ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ನಾಡು-ನುಡಿ-ಸಂಸ್ಕೃತಿಯ ಮೇರು ಹಬ್ಬ ಆಳ್ವಾಸ್ ನುಡಿಸಿರಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಮೂಡುಬಿದಿರೆ, ನವೆಂಬರ್, 06 : ನಮ್ಮ ನಾಡಿನ ಮೇರು ಕಲಾಪ್ರಕಾರಗಳಾದ ಯಕ್ಷಗಾನ, ಭರತನಾಟ್ಯ, ಹಿಂದೂಸ್ತಾನಿ-ಕರ್ನಾಟಕ-ಸುಗಮ ಸಂಗೀತ, ಸಾಹಿತ್ಯದ ಸೊಗಡು ಈ ಎಲ್ಲವನ್ನು ಒಂದೇ ವೇದಿಕೆಯಲ್ಲಿ ಕಾಣುವ ಸಾಂಸ್ಕೃತಿಕ ವೈಭವಕ್ಕೊಂದು ಪರ್ಯಾಯ ಹೆಸರು 'ಆಳ್ವಾಸ್ ನುಡಿಸಿರಿ' ನವೆಂಬರ್ ನಲ್ಲಿ ಆಯೋಜನೆಗೊಂಡಿದೆ.

ಕನ್ನಡ ನಾಡು-ನುಡಿ-ಸಂಸ್ಕೃತಿಯ ದ್ಯೋತಕವಾದ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯ 'ಆಳ್ವಾಸ್ ನುಡಿಸಿರಿ-2015' ನವೆಂಬರ್ 26 ರಿಂದ 29ರ ವರೆಗೆ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಸಾಂಸ್ಕೃತಿಕ ವೈಭವದ ಆಳ್ವಾಸ್ ನುಡಿಸಿರಿ ಉದ್ಘಾಟನೆ ನವೆಂಬರ್ 26ರ ಗುರುವಾರದಂದು ನಡೆಯಲಿದೆ. ಉಳಿದಂತೆ 27,28,29ರಂದು 'ಕರ್ನಾಟಕ: ಹೊಸತನದ ಹುಡುಕಾಟ' ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ವಿವಿಧ ಗೋಷ್ಠಿಗಳು, ಸಂಸ್ಮರಣೆ, ಕವಿಸಮಯ-ಕವಿನಮನ, ವಿಶೇಷ ಉಪನ್ಯಾಸಗಳು ರತ್ನಾಕರವರ್ಣಿ ವೇದಿಕೆಯಲ್ಲಿ ಜರುಗಲಿದೆ. 29 ರಂದು 3 ಗಂಟೆಗೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ.[ವಿಶ್ವ ನುಡಿಸಿರಿ : ಡಾ. ಮೋಹನ್ ಆಳ್ವ ಸಂದರ್ಶನ]

Moodbidri Alvas Nudisiri–2015 which is going to be held during 26th to 29th of November

ಆಳ್ವಾಸ್ ನುಡಿಸಿರಿ-2015ರ ಅಧ್ಯಕ್ಷರು : ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಜನಿಸಿದ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾದ ಇವರು, ರೀಡರ್, ಪ್ರೊಫೆಸರ್, ವಿಭಾಗ ನಿರ್ದೇಶಕ, ಕಲಾವಿಭಾಗದ ಡೀನ್ ಆಗಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಿರಿಯ ಪ್ರಾಧ್ಯಾಪಕರು ಹಾಗೂ ಈ ಶತಮಾನದ ಹಿರಿಯ ವಿದ್ವಾಂಸರು ಕೂಡ ಹೌದು.

ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥ ಸಂಪಾದನೆ, ನಿಘಂಟು ಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಮೇರು ಪಾಂಡಿತ್ಯ ಪಡೆದುಕೊಂಡಿದ್ದಾರೆ. ಕನ್ನಡ ಸಂಶೋಧನಾ ಕ್ಷೇತ್ರದ ಗಣ್ಯ ಹಾಗೂ ಚಿರಸ್ಮರಣೀಯ ಹೆಸರುಗಳಲ್ಲಿ ವೆಂಕಟಾಚಲ ಶಾಸ್ತ್ರಿಯವರ ಹೆಸರು ಅಗ್ರಗಣ್ಯವಾಗಿದೆ.

ಆಳ್ವಾಸ್ ನುಡಿಸಿರಿ 2015ರ ಉದ್ಘಾಟಕರಾಗಿ ಡಾ.ವೀಣಾ ಶಾಂತೇಶ್ವರ

ಡಾ.ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ 39 ವರ್ಷಗಳ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದಾರೆ. ಒಂಬತ್ತು ವರ್ಷಗಳ ಕಾಲ ಪ್ರಾಚಾರ್ಯರಾಗಿದ್ದರು. ಕಥೆ, ಕಾದಂಬರಿ, ಅನುವಾದ ಹೀಗೆ ಸಾಹಿತ್ಯದ ವಿಭಿನ್ನ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡ ಇವರು ಉತ್ತಮ ಸಂಘಟಕರು ಹಾಗೂ ಆಡಳಿತಗಾರರು ಹೌದು. ಮುಖ್ಯವಾಗಿ ಸ್ತ್ರೀ ಸಂವೇದನಾಶೀಲ ಬರಹಗಾರರಲ್ಲಿ ಇವರು ಕೂಡ ಮುಖ್ಯ ವೇದಿಕೆಯಲ್ಲಿದ್ದಾರೆ.

ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾತ್ರ ನಾಲ್ಕು ದಿನಗಳ ಕಾಲ ಉಚಿತ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಉಳಿದವರು 100 ರೂ ಶುಲ್ಕ ಪಾವತಿಸಬೇಕಾಗುತ್ತದೆ. ನಾಡಿನ ಪ್ರಸಿದ್ಧ ಸಾಹಿತಿ, ವಿದ್ವಾಂಸರು, ಕವಿಗಳು ಸೇರಿದಂತೆ ಸುಮಾರು 20,000ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಡಾ. ಪದ್ಮನಾಭ್ ಶೆಣೈ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, [email protected]/ 8971161797
ಡಾ. ಮೌಲ್ಯ ಜೀವನ್ ರಾಮ್, ಮುಖ್ಯಸ್ಥರು, ಸಮೂಹ ಸಂವಹನ ವಿಭಾಗ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ - 9480341338
ಶ್ರೀನಿವಾಸ್ ಪೆಜಥಯ್ಯಾ, ಸಹ ಪ್ರಾಧ್ಯಾಪಕರು, ಸಮೂಹ ಸಂವಹನ ವಿಭಾಗ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ - 9743703596

ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದಿದ್ದರೆ ನಿಮ್ಮ ಮಾಹಿತಿಗಳನ್ನು [email protected] ಮತ್ತು www.alvasnudisiri.com ಕಳುಹಿಸಿ.

English summary
Moodbidri Alva’s Nudisiri–2015 which is going to be held during 26th to 29th of November. It is very high cultural event of Kernataka. This nudisiri inagurate by Dr. Veena Shanteshwar, and President by Dr. T.V venkatachala sastry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X