• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ರಸ್ತೆಯಲ್ಲಿ ನರಳಾಡಿದರೂ ವೃದ್ಧೆಗೆ ಸಹಾಯ ಮಾಡದ ಜನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 04; ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಜೈನ್‌ಪೇಟೆ ಬಳಿ ಮೇ 30ರಂದು ವೃದ್ಧೆಯೊರ್ವರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಆಕೆ ರಸ್ತೆ ಬದಿ ನರಳಾಡುತ್ತಿದ್ದರೂ ಜನರು ಆಸ್ಪತ್ರೆ ಗೆ ಸೇರಿಸದೆ, ನೋಡಿಯೂ ನೋಡದ ರೀತಿ ವರ್ತಿಸಿದ್ದಾರೆ.

ಜೈನ್ ಪೇಟೆ ನಿವಾಸಿ ಸುಮಾರು 80 ವರ್ಷದ ವೃದ್ಧೆ ಗುಲಾಬಿ ತಿರುವು ರಸ್ತೆ ಬದಿ ನಿಂತಿದ್ದ ವೇಳೆ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗುಲಾಬಿ ಕುಸಿದು ಬಿದ್ದು ನರಳಾಡುತ್ತಿದ್ದರೂ ಆಟೋ ರಿಕ್ಷಾ ಚಾಲಕ ಪರಾರಿಯಾಗಿದ್ದಾನೆ.

 ರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿ ರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿ

ಆ ನಂತರ ಹಲವು ವಾಹನ ಸವಾರರು ಅದೇ ರಸ್ತೆಯಲ್ಲಿ ಸಂಚರಿಸಿದರೂ ವೃದ್ಧೆಯ ನರಳಾಟ ಮಾತ್ರ ನೋಡಿ ಮುಂದೆ ಸಾಗಿದ್ದಾರೆ. ಯಾರೂ ಸಹಾಯಕ್ಕೆ ಬಂದಿಲ್ಲ. ಸುಮಾರು 20 ನಿಮಿಷ ಯಾರೂ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತಿದ್ದಾರೆ.

ಉಡುಪಿ; ಬಹುಬೇಡಿಕೆಯ ರಸ್ತೆ ಯೋಜನೆಗೆ ಕೇಂದ್ರದ ಒಪ್ಪಿಗೆ ಉಡುಪಿ; ಬಹುಬೇಡಿಕೆಯ ರಸ್ತೆ ಯೋಜನೆಗೆ ಕೇಂದ್ರದ ಒಪ್ಪಿಗೆ

ಬಳಿಕ ಅದೇ ದಾರಿಯಲ್ಲಿ ಬಂದ ಮೂಡಬಿದಿರೆ ನಿವಾಸಿ ಸಂಪತ್ ಪೂಜಾರಿ ವೃದ್ಧೆಯನ್ನು ನೋಡಿ ತಕ್ಷಣ ತನ್ನ ವಾಹನದಲ್ಲಿ ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಆ ಬಳಿಕ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ವಾರಿಯರ್‌ಗೆ ಅಪಘಾತ: ಮಾನವೀಯತೆ ಮರೆತ ತರೀಕೆರೆ ಶಾಸಕಕೊರೊನಾ ವಾರಿಯರ್‌ಗೆ ಅಪಘಾತ: ಮಾನವೀಯತೆ ಮರೆತ ತರೀಕೆರೆ ಶಾಸಕ

ಅಪಘಾತದಲ್ಲಿ ಗಾಯಗೊಂಡಿರುವ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಜನರು ಮಾತ್ರ ಮನುಷ್ಯತ್ವ ಸತ್ತ ರೀತಿ ವರ್ತಿಸಿರೋದು ದುರಂತವಾಗಿದೆ.

English summary
In Dakshina Kannada district Moodbidre old women injured in road accident. People don't come forward to help her. Ater 20 minute she admitted to hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X