ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಿಂದ ಮಂಗಳನ ಅಂಗಳಕ್ಕೆ ಉಪಗ್ರಹ!

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಫೆ.16: ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಶನಿವಾರ ಆರಂಭವಾದ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ವಿವಿಧ ಹೂವುಗಳು ಸೌಂದರ್ಯಾಸಕ್ತರನ್ನು ಕೈ ಬೀಸಿ ಕರೆಯುತ್ತಿವೆ.

ಹೂವಿನಗಿಡ, ತರಕಾರಿ, ಹಣ್ಣುಹಂಪಲುಗಳ ಗಿಡಗಳ ಸಾಲು ಅಂಗಡಿಗಳು, ತರಕಾರಿ ತೋಟದಲ್ಲಿ ತೊನೆದಾಡುತ್ತಿರುವ ಸೋರೆ, ಹಾಗಲಕಾಯಿ, ಮೂಲಂಗಿ,ಬೀಟ್‌ರೂಟ್ ಗಿಡಗಳು, ಹರಿವೆ,ಕುಂಬಳ ಬದನೆ ಹೀಗೆ ತರೇವಾರಿ ತರಕಾರಿಗಳು ಕೃಷಿ ಪ್ರಿಯರ ಮನ ತಣಿಸಿದವು.[ಬೆಂಗಳೂರು ಲಾಲ್ ಬಾಗ್ ಕೆಂಪುಕೋಟೆ ನೋಡಿ]

ಭಾನುವಾರ ಕುಟುಂಬ ಸಮೇತರಾಗಿ ಬಂದ ಅನೇರು ನೋಡಿ ಖುಷಿಪಟ್ಟರು. ಫೆ.17ರವರೆಗೆ ಪ್ರದರ್ಶನ ನಡೆಯಲಿದ್ದು, ದೊಡ್ಡವರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಶುಲ್ಕವಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 15 ಸಾವಿರ ಡಚ್ ಗುಲಾಬಿಗಳಿಂದ ಮೂಡಿಬಂದಿರುವ ಮಂಗಳಯಾನದ ಪ್ರತಿಕೃತಿ, ವೈವಿಧ್ಯಮಯ ತರಕಾರಿ ಕೆತ್ತನೆ ಹಾಗೂ ಹೂಗಳು ಜನಾಕರ್ಷಣೆ ಕೇಂದ್ರಬಿಂದುವಾಗಿವೆ.

ಮಂಗಳಯಾನ

ಮಂಗಳಯಾನ

ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಜನರನ್ನು ಸೆಳೆಯುತ್ತಿರುವ ಮಂಗಳಯಾನದ ಪ್ರತಿಕೃತಿ.

ಅಂಗಡಿಗಳು

ಅಂಗಡಿಗಳು

ರೈತರಿಗೆ ಅಗತ್ಯ ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಸಾರುವ ಅಂಗಡಿಗಳ ಸಾಲು.

ಆನೆ ಬಂತೊಂದಾನೆ

ಆನೆ ಬಂತೊಂದಾನೆ

ಉದ್ಯಾನದಲ್ಲಿ ನಿರ್ಮಾಣವಾಗಿರುವ ಆನೆ ಪ್ರತಿಕೃತಿ ಗಮನ ಸೆಳೆಯುತ್ತಿದೆ.

ತರಕಾರಿ ಕೆತ್ತನೆ

ತರಕಾರಿ ಕೆತ್ತನೆ

ಹಣ್ಣು, ಹೂವು ಮತ್ತು ತರಕಾರಿ ಕೆತ್ತನೆಗಳು ಆಕರ್ಷಣೆಯ ಕೇಂದ್ರ ಬಿಂದು.

ಬಣ್ಣದ ಗಿಡಗಳು

ಬಣ್ಣದ ಗಿಡಗಳು

ಅಂದವಾಗಿ ಜೋಡಿಸಿಟ್ಟಿರುವ ಬಣ್ಣದ ಗಿಡಗಳು.

ಹೂವುಗಳ ಲೋಕ

ಹೂವುಗಳ ಲೋಕ

ಚೆಂಡು ಹೂವುಗಳ ಅಂದವನ್ನು ನೋಡಿಯೇ ಸವಿಯಬೇಕು.

English summary
Mangaluru: Vegetable and fruit carvings and a model of Mars Orbiter Mission - made from thousands of roses - were a huge draw at the flower and horticultural exhibition that began on Saturday at Kadri Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X