ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಿಮಿನಲ್ ಕೇಸ್, ಡಿ.4 ಹುಣಸೂರು ಬಂದ್

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಡಿಸೆಂಬರ್ 3 : ನಿಷೇಧಾಜ್ಞೆ ಮಧ್ಯೆಯೂ ಹನುಮ ಜಯಂತಿ ಮೆರವಣಿಗೆಗೆ ಮುಂದಾದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಭಾನುವಾರ ತಡೆದಿದ್ದು, ಮೆರವಣಿಗೆಗೆ ಹೊರಡುವ ಮುನ್ನವೇ ಭಕ್ತರು ಹಾಗೂ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಲಾಗಿದೆ.

ಮೈಸೂರಿನಲ್ಲಿ ಹಿಂದೂ ಧರ್ಮದ ಅಗ್ಗಳಿಕೆ ಕೊಂಡಾಡಿದ ಅಡ್ವಾಣಿಮೈಸೂರಿನಲ್ಲಿ ಹಿಂದೂ ಧರ್ಮದ ಅಗ್ಗಳಿಕೆ ಕೊಂಡಾಡಿದ ಅಡ್ವಾಣಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ, ಹನುಮ ಭಕ್ತರನ್ನು ವಶಕ್ಕೆ ಪಡೆಯಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹನುಮ ಜಯಂತಿಯ ಮೆರವಣಿಗೆಗೆ ಸಿದ್ಧವಾಗಿದ್ದ ಐವತ್ತಕ್ಕೂ ಅಧಿಕ ಭಕ್ತರನ್ನು ಕೂಡ ಬಂಧಿಸಲಾಗಿದೆ.

ಚಾನೆಲ್ ಗಳ ಟಿ ಆರ್ ಪಿ ದಾಹದ ವಿರುದ್ಧ ಪ್ರತಾಪ್ ಸಿಂಹ ಗರ್ಜನೆ!ಚಾನೆಲ್ ಗಳ ಟಿ ಆರ್ ಪಿ ದಾಹದ ವಿರುದ್ಧ ಪ್ರತಾಪ್ ಸಿಂಹ ಗರ್ಜನೆ!

ಇದರಿಂದ ಆಕ್ರೋಶಗೊಂಡ ಹನುಮ ಭಕ್ತರು, ಮೈಸೂರಿನ ಟೌನ್ ಹಾಲ್ ಬಳಿ ಮೆರವಣಿಗೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಆಗ ಪೊಲೀಸರು ನಡೆಸಿದ ಮನವೊಲಿಸುವ ಪ್ರಯತ್ನ ವಿಫಲವಾಗಿದೆ. ಪೊಲೀಸರ ತಂತ್ರವನ್ನು ವಿಫಲಗೊಳಿಸಲು ಪ್ರತಾಪ್ ಸಿಂಹ ಅತ್ಯಂತ ವೇಗದಿಂದ ಕಾರನ್ನು ಪೊಲೀಸರ ಬ್ಯಾರಿ ಕೇಡ್ ಮೇಲೆ ಹತ್ತಿಸಿದ್ದಾರೆ.

ಹಲವರು ಪೊಲೀಸರ ವಶಕ್ಕೆ

ಹಲವರು ಪೊಲೀಸರ ವಶಕ್ಕೆ

ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸುತ್ತಿದ್ದಂತೆ, ಪ್ರತಿಭಟನಾನಿರತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವೇಗವಾಗಿ ಕಾರು ಡ್ರೈವಿಂಗ್

ವೇಗವಾಗಿ ಕಾರು ಡ್ರೈವಿಂಗ್

ಇನ್ನು ಹನುಮಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ಬಂಧಿಸಲು ಮುಂದಾದಾಗ ವೇಗವಾಗಿ ಕಾರು ಡ್ರೈವಿಂಗ್ ಮಾಡಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದರು.

ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯ

ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯ

ಈ ವೇಳೆ ಪೊಲೀಸರು ಬಂಧಿಸಲು ಮುಂದಾದಾಗ ಸಂಸದ ಪ್ರತಾಪ್ ಸಿಂಹ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿ ತೆರಳಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗೆ ಸಣ್ಣ-ಪುಟ್ಟಗಾಯಗಳಾಗಿವೆ. ಸಂಸದ ಪ್ರತಾಪ್ ಸಿಂಹ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಮಾರ್ಗದ ವಿಚಾರ ಗೊಂದಲ

ಮಾರ್ಗದ ವಿಚಾರ ಗೊಂದಲ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ವರಿಷ್ಠಾಢಿಕಾರಿ ರವಿ ಡಿ ಚೆನ್ನಣ್ಣನವರ್, ಮುಂಜಾಗ್ರತಾ ಕ್ರಮವಾಗಿ ಸಂಸದರನ್ನು ಬಂಧಿಸಿದ್ದೇವೆ. ಮಾರ್ಗದ ವಿಚಾರವಾಗಿ ಸಣ್ಣ-ಪುಟ್ಟ ಗೊಂದಲಗಳಾಗಿತ್ತು. ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಮೆರವಣಿಗೆಗೆ ನಿರ್ಬಂಧ ಹೇರಲಾಗಿತ್ತು. ಯಾವುದೇ ತೊಂದರೆ ಇಲ್ಲ. ಜನ ಸಾಮಾನ್ಯರು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದರು.

ಹುಣಸೂರು ಬಂದ್ ಗೆ ಕರೆ

ಹುಣಸೂರು ಬಂದ್ ಗೆ ಕರೆ

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸರು ಬಂಧಿಸಿದ ಕ್ರಮ ಖಂಡಿಸಿ, ಬಿಜೆಪಿ ಯುವ ಮೋರ್ಚಾದಿಂದ ಸೋಮವಾರ (ಡಿಸೆಂಬರ್ 4) ಹುಣಸೂರು ಬಂದ್ ಗೆ ಕರೆ ನೀಡಲಾಗಿದೆ.

English summary
Lathi charge during Hanuma jayanti parade in Mysuru and MP Pratap Simha arrested by police, alleging rash driving on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X