕೂಡಾ ಅನ್ಯ ಮಾರ್ಗವಿಲ್ಲದೆ ಲಾಠಿ ಚಾರ್ಜ್ ಮಾಡಿದ್ದಾರೆನ್ನಲಾಗಿದೆ.ಶಾಂತಿ ಕಾಪಾಡುವ ನಿಟ್ಟಿನಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ.

   ಆಫೀರ್ ಗಳು ಅಂದ್ರೆ ಅವರ ಮನೆ ಕೆಲಸ ಮಾಡೋರು

   ಕರ್ನಾಟಕ ಸಿಎಂಗೆ ಆಫೀರ್ ಗಳು ಅಂದ್ರೆ ಅವರ ಮನೆ ಕೆಲಸ ಮಾಡೋರು ಅಂದುಕೊಂಡುಬಿಟ್ಟಿದ್ದಾರೆ. ಅವರಿಗೆ ಬೆಲೆ ಇಲ್ಲ ಎಂದು ಅಂಜಲಿ ಶರ್ಮ ಎಂಬುವರು ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದ್ದಾರೆ.

   ಹಿಂದುಗಳಿಗೆ ಯಾಕೆ ಕೊಡಲ್ಲ

   'ಮುಸ್ಲಿಂ ರಿಗೆ ಇದ್ ಮೀಲಾದ್ ಮೆರವಣಿಗೆ ಅವಕಾಶ ಇದ್ರೆ ಹಿಂದುಗಳಿಗೆ ಯಾಕೆ ಕೊಡಲ್ಲ'...ಇದು ಮುಸ್ಲಿಂ ದೇಶನ ಹಿಂದು ದೇಶನಾ? ಎಂದು ದಾಮೋದರ್ ದೇವಾಡಿಗ ಎನ್ನುವರು ಪ್ರಶ್ನಿಸಿದ್ದಾರೆ

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Mysuru BJP MP Pratap Simha slammed SP Ravi D. Channannavar for stoped Hanuman Jayanthi celebrations in Hunsur, Mysuru district on Sunday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ