ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ‌ಸಹಚರರ ಬಂಧನ

ಭೂಗತ ಪಾತಕಿ ವಿಕ್ಕಿ ಸಹಚರ ಆಕಾಶಭವನ ಶರಣ್ ಹಾಗೂ ಗಾಂಜಾ ಮಾರಟಗಾರ ತಣ್ಣಿ ರಹೀಮ್ ಎಂಬುವವರು ಬಂಧಿಸಿದ್ದು ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 11: ಮಂಗಳೂರಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಇಬ್ಬರು ಸಹಚರರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಭೂಗತ ಪಾತಕಿ ವಿಕ್ಕಿ ಸಹಚರ ಆಕಾಶಭವನ ಶರಣ್ ಹಾಗೂ ಗಾಂಜಾ ಮಾರಟಗಾರ ತಣ್ಣಿ ರಹೀಮ್ ಎಂಬುವವರು ಬಂಧಿತರು. ಸಮಾಜಘಾತುಕ ಚುಟುವಟಿಕೆಯಲ್ಲಿ ತೊಡಗಿದ್ದನೆಂದು ಆಕಾಶ ಭವನ್ ಚರಣ್ ಹಾಗೂ ಗಾಂಜಾ ಮಾರಟದಲ್ಲಿ ತಣ್ಣಿ ರಹೀಮ್ ಅನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ. ಆಕಾಶ್ ಭವನ್ ವಿರುದ್ಧ ಮಂಗಳೂರಿನ ವಿವಿಧ ಠಾಣೆಗಳಲ್ಲಿ 14 ಪ್ರಕರಣಗಳಿವೆ. ತಣ್ಣಿ ರಹೀಮ್ ವಿರುದ್ಧ 8 ಪ್ರಕರಣ ದಾಖಲಾಗಿದೆ.[ಭಾರತಕ್ಕೆ ಬಂದ ಭೂಗತ ಪಾತಕಿ ಛೋಟಾ ರಾಜನ್]

Mangalore commissioner arrested two man with link in Under world

ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇವರನ್ನು ಬಂಧಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್ ಆದೇಶ ನೀಡಿದ್ದರು. ಮಂಗಳೂರಲ್ಲಿ ಡ್ರಗ್ ಜಾಲ ಹೆಚ್ಚಾಗುತ್ತಿದೆ ಎಂಬುದರ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲೂ ಚರ್ಚೆ ನಡೆದಿತ್ತು.

ಇನ್ನು ಮೊನ್ನೆ ತಾನೇ ಅಧಿವೇಶನದಲ್ಲಿ ಗೃಹ ಸಚಿವರು ಗೂಂಡಾ ಕಾಯ್ದೆಯಡಿಯಲ್ಲಿ ಅತ್ಯಚಾರ ಮತ್ತು ಅನೇಕ ಕೃತ್ಯಗಳಲ್ಲಿ ಭಾಗವಹಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದರು.

ಬಸ್ - ಬೈಕ್ ಡಿಕ್ಕಿ ಚಿತ್ರಕಲಾ ಶಿಕ್ಷಕರಿಗೆ ಗಂಭೀರ ಗಾಯ

ಉಡುಪಿ : ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಖ್ಯಾತ ಚಿತ್ರಕಲಾ ಶಿಕ್ಷಕರೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹೆಮ್ಮಾಡಿಯ ಬೈಪಾಸ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ.

Mangalore commissioner arrested two man with link in Under world

ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ, ಹೆಮ್ಮಾಡಿ ನಿವಾಸಿ ಭೋಜು ಹಾಂಡ(52) ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಘಟನೆ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಅರ್ಪಿತಾ(11) ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ರಕಲೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ಭೋಜು ಹಾಂಡರು, ತಮ್ಮ ಬಿಡುವಿನ ವೇಳೆಯಲ್ಲಿ ಸ್ಥಳೀಯ ಶಾಲಾ ಮಕ್ಕಳಿಗೆ ಚಿತ್ರಕಲೆ ಹಾಗೂ ಇನ್ನಿತರ ಪೇಪರ್ ಕ್ರಾಫ್ಟ್ ಗಳನ್ನು ಹೇಳಿಕೊಡುತ್ತಿದ್ದರು. ಕುಂದಾಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Mangalore commissioner arrested two man with link in Under world. The two had known follower of underworld don Vicky said police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X